ಬರೇಲಿ (ಅ. 29) ಉತ್ತರ ಪ್ರದೇಶದಿಂದ  ಮತ್ತೊಂದು ಕರಾಳ ಘಟನೆ ವರದಿಯಾಗಿದೆ.    80 ವರ್ಷದ ವಿಧವೆ ತಾಯಿ ಮೇಲೆ 40 ವರ್ಷದ ಮಗ ಮದ್ಯದ ನಶೆಯಲ್ಲಿ ಅತ್ಯಾಚಾರ ಮಾಡಿದ್ದಾನೆ.

ಲಖಿಂಪುರ್ ಖೇರಿ ಜಿಲ್ಲೆಯ ಮೊಹಮ್ಮದಿ ಪ್ರದೇಶದಲ್ಲಿ ಈ ಅರಗಿಸಿಕೊಳ್ಳಲಾಗದ ಘಟನೆ ನಡೆದಿದೆ. ಕಂಠಪೂರ್ತಿ ಮದ್ಯ ಸೇವಿಸಿ ಮಂಗಳವಾರ ತಡರಾತ್ರಿ ಮನೆಗೆ ಬರುವ ಪುತ್ರ  ತಾಯಿಯ ಮೇಲೆ ಎರಗುತ್ತಾನೆ.  ಅಲ್ಲಿಯೇ ಪಕ್ಕದ 12 ವರ್ಷದ ಮಗಳು ಸಹ ನಿದ್ರೆ ಮಾಡುತ್ತಿದ್ದಳು. ವಿರೋಧಿಸಿದ್ದಕ್ಕೆ ಕೊಲ್ಲುವ ಬೆದರಿಕೆ ಹಾಕಿದ ಪಾಪಿ ತಾಯಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ.

ಸಹೋದರಿಯರ ಮೇಲೆ ನಿರಂತರ ಆರು ದಿನ ಅತ್ಯಾಚಾರ

ಶಬ್ದ ಕೇಳಿ ಎಚ್ಚೆತ್ತ ಮಗಳು ಹೊರಗೆ ಓಡಿ ಹೋಗಿ ಊರವರನ್ನು ಕರೆದುಕೊಂಡು ಬಂದಿದ್ದಾಳೆ. ಹಿರಿಯ ಮಗನಿಗೂ ವಿಚಾಆರ ತಿಳಿಸಲಾಗಿದೆ.  ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

ಉತ್ತರ ಪ್ರದೇಶದಿಂಲೇ ಅತಿ ಹೆಚ್ಚಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಹತ್ರಾಸ್ ಪ್ರಕರಣ ಇಡೀ ದೇಶದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು.