Asianet Suvarna News Asianet Suvarna News

ಬೆಂಗಳೂರು: ಫ್ರೀ ಐಫೋನ್‌ಗಾಗಿ ಅಮೆಜಾನ್ ವೆಬ್‌ಸೈಟೇ ಹ್ಯಾಕ್..!

ಅಮೆಜಾನ್‌ ಕಂಪನಿಯ ಆ್ಯಪ್‌ ಅನ್ನು ಹ್ಯಾಕ್‌ ಮಾಡುವು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿದೆ. ಹೀಗಾಗಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಗೆ ಅಮೆಜಾನ್‌ ಕಂಪನಿಯೊಳಗೆ ಕೆಲವರು ನೆರವು ನೀಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Amazon Website Hack for Free iPhone in Bengaluru grg
Author
First Published Aug 18, 2023, 4:43 AM IST

ಬೆಂಗಳೂರು(ಆ.18): ಅಮೆಜಾನ್‌ ಕಂಪನಿಗೆ ಗ್ರಾಹಕರ ಸೋಗಿನಲ್ಲಿ ದುಬಾರಿ ಮೌಲ್ಯದ ಮೊಬೈಲ್‌ಗಳನ್ನು ಖರೀದಿಸಿ ಬಳಿಕ ಮರಳಿಸುವಂತೆ ವಂಚನೆ ಎಸಗುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಜಾಲವನ್ನು ಪತ್ತೆ ಹಚ್ಚಿದ ಯಶವಂತಪುರ ಠಾಣೆ ಪೊಲೀಸರು, ಈ ಸಂಬಂಧ ನಗರದ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.

ಮತ್ತಿಕೆರೆ ನಿವಾಸಿ ಚಿರಾಗ್‌ ಗುಪ್ತಾ ಬಂಧಿತನಾಗಿದ್ದು, ಆರೋಪಿಯಿಂದ ಬ್ಯಾಂಕ್‌ ಖಾತೆಯಲ್ಲಿ 30 ಲಕ್ಷ ರು. ನಗದು, 20.34 ಲಕ್ಷ ರು ಮೌಲ್ಯದ 16 ಆ್ಯಪಲ್‌ ಐಫೋನ್‌, ಮ್ಯಾಕ್‌ಬುಕ್‌, ಕಂಪ್ಯೂಟರ್‌ ಡೆಸ್‌್ಕಟಾಪ್‌, ಗೇಮಿಂಗ್‌ ಲ್ಯಾಪ್‌ಟಾಪ್‌, ಏರ್‌ಪಾಡ್‌್ಸ ಹಾಗೂ 2.5 ಲಕ್ಷ ರು. ನಗದು ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಗ್ರಾಹಕರ ಹೆಸರಿನಲ್ಲಿ ಕಂಪನಿಗೆ ವಂಚಿಸುತ್ತಿದ್ದಾರೆÜ ಎಂದು ಆರೋಪಿಸಿ ಅಮೆಜಾನ್‌ ಕಂಪನಿ ಪ್ರತಿನಿಧಿ ನೀಡಿದ ದೂರಿನ ಮೇರೆಗೆ ಯಶವಂತಪುರ ಪೊಲೀಸರು ತನಿಖೆ ನಡೆಸಿ ಮೋಸ ಜಾಲ ಬೇಧಿಸಿದ್ದಾರೆ.

ದಕ್ಷಿಣ ಕನ್ನಡ: ಪುತ್ರನ ಆತ್ಮಹತ್ಯೆ ಬೆನ್ನಲ್ಲೇ ನೊಂದು ತಂದೆಯೂ ಆತ್ಮಹತ್ಯೆ!

ಶೇ.20 ರಷ್ಟು ಕಮಿಷನ್‌: 

ನಗರದ ಖಾಸಗಿ ಎಂಜಿನಿಯರ್‌ ಕಾಲೇಜಿನಲ್ಲಿ ಓದುತ್ತಿರುವ ಮಹಾರಾಷ್ಟ್ರ ಮೂಲದ ಚಿರಾಗ್‌ ಗುಪ್ತಾ, ಮತ್ತಿಕೆರೆ ಸಮೀಪ ಪಿಜಿಯಲ್ಲಿ ನೆಲೆಸಿದ್ದ. ಕೆಲ ದಿನಗಳ ಹಿಂದೆ ಆತನಿಗೆ ಟೆಲಿಗ್ರಾಂ ಆ್ಯಪ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್‌ ಸಂಪರ್ಕವಾಗಿದೆ. ಬಳಿಕ ಚಿರಾಗ್‌ಗೆ ಹಣದಾಸೆ ತೋರಿಸಿದ ಆತ, ಅಮೆಜಾನ್‌ನಲ್ಲಿ ಗ್ರಾಹಕನ ಸೋಗಿನಲ್ಲಿ ದುಬಾರಿ ಮೌಲ್ಯದ ಐಫೋನ್‌ಗಳನ್ನು ಬುಕ್‌ ಮಾಡಿ ವಂಚಿಸುವ ಟಾಸ್‌್ಕ ನೀಡಿದ್ದ. ಇದಕ್ಕೆ ಶೇ.10 ರಿಂದ 20 ರಷ್ಟು ಕಮಿಷನ್‌ ಆಮಿಷವೊಡ್ಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹೇಗೆ ವಂಚನೆ?:

ಅಮೆಜಾನ್‌ನಲ್ಲಿ ಆನ್‌ಲೈನ್‌ ಮೂಲಕ ಐಫೋನ್‌ ಅನ್ನು ಚಿರಾಗ್‌ ಬುಕ್‌ ಮಾಡುತ್ತಿದ್ದ. ಬಳಿಕ ತನಗೆ ಮೊಬೈಲ್‌ ತಲುಪಿದ ಚಿರಾಗ್‌, ಆ ಮೊಬೈಲ್‌ ಅನ್ನು ಮರಳಿಸುವುದಾಗಿ ಅಮೆಜಾನ್‌ ಆ್ಯಪ್‌ನಲ್ಲಿ ದಾಖಲಿಸುತ್ತಿದ್ದ. ಆ ವೇಳೆ ಅಮೆಜಾನ್‌ ಆ್ಯಪ್‌ ಅನ್ನು ಹ್ಯಾಕ್‌ ಮಾಡಿ ಚಿರಾಗ್‌ನಿಂದ ಮೊಬೈಲ್‌ ಸ್ವೀಕೃತವಾಗಿದೆ ಎಂದು ಚಿರಾಗ್‌ನ ಪರಿಚಿತ ಹ್ಯಾಕರ್‌ ನಮೂದಿಸುತ್ತಿದ್ದ. ಆ ಮೊಬೈಲ್‌ ಚಿರಾಗ್‌ ಬಳಿಯೇ ಇರುತ್ತಿತ್ತು. ಅಲ್ಲದೆ ಅಮೆಜಾನ್‌ನಿಂದ ರೀಫಂಡ್‌ ಸಹ ಆಗುತ್ತಿತ್ತು. ಹೀಗೆ ಸಂಪಾದಿಸಿದ ಹಣದಲ್ಲಿ ಶೇ.20 ರಷ್ಟುಕಮಿಷನ್‌ ಚಿರಾಗ್‌ ಲಭಿಸಿದರೆ, ಇನ್ನುಳಿದ ಹಣವು ವಿದೇಶದಲ್ಲಿ ನೆಲೆಸಿರುವ ಹ್ಯಾಕರ್‌ ಜೇಬು ತುಂಬುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಇದೇ ರೀತಿ ಮೇ.15 ರಂದು ನಾಲ್ಕು ಐಫೋನ್‌ಗಳನ್ನು ಚಿರಾಗ್‌ ಬುಕ್‌ ಮಾಡಿ ವಂಚಿಸಿ ಹಣ ಲಪಟಾಯಿಸಿದ್ದ. ಈ ಬಗ್ಗೆ ಶಂಕೆಗೊಂಡ ಅಮೆಜಾನ್‌ ಕಂಪನಿಯ ಪ್ರತಿನಿಧಿಗಳು, ಒಂದೇ ವಿಳಾಸಕ್ಕೆ ಗ್ರಾಹಕನಿಗೆ ತಲುಪಿದ ಫೋನ್‌ಗಳಲ್ಲಿ ವಂಚನೆ ನಡೆದಿರುವ ಬಗ್ಗೆ ಆಂತರಿಕ ವಿಚಾರಣೆ ನಡೆಸಿದರು. ಈ ವಂಚನೆ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಅಮೆಜಾನ್‌ ಕಂಪನಿ ಅಧಿಕಾರಿಗಳು, ಯಶವಂತಪುರ ಠಾಣೆಗೆ ದೂರು ಸಲ್ಲಿಸಿದರು. ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್‌ ಕೆ.ಸುರೇಶ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ನಿತ್ಯಾನಂದ ನೇತೃತ್ವದ ತಂಡವು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಚಿರಾಗ್‌ನನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಮೋಸದ ಜಾಲ ಬಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿಗೆ ಬಂದವನಿಗೆ ಹುಡುಗಿ ಕೊಟ್ಟಳು ಶಾಕ್..!: ಸಾಯೋ ಮೊದಲು ಸ್ಟೇಟಸ್‌ನಲ್ಲಿ ಬೆತ್ತಲೆ ವಿಡಿಯೋಗಳು..!

ವಂಚನೆ ಜಾಲದಲ್ಲಿ ಮತ್ತಷ್ಟು ವಿದ್ಯಾರ್ಥಿಗಳು

ಹಣದಾಸೆಗೆ ಈ ವಂಚನೆ ಜಾಲದಲ್ಲಿ ಮತ್ತಷ್ಟುವಿದ್ಯಾರ್ಥಿಗಳು ಸಕ್ರಿಯವಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಗುಮಾನಿ ಮೇರೆಗೆ 13ಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ಸಹ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಮೆಜಾನ್‌ ಕಂಪನಿ ನೌಕರ ನೆರವು ಶಂಕೆ

ಅಮೆಜಾನ್‌ ಕಂಪನಿಯ ಆ್ಯಪ್‌ ಅನ್ನು ಹ್ಯಾಕ್‌ ಮಾಡುವು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿದೆ. ಹೀಗಾಗಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಗೆ ಅಮೆಜಾನ್‌ ಕಂಪನಿಯೊಳಗೆ ಕೆಲವರು ನೆರವು ನೀಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios