Asianet Suvarna News Asianet Suvarna News

ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ; ಮಹಾನವಮಿಗೆ ಊರಿಗೆ ಬಂದವನ ರುಂಡ ಚೆಂಡಾಡಿದ ಹಂತಕರು!

ಹಳೇ ವೈಷಮ್ಯದ ಹಿನ್ನೆಲೆ ಯುವಕನೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಅಪ್ಜಲಪುರ ತಾಲೂಕಿನ ಸಿಧನೂರು ಗ್ರಾಮದಲ್ಲಿ ನಡೆದಿದೆ.

An old feud: the barbaric killing of a man at kalaburgi district rav
Author
First Published Oct 21, 2023, 10:58 AM IST

ಕಲಬುರಗಿ (ಅ.21): ಹಳೇ ವೈಷಮ್ಯದ ಹಿನ್ನೆಲೆ ಯುವಕನೋರ್ವನನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಅಪ್ಜಲಪುರ ತಾಲೂಕಿನ ಸಿಧನೂರು ಗ್ರಾಮದಲ್ಲಿ ನಡೆದಿದೆ.

ಬಲಭೀಮ ತಂದೆ ಕಾಡಪ್ಪ ಸಗರ (23) ಕೊಲೆಯಾದ ಯುವಕ. ಜಮೀನು ವಿಚಾರದ ಕೇಸಿನಲ್ಲಿ ಜೈಲುಪಾಲಾಗಿದ್ದ ಬಲಭೀಮ. ಇತ್ತಿಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡು ಕಲಬುರಗಿ ನಗರದಲ್ಲಿ ವಾಸವಾಗಿದ್ದ. ಆದರೆ ಹಿಂದಿನ ವೈಷ್ಯಮ್ಯದಿಂದ ಹಗೆ ಸಾಧಿಸುತ್ತಲೇ ಇದ್ದ ಹಂತಕರು. ಬಲಭೀಮ ಜೈಲಿನಿಂದ ಹೊರಬಂದ ವಿಚಾರ ತಿಳಿಯುತ್ತಿದ್ದಂತೆ ಮುಗಿಸಲು ಸಂಚು ಮಾಡಿದ್ದರು.

ಕೊನೆಗೂ ಕೆಎಸ್ ಭಗವಾನ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು!

ಮಹಾನವಮಿ ಹಬ್ಬದ ನಿಮಿತ್ಯ ಊರಿಗೆ ಮರಳಿದ್ದ ಬಲಭೀಮ. ಊರಿಗೆ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಕಳೆದ ರಾತ್ರಿ ತಲವಾರ ಹಾಗೂ ಕೂಡಲಿಯಿಂದ ಕೊಚ್ಚಿ ರುಂಡವನ್ನು ಕತ್ತರಿಸಿ ಭಯಾನಕವಾಗಿ ಹತ್ಯೆಗೈದಿರುವ ಹಂತಕರು. ಸದ್ಯ ಈ ಘಟನೆ ಸಂಬಂಧ ರೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದಾದ ಪೊಲೀಸರು.

ಹತ್ಯೆ ಮಾಡಿ ಕಾಣೆಯಾಗಿದ್ದಾನೆಂದು ಕತೆ ಕಟ್ಟಿ ಸಿಕ್ಕಿಬಿದ್ದ ಕೊಲೆಗಡುಕರು!

ಬೆಳಗಾವಿ: ಮಹಿಳೆಯನ್ನು ಮಾಡಿ ಕಾಣೆಯಾದ ಕಥೆ ಕಟ್ಟಿದ್ದ ಪ್ರಕರಣವನ್ನು ಬೇಧಿಸಿರುವ ಮೂಡಲಗಿ ಪೊಲೀಸರು ಪ್ರಕರಣ ಸಂಬಂಧಿಸಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವಲೀಲಾ ವಿಠ್ಠ ಲ ಬಂಗಿ ( 32) ಹತ್ಯೆಗೀಡಾಗಿದ್ದ ಮಹಿಳೆ. ಈ ಮಹಿಳೆ ಕೊಲೆಯಾದ ಕಥೆ ಕಟ್ಟಿದ ಕೊಲೆಗಡುಕರು ಮೂರು ವರ್ಷಗಳ ಬಳಿಕ ಸೆರೆಯಾಗಿದ್ದಾರೆ.

ವಿಠ್ಠಲ್ ಲಕ್ಷಣ ಬಂಗಿ, ಸಿದಗೊಂಡ ಕಂಬಳಿ, ಲಕ್ಕಪ್ಪ ಕಂಬಳಿ, ಬಸವರಾಜ್ ಕಬ್ಬೂರೆ, ಅಶೋಕ್ ಮೊಕಾಶಿ ಕೊಲೆ ಆರೋಪಿಗಳು. ವಿಠ್ಠಲ ಬಂಗಿ ಕೊಲೆಯಾದ ಶಿವಲೀಲಾ ಪತಿ. ಲಕ್ಕಪ್ಪ ಕಂಬಳಿ, ಸಿದಗೊಂಡ ಕಂಬಳಿ ಕೊಲೆಯಾದ ಶಿವಲೀಲಾ ಸಹೋದರರು. ಶಿವಲೀಲಾ ನಡೆತೆ ಸರಿಯಿಲ್ಲ ಎಂಬ ಕಾರಣಕ್ಕೆ ಆಕೆಯ ಪತಿ ಮತ್ತು ಸಹೋದರರೇ 2020 ಜನವರಿಯಲ್ಲಿ ಕೊಲೆ ಮಾಡಿ ಸವದತ್ತಿ ತಾಲೂಕಿನ ಹಿರೇಬುದುನೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವ ಬಿಸಾಕಿದ್ದರು.

ಗಂಡನ ಹೆಣ ಹಾಕಲು ಸಾಥ್ ಕೊಟ್ಟಿದ್ದಳು ತಂಗಿ..! ಹೆಣ ಹಾಕಿ ಹೇಗೆಲ್ಲಾ ನಾಟಕ ಮಾಡಿದ್ಲು ಗೊತ್ತಾ..?

 

ಕೊಲೆ ಮಾಡಿ ಏನೂ ಅರಿಯದಂತೆ ಶೀವಲೀಲಾ ಸಹೋದರರು ಮತ್ತು ಪತಿ ಇದ್ದರು. ಮೂರುವರ್ಷಗಳ ಬಳಿಕ ಶಿವಲೀಲಾ ತಲೆ ಬುರುಡೆ ಮಾತ್ರ ಪತ್ತೆಯಾಗಿದೆ. ಶಿವಲೀಲಾ ರಾಯಬಾಗದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.ಆಕೆಯಕೊಲೆ ಮಾಡಿ ಕ್ರೂಸರ್‌ ವಾಹನದಲ್ಲಿ ಹೆಣ ಸಾಗಿಸಿದ್ದರು. ಮೂಡಲಗಿ ತಾಲೂಕಿನ ಜೊಕ್ಕಾನಟ್ಟಿ ಗ್ರಾಮ ಶಿವಲೀಲಾತವರೂರು. ಸಹೋದರ ಲಕ್ಕಪ್ಪ ಕಂಬಳಿ ತನ್ನ ಸಹೋದರಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ಮೂಡಲಗಿ ಪೊಲೀಸ್‌ ಠಾಣೆಗೆ ನೀಡಿದ್ದ. ಸಂಶಯಗೊಂಡ ಪೊಲೀಸರು ಲಕ್ಕಪ್ಪನನ್ನು ವಿಚಾರಿಸಿದ ವೇಳೆ ಕೊಲೆ ಮಾಡಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios