ಪತಿಯಿಂದ ಬೇಸತ್ತ ಪತ್ನಿ ಡಿವೋರ್ಸ್‌ಗೆ ಮುಂದಾಗಿದ್ದಾಳೆ. ಆದರೆ ಪತಿ ಮಾಡಿದ ಕೆಲಸ ಮಾತ್ರ ಇಡೀ ಕುಟುಂಬವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಪತಿಯ ಖಾಸಗಿ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾನೆ.

ಅಹಮ್ಮದಾಬಾದ್(ಫೆ.2) ಪತಿಯ ರಂಪಾಟ, ಆಕ್ರೋಶಗಳಿಂದ ಬೇಸತ್ತಿದ್ದ ಪತ್ನಿ ವಿಚ್ಚೇಧನ ಕೋರಿದ್ದಳು. ಆದರೆ ಇದೀಗ ಪತಿ ವಿರುದ್ದ ದೂರು ನೀಡಿದ್ದಾಳೆ. ಇದಕ್ಕೆ ಮುಖ್ಯ ಕಾರಣ ಖಾಸಗಿ ವಿಡಿಯೋ ಔಟ್. ಡಿವೋರ್ಸ್ ಕೇಳಿದ ಪತ್ನಿ ವಿರುದ್ಧ ಸೇಡು ತೀರಿಸಲು ಮುಂದಾದ ಪತಿ, ಆಕೆಯ ಖಾಸಗಿ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾನೆ. ಈ ವಿಡಿಯೋಗಳು ಕ್ಷಣದಲ್ಲೇ ಎಲ್ಲೆಡೆ ಹರಿದಾಡಿದೆ. ಮತ್ತಷ್ಟು ಆಘಾತಗೊಂಡ ಪತ್ನಿ ಇದೀಗ ಕಠಿಣ ಕ್ರಮಕ್ಕೆ ಆಗ್ರಹಿಸಿ ಪತಿ ವಿರುದ್ದ ದೂರು ನೀಡಿದ ಘಟನೆ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದಿದೆ.

ಗುಜರಾತ್‌ನ ಅಹಮದಾಬಾದ್‌ನ ಮೆಮನ್‌ನಗರದಲ್ಲಿ ವಾಸಿಸುವ 21 ವರ್ಷದ ಮಹಿಳೆ ತನ್ನ ಗಂಡನ ವಿರುದ್ಧ ಬ್ಲ್ಯಾಕ್‌ಮೇಲ್ ಮತ್ತು ಆನ್‌ಲೈನ್ ಕಿರುಕುಳದ ಆರೋಪ ಹೊರಿಸಿದ್ದಾರೆ. ಗಂಡ ತನ್ನ ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ ಎಂದು ಹೇಳಿದ್ದಾರೆ. ಮಹಿಳೆ ಘಾಟ್ಲೋಡಿಯಾ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಮಾನಹಾನಿ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈರಲ್‌ಗಾಗಿ ಬಾಯ್‌ಫ್ರೆಂಡ್ ಜೊತೆಗಿನ ಖುಲ್ಲಂ ಖುಲ್ಲಾ ವಿಡಿಯೋ ಲೀಕ್ ಮಾಡಿದ ರೀಲ್ಸ್ ರಾಣಿ!

ದೂರಿನ ಪ್ರಕಾರ ಮಹಿಳೆಯ ಮದುವೆ ಒಂದು ವರ್ಷದ ಹಿಂದೆ ವಡೋದರಾದ ಒಂದು ಹಳ್ಳಿಯ ವ್ಯಕ್ತಿಯೊಂದಿಗೆ ಆಗಿತ್ತು. ಮದುವೆಯ ನಂತರ ಆಕೆ ಗಂಡನ ಜೊತೆ ಮನೆಯಲ್ಲಿ ಕೆಲಕಾಲ ಕಳೆದಿದ್ದಾರೆ. ಮಹಿಳೆ ಗಂಡನ ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರು. ಇದು ಕೌಟುಂಬಿ ಕಲಹಕ್ಕೆ ಕಾರಣವಾಗಿತ್ತು. ಇತ್ತ ಅತ್ತೆ ಮನೆಯವರು ಕೆಟ್ಟದಾಗಿ ನಡೆಸಿಕೊಳ್ಳಲು ಪ್ರಾರಂಭಿಸಿದಾಗ, ಮಹಿಳೆ ಅಹಮ್ಮದಾಬಾದ್‌ನಲ್ಲಿರುವ ತವರು ಮನೆಗೆ ಆಗಮಿಸಿದ್ದಾರೆ. ಬಳಿಕ ಸಣ್ಣ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಸ್ವಾವಲಂಬಿಯಾಗಿದ್ದರು. ಅತ್ತೆ ಮನೆಯಲ್ಲಿನ ಜಗಳ ಜೊತೆಗೆ ಆರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಮಹಿಳೆ ಚರ್ಮದ ಅಲರ್ಜಿಯಿಂದ ಬಳಲಿದ್ದರು. ಬೆನ್ನು, ಎದೆ ಸೇರಿದಂತೆ ಕೆಲ ಭಾಗದಲ್ಲಿ ಗುಳ್ಳೆಯಾಗಿತ್ತು. ಸತತ ಚಿಕಿತ್ಸೆಯಿಂದ ಅಲರ್ಜಿ ಸಮಸ್ಯೆಯಿಂದ ಹೊರಬಂದಿದ್ದರು. 

ಗಂಡ ಸಮ್ಮತಿಯಿಲ್ಲದೆ ಕರೆಯನ್ನು ರೆಕಾರ್ಡ್ ಮಾಡಿದ
ತಾನು ಗಂಡನ ಜೊತೆ ವಾಸಿಸುತ್ತಿದ್ದಾಗ ತನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಪತಿ ನಿರ್ವಹಣೆ ಮಾಡುತ್ತಿದ್ದರು. ನಿರಂತವಾಗಿ ಯಾವುದೇ ಪೋಸ್ಟ್ ಹಾಕುತ್ತಿರಲಿಲ್ಲ. ಪತಿ ತನ್ನ ಖಾತೆ ಲಾಗಿನ್ ಆಗುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾಳೆ. ಆದರೆ ತವರಿಗೆ ಬಂದ ನಂತರವೂ ಗಂಡ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸುತ್ತಿದ್ದ. ಅವರು ವಿಡಿಯೋ ಕರೆಯ ಮೂಲಕ ಸಂಪರ್ಕದಲ್ಲಿದ್ದರು. ಅಲರ್ಜಿ ಗುಣಮುಖವಾಗಿರುವ ಕುರಿತು ವಿಡಿಯೋ ಕಾಲ್ ಮೂಲಕ ಪತಿಗೆ ಹೇಳಲಾಗಿತ್ತು. ಈ ವೇಳೆ ಪತಿ ಈ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದರು. ತನಗೆ ಆಗಿದ್ದ ಅಲರ್ಜಿ, ಗುಳ್ಳೆ ವಾಸಿಯಾಗುತ್ತಿರುವ ಕುರಿತು ವಿಡಿಯೋ ಕಾಲ್‌ನಲ್ಲಿ ತೋರಿಸಿದ್ದರು.

ಮಹಿಳೆ ವಿಚ್ಛೇದನ ಕೇಳಿದಾಗ ಬ್ಲ್ಯಾಕ್‌ಮೇಲ್ ಪ್ರಾರಂಭವಾಯಿತು
ಅತ್ತೆ ಮನೆಗೆ ಹಿಂದಿರುಗು ವಿಚಾರದಲ್ಲಿ ಪತಿ ಹಾಗೂ ಪತ್ನಿ ನಡುವೆ ಜಗಳ ಶುರುವಾಗಿದೆ. ಮಹಿಳೆ ಅತ್ತೆ ಮನೆಗೆ ಹಿಂದಿರುಗಲು ನಿರಾಕರಿಸಿದ್ದಾಳೆ. ಇದು ಗಂಡನ ರೊಚ್ಚಿಗೆಬ್ಬಿಸಿದೆ. ಪತಿಯ ಆಕ್ರೋಶ, ಕಿರುಕುಳ ಹೆಚ್ಚಾಗುತ್ತಿದ್ದಂತೆ ಪತ್ನಿ ವಿಚ್ಛೇದನ ಕೇಳಿದ್ದಾಳೆ. ಹೀಗಾಗಿ ಗಂಡ ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಜನವರಿಯ ಮೊದಲ ವಾರದಲ್ಲಿ ಅವರನ್ನು ಅವಮಾನಿಸಲು ವಾಟ್ಸಾಪ್ ಸ್ಟೇಟಸ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಖಾಸಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದ. ಬಳಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಬೆದರಿಕೆಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಅವಮಾನದಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದರು. ಘಾಟ್ಲೋಡಿಯಾ ಪೊಲೀಸರು ಭಾರತೀಯ ದಂಡ ಸಂಹಿತೆಯಡಿ ಬೆದರಿಕೆ ಮತ್ತು ಮಾನಹಾನಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು: ಖಾಸಗಿ ವಿಡಿಯೋ ತೋರಿಸಿ ಮಾಜಿ ಸೈನಿಕನ ಪತ್ನಿಯ ಸುಲಿಗೆ!