ಫೈಸಲಾಬಾದ(ಅ. 27)   ಈ ಘೋರ ಘಟನೆಗೆ ಪಾಕಿಸ್ತಾನವೇ ಬೆಚ್ಚಿ ಬಿದ್ದಿದೆ. ಇಬ್ಬರು ಬಾಲಕಿಯರ ಮೇಲೆ ಹದಿನೈದು ಜನ ಕಾಮುಕರು ಆರು ದಿನಗಳ ಕಾಲ ಅತ್ಯಾಚಾರ ಮಾಡಿದ್ದಾರೆ.

ಸಹೋದರಿಯರ ಮೇಲೆ ಅತ್ಯಾಚಾರ ನಡೆದಿದ್ದು ನೊಂದ ಮಕ್ಕಳ ತಾಯಿ ದೂರು ನೀಡಿದ್ದಾರೆ. ಸೆ. 11 ರಂದು ಬಾಲಕಿಯರನ್ನು ಅಪಹರಣ ಮಾಡಲಾಗಿತ್ತು.ಮಕ್ಕಳನ್ನು ಬೇರೆ ಬೇರೆ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು ಹದಿನೈದು ಜನ ಕಾಮುಕರು  ಕ್ರೌರ್ಯ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಪೋರ್ನ್ ಸೈಟಿಂದ ವಿಡಿಯೋ ತೆಗೆಯಲು ನಟಿಯಿಂದ ಆರು ವರ್ಷದಿಂದ ಹೋರಾಟ

ಮಕ್ಕಳಿಗೆ ಅಮಲು ಪದಾರ್ಥ ನೀಡಿ ಅವರ ಮೇಲೆ ಅತ್ಯಾಚಾರ ಮಾಡಲಾಗಿದ್ದು ಪೋಟೋಗಳನ್ನು ತೆಗೆದುಕೊಂಡಿದ್ದು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಬಡತನದ ಕಾರಣಕ್ಕೆ ಮೊದಲು ಪೊಲೀಸರ ಮೊರೆ ಹೋಗಲು ಸಾಧ್ಯವಿಲ್ಲ. ಕಾನೂನು ನೆರವು ಸಿಗಲ್ಲ ಎಂದು ಭಾವಿಸಿದ್ದೇವು.  ಆದರೆ ನಮ್ಮನ್ನು ಬಿಡದ ಕಾಮುಕರು ವಿಡಿಯೋ ತೋರಿಸಿ ಮತ್ತೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದರು. ಇದೇ ಕಾರಣಕ್ಕೆ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಿದ್ದೇವೆ ಎಂದಿದ್ದಾರೆ.