ಡೇಟಿಂಗ್ ಆ್ಯಪ್ ಮೂಲಕ ಹಿಂದೂ ಸೋಗಲ್ಲಿ ಯುವತಿಗೆ ವಂಚಿಸಿದ್ದ ಮುಸ್ಲಿಂ ಆರೋಪಿ ಬಂಧನ
ಡೇಟಿಂಗ್ ಆ್ಯಪ್‌ನಲ್ಲಿ ಹಿಂದೂ ಯುವಕನ ಸೋಗಿನಲ್ಲಿ ಹಿಂದೂ ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದ ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜೂ.11): ಡೇಟಿಂಗ್ ಆ್ಯಪ್‌ನಲ್ಲಿ ಹಿಂದೂ ಯುವಕನ ಸೋಗಿನಲ್ಲಿ ಹಿಂದೂ ಯುವತಿಯನ್ನು ಪರಿಚಯಿಸಿಕೊಂಡು ಬಳಿಕ ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದ ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ನಿವಾಸಿ ಮುದಾಸೀರ್ ಅಲಿಯಾಸ್ ಅರವಿಂದ್ ಬಂಧಿತನಾಗಿದ್ದು, ಕೆಲ ದಿನಗಳ ಹಿಂದೆ ಹಿಂದೂ ಯುವತಿಗೆ ಆತ ವಂಚಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಗಾಗ್ಗೆ ಬೈಯುತ್ತಿದ್ದ ಅಜ್ಜಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಮೊಮ್ಮಗನ ಬಂಧನ
ಲವ್, ಸೆಕ್ಸ್, ದೋಖಾ: ನಗರದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗೆ ಸಲಹೆಗಾರನಾಗಿದ್ದ ಜಮ್ಮು-ಕಾಶ್ಮೀರ ಮೂಲದ ಮುದಾಸೀರ್, ಬಾಗಲೂರು ಸಮೀಪ ತನ್ನ ಪತ್ನಿ ಹಾಗೂ ಮಕ್ಕಳ ಜತೆ ನೆಲೆಸಿದ್ದ. ರಷ್ಯಾದಲ್ಲಿ ಆತ ಎಂಬಿಎ ವ್ಯಾಸಂಗ ಮಾಡಿದ್ದ. ಆರೋಪಿಗೆ ಮೊದಲಿನಿಂದ ಮಹಿಳೆಯರ ಖಯಾಲಿ ಇತ್ತು. ಹೀಗಾಗಿ ಡೇಟಿಂಗ್ ಆ್ಯಪ್‌ನಲ್ಲಿ ಯುವತಿಯರನ್ನು ಸೆಳೆದು ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದನು. ಎಂಟು ತಿಂಗಳ ಹಿಂದೆ ‘ಅರವಿಂದ್’ ಹೆಸರಿನಲ್ಲಿ ಹಿಂದೂ ಯುವತಿ ಪರಿಚಯ ಮಾಡಿಕೊಂಡಿದ್ದ.
ಪರಿಚಯವಾದ ಯುವತಿ ಜತೆ ಮಾತುಕತೆ ಶುರು ಮಾಡಿದ ಆರೋಪಿ, ಕೊನೆಗೆ ಮದುವೆ ಆಗುವುದಾಗಿ ನಂಬಿಸಿ ಆಕೆ ಜತೆ ಆತ್ಮೀಯ ಕ್ಷಣ ಕಳೆದು ವಂಚಿಸಿದ್ದ. ಇದಾದ ಬಳಿಕ ತನ್ನ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಸಂತ್ರಸ್ತೆಯಿಂದ ಸಾಲದ ರೂಪದಲ್ಲಿ .1 ಲಕ್ಷ ಹಣವನ್ನು ಸಹ ಮುದಾಸೀರ್ ವಸೂಲಿ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮನೆಗಳ್ಳತನಕ್ಕೆಂದೆ ತಮಿಳುನಾಡಿನಿಂದ ಬರುವ ಅಂತಾರಾಜ್ಯ ಕಳ್ಳನ ಬಂಧನ
ಹಣ ಸಂದಾಯವಾದ ಬಳಿಕ ಆಕೆಯಿಂದ ಆರೋಪಿ ಸಂಪರ್ಕ ಕಡಿತಗೊಳಿಸಿದ್ದ. ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಆಗ ತಾನು ಮೋಸ ಹೋಗಿರುವುದು ಆಕೆಗೆ ಅರಿವಾಗಿದೆ. ಬಳಿಕ ಅಮೃತಹಳ್ಳಿ ಠಾಣೆಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.