ಏಮ್ಸ್ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯನ್ನ ಬಂಧಿಸಲು ಆಸ್ಪತ್ರೆ ವಾರ್ಡ್‌ಗೆ ಕಾರ್ ನುಗ್ಗಿಸಿದ ಪೊಲೀಸ್!
ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನರ್ಸಿಂಗ್ ಅಧಿಕಾರಿಯನ್ನು ಬಂಧಿಸುವ ಸಲುವಾಗಿ ಉತ್ತರಾಂಖಡದ ಪೊಲೀಸರು ರಿಷಿಕೇಶದ ಏಮ್ಸ್ ಆಸ್ಪತ್ರೆಯ ವಾರ್ಡ್‌ಗೆ ಕಾರ್ ನುಗ್ಗಿಸಿದ ಘಟನೆ ಗುರುವಾರ ನಡೆದಿದೆ.
ನವದೆಹಲಿ (ಮೇ.23): ಮಹಿಳಾ ವೈದ್ಯೆಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಉತ್ತರಾಖಂಡ ಪೊಲೀಸರು ರಿಷಿಕೇಶದ ಏಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದೊಳಗೆ ಎಸ್‌ಯುವಿ ಕಾರ್‌ಅನ್ನು ನುಗ್ಗಿಸಿದ್ದಾರೆ. ಈ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ವೀಡಿಯೊದಲ್ಲಿ, ವಾಹನವು ಆಸ್ಪತ್ರೆಯ ತುರ್ತು ವಿಭಾಗಕ್ಕೆ ಪ್ರವೇಶಿಸುವುದನ್ನು ಕಾಣಬಹುದಾಗಿದೆ. ಕೆಲವು ಗಾರ್ಡ್‌ಗಳು ಕಾರ್‌ಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ರೋಗಿಗಳಿದ್ದ ಸ್ಟ್ರೆಚರ್‌ಗಳನ್ನು ಪಕ್ಕಕ್ಕೆ ಸರಿಸುತ್ತಿರುವುದು ದಾಖಲಾಗಿದೆ. ಥಿಯೇಟರ್‌ನೊಳಗೆ ಮಹಿಳಾ ವೈದ್ಯೆ ವಾದಿನಿ ಎಂಬಾಕೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಆರೋಪಿ ರಾಜಸ್ಥಾನ ಮೂಲದ ಸತೀಶ್ ಕುಮಾರ್ ಅವರನ್ನು ಮಂಗಳವಾರ ಅಮಾನತು ಮಾಡಿ ಬಂಧಿಸಲಾಗಿದೆ. ಆತನ ವಿರುದ್ಧ ಸೆಕ್ಷನ್ 354 (ಮಹಿಳೆಯೊಬ್ಬಳ ಮೇಲೆ ದೌರ್ಜನ್ಯ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸತೀಶ್ ಕುಮಾರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಿವಾಸಿ ವೈದ್ಯರು ಮುಷ್ಕರ ನಡೆಸಿದ್ದರಿಂದ ಬುಧವಾರ ಏಮ್ಸ್-ರಿಷಿಕೇಶದಲ್ಲಿ ಸಾಕಷ್ಟು ಗೊಂದಲ ಉಂಟಾಗಿತ್ತು. ರೆಸಿಡೆಂಟ್ ಡಾಕ್ಟರ್‌ಗಳು, ಡೀನ್ (ಶಿಕ್ಷಣ ತಜ್ಞರು) ಕಚೇರಿಯ ಹೊರಗೆ ಜಮಾಯಿಸಿ ಘೋಷಣೆಗಳನ್ನು ಎತ್ತಿದರು. ನರ್ಸಿಂಗ್ ಅಧಿಕಾರಿಯ ಸೇವೆಯನ್ನು ತಕ್ಷಣವೇ ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದರು ಮತ್ತು ಅವರು ಮಾಡಿದ ಅಪರಾಧಕ್ಕೆ ಅಮಾನತು ಸಾಕಾಗುವುದಿಲ್ಲ ಎಂದು ವೈದ್ಯಕೀಯ ಅಧೀಕ್ಷಕ ಸಂಜೀವ್ ಕುಮಾರ್ ಮಿತ್ತಲ್ ಹೇಳಿದರು.
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಅರ್ಧ ದಿನ ರಜೆಗೆ ವಿರೋಧ: ನಿರ್ಧಾರ ಹಿಂಪಡೆದ ಏಮ್ಸ್ ಆಸ್ಪತ್ರೆ
ಮಹಿಳಾ ವೈದ್ಯೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಲೈಂಗಿಕ ಕಿರುಕುಳದ ಆರೋಪದ ಮೇಲೆ ಪೊಲೀಸರು ಸತೀಶ್ ಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಷಯದ ಗಂಭೀರತೆಯನ್ನು ಗಮನಿಸಿ, ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ್ ಕಂಡ್ವಾಲ್ ಅವರು ಏಮ್ಸ್ ಆಡಳಿತವನ್ನು ಭೇಟಿ ಮಾಡಿ, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.
ಒಬ್ಬರಲ್ಲ ನಾವೀಗ ಇಬ್ಬರು: ಸಯಾಮಿ ಅವಳಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಏಮ್ಸ್ ಆಸ್ಪತ್ರೆ