ಬೆಂಗಳೂರು(ಜ. 08)  ಜೀವ ಉಳಿಸುವ ಅಂಬ್ಯುಲೆನ್ಸ್ ನಿಂದಲೇ ಇಬ್ಬರ ಜೀವನ ಅಂತ್ಯವಾಗಿದೆ. ಇಬ್ರಾಹಿಂ ಖಲೀಲ್ 30, ಮನ್ಸೂರ್ 28, ಆಂಬ್ಯುಲೆನ್ಸ್ ಡ್ರೈವರ್ ಅಜಾಗರೂಕತೆಗೆ ಬಲಿಯಾಗಿದ್ದಾರೆ.

ಅಶೋಕ್ ನಗರ ಟ್ರಾಫಿಕ್ ಪೊಲೀಸರು ಆಂಬುಲೆನ್ಸ್ ಚಾಲಕ  ಅಭಿಷೇಕ್ 27 ಎಂಬಾತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಶ್ರೀನಿವಾಗಿಲು ಜಂಕ್ಷನ್ ಬಳಿ ಮಂಗಳವಾರ ರಾತ್ರಿ 9 ಗಂಟೆಗೆ ದುರ್ಘಟನೆ ನಡೆದಿದೆ.

ಆ ಒಂದು ಪತ್ರದಿಂದ ಬಯಲಾದ ಸುರಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

ಓಲ್ಡ್ ಏರ್ ಪೋರ್ಟ್ ರಸ್ತೆಯ ನಾಗವಾರ ಕಡೆ ಹೊರಟಿದ್ದ ಇಬ್ಬರು ಯುವಕರು ಚಾಲಕನ ಅಜಾಗರೂಕತೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಯುವಕು  ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು.

ಈ ವೇಳೆ ಅತಿವೇಗವಾಗಿ ಒನ್ ವೇ ನಲ್ಲಿ ಬಂದ ಆಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕರನ್ನ ಸ್ಥಳೀಯ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದರು.