ಚಿಕ್ಕಮಗಳೂರು, (ಜೂನ್.06): ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶನಿವಾರ ಚಿಕ್ಕಮಗಳೂರು ನಗರದ ಹೊಸಮನೆ ಬಡಾವಣೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಗೋಪಾಲಕೃಷ್ಣ (74) ಹಾಗೂ ರತ್ನ (73) ಎಂದು ಗುರುತಿಸಲಾಗಿದೆ. ಮಕ್ಕಳ ವರ್ತನೆಗೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಮಿಕರಿಗೆ ವಿಶೇಷ ವಿಮಾನ, ಇಟಲಿ ಹಿಂದಿಕ್ಕಿದ ಭಾರತಕ್ಕೆ 6ನೇ ಸ್ಥಾನ; ಜೂ.6ರ ಟಾಪ್ 10 ಸುದ್ದಿ!

ಲಾಕ್ ಡಾನ್ ಹಿನ್ನೆಲೆ ದಂಪತಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದು, ಹಿರಿ ಜೀವಗಳ ಸಂಕಷ್ಟಕ್ಕೆ ಮಕ್ಕಳು ಸ್ಪಂದಿಸಲಿಲ್ಲ. ಅಲ್ಲದೆ ಅನಾರೋಗ್ಯಕ್ಕೆ ತುತ್ತಾದರೂ ತನ್ನ ಮಕ್ಕಳು ಯೋಗಕ್ಷೇಮ ವಿಚಾರಿಸುತ್ತಿಲ್ಲ ಎಂದು ಮನನೊಂದು ವೃದ್ಧ ದಂಪತಿ ಆತ್ಮಹತ್ಯೆಯ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಚಿಕ್ಕಮಗಳೂರು ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ನಗರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.