ನಟಿ ಸೌಜನ್ಯ ಸಾವಿನ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಕುಂಬ​ಳ​ಗೂಡು ಪೊಲೀ​ಸರ ತನಿಖೆ ಆಕೆ ಬಳ​ಸು​ತ್ತಿದ್ದ ಮೊಬೈಲ್‌ನ ಕರೆ​ಗಳನ್ನು ಆಧಾ​ರ​ವಾ​ಗಿ​ಟ್ಟು​ಕೊಂಡು ತನಿಖೆ ಚುರು​ಕು

ರಾಮ​ನ​ಗರ (ಅ.06): ನಟಿ ಸೌಜನ್ಯ (Soujanya) ಸಾವಿನ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಕುಂಬ​ಳ​ಗೂಡು ಪೊಲೀ​ಸರು (Police) ಆಕೆ ಬಳ​ಸು​ತ್ತಿದ್ದ ಮೊಬೈಲ್‌ನ ಕರೆ​ಗಳನ್ನು ಆಧಾ​ರ​ವಾ​ಗಿ​ಟ್ಟು​ಕೊಂಡು ತನಿಖೆ ಚುರು​ಕು​ಗೊ​ಳಿ​ಸಿ​ದ್ದಾರೆ. ಕುಂಬಳಗೋಡು ಬಳಿಯ ಅಪಾರ್ಟ್‌ಮೆಂಟ್‌ (Apartment) ಒಂದರಲ್ಲಿ ಸೌಜನ್ಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಆಕೆಯ ತಂದೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸಾವಿನ ಬಗ್ಗೆ ಅನುಮಾನ ವ್ಯಕ್ತರಪಡಿಸಿ ಆಕೆಯ ತಂದೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಸೌಜ​ನ್ಯರ ಸ್ನೇಹಿತ ವಿವೇಕ್‌ ಹಾಗೂ ಮೇಕಪ್‌ ಮ್ಯಾನ್‌ ಮಹೇಶ್‌ ನನ್ನು ಪೊಲೀ​ಸರು ವಿಚಾ​ರ​ಣೆಗೆ ಒಳ ಪಡಿ​ಸಿ​ದ್ದರು. ಇದೀಗ ಪೊಲೀಸರು ಆಕೆ ಯಾರಿಗೆಲ್ಲ ಫೋನ್‌ ಮಾಡು​ತ್ತಿ​ದ್ದರು, ಯಾರಿಂದ ಅವ​ರಿಗೆ ಫೋನ್‌ ಕರೆಗಳು ಬಂದಿವೆ ಎಂದು ಪೊಲೀ​ಸರು ಸಂಪ​ರ್ಕಿ​ತರ ಪತ್ತೆ ಕಾರ್ಯ​ದಲ್ಲಿ ತೊಡ​ಗಿದ್ದಾರೆ. ಹೀಗಾಗಿ ಆಕೆ​ಯೊಂದಿಗೆ ಯಾರೆಲ್ಲ ಹೆಚ್ಚು ಸಂಪ​ರ್ಕ​ದ​ಲ್ಲಿ​ದ್ದ​ರೊ ಅವ​ರೆ​ಲ್ಲ​ರನ್ನು ಪೊಲೀ​ಸರು ವಿಚಾ​ರ​ಣೆ​ಗೊ​ಳಿ​ಸುವ ಸಾಧ್ಯ​ತೆ​ಗ​ಳಿ​ವೆ.

ಕಿರುತೆರೆ ನಟಿ ಸುಸೈಡ್‌ ಕೇಸ್‌ಗೆ ಟ್ವಿಸ್ಟ್.. ಮದುವೆಯಾಗು ಎಂದು ಕಿರುಕುಳ ಕೊಡ್ತಿದ್ದ ನಟ!

ಇದೇ ವೇಳೆ ಸೆಲೆಬ್ರಿಟಿ ಬದುಕು ನಡೆಸಲು ಸೌಜನ್ಯ ಬಳಿ ಸಾಕಷ್ಟುಹಣ ಇರಲಿಲ್ಲ. ಸೆಲೆಬ್ರಿಟಿ ಬದುಕು ನಡೆಸಲು ಹೆಚ್ಚು ಸಾಲ ಕೂಡ ಮಾಡಿಕೊಂಡಿದ್ದರು. ಹಣದ ವ್ಯವಹಾರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು ಎಂಬ ಮಾಹಿತಿ ಪೊಲೀಸರ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿದೆ. ಜೀವನ ಬೇಜಾರಾಗಿದೆ ಎಂದು ಹಲವು ಸ್ನೇಹಿತರ ಬಳಿ ಸೌಜನ್ಯ ಹೇಳಿಕೊಂಡಿದ್ದರು ಎನ್ನ​ಲಾ​ಗಿ​ದೆ.

ಡೆತ್ ನೋಟ್

 ಕನ್ನಡದ ಕಿರುತೆರೆ(Kannada Tv Actress) ನಟಿ ಸೌಜನ್ಯ(Soujanya) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡಬೆಲೆ ಗ್ರಾಮದ ಕುಂಬಳಗೋಡುವಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ನೇಣಿಗೆ ಶರಣಾದ ಘಟನೆ ಸಂಬಂಧ ತನಿಖೆ ಚುರುಕಾಗಿದೆ.

ಮೂಲತಃ ಕೊಡಗು(Kodagu) ಜಿಲ್ಲೆಯ ಕುಶಾಲನಗರದವರಾಗಿರುವ ಉದಯೋನ್ಮುಖ ನಟಿ ಸೌಜನ್ಯ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದರು. ಅಲ್ಲದೇ ಚೌಕಟ್ಟು, ಫನ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಸಾವಿಗೂ ಮೊದಲು ಡೆತ್​ನೋಟ್(Suicide Note) ಬರೆದಿರುವ ಸೌಜನ್ಯ 'ನನ್ನ ಸಾವಿಗೆ ಯಾರೂ ಕಾರಣರಲ್ಲ. ಅಮ್ಮ-ಅಮ್ಮ ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುವೆ. ಸದ್ಯ ನನ್ನ ಮನಸ್ಥಿತಿ ಸರಿ ಇಲ್ಲ. ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ. ಕ್ಷಮಿಸಿ ಎಂದು ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ. ಇಂಗ್ಲಿಷ್​ನಲ್ಲಿ ಬರೆದಿರುವ ಡೆತ್​ನೋಟ್​ 4 ಪುಟ ಇದೆ. ಸೌಜನ್ಯರವರು ಖಿನ್ನತೆಯಿಂದ ಬಳಲುತ್ತಿದ್ದರೆನ್ನಲಾಗಿದೆ.

ಇನ್ನು ಆತ್ಮಹತ್ಯೆಗೂ ಮುನ್ನ ಸೌಜನ್ಯ ತನ್ನ ಪಿಎಯನ್ನು ತಿಂಡಿ ತರಲು ಕಳುಹಿಸಿದ್ದರು. ಆತ ಹೊರಗೆ ತೆರಳುತ್ತಿದ್ದಂತೆಯೇ ನಟಿ ನೇಣಿಗೆ ಶರಣಾಗಿದ್ದಾರೆ.