ಪುತ್ತೂರು(ಏ.  21)  ಹಲ್ಲೆ ಆರೋಪದಡಿ ಚಿತ್ರ ನಟ ವಿನೋದ್ ಆಳ್ವ ಸಹಿತ ಇಬ್ಬರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿ ಎ.21ರಂದು ಬೆಳಿಗ್ಗೆ ಸಂಪ್ಯ ಪೊಲೀಸ್ ಠಾಣೆಗೆ ಶರಣಾದ ಚಿತ್ರನಟ ವಿನೋದ್ ಆಳ್ವ ಅವರಿಗೆ ಮಧ್ಯಾಹ್ನದ ವೇಳೆಗೆ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.

ಪಡುವನ್ನೂರು ಗ್ರಾಮದ ಕೊರಗಪ್ಪ ನಾಯ್ಕ್ ಅವರ ಪುತ್ರ ಉದಯ(29)ಎಂಬವರು ದೂರು ನೀಡಿದ್ದರು.  ಪಡುಮಲೆ ನಾಗಬ್ರಹ್ಮ ದೇವರ ಸ್ಥಾನದ ರಸ್ತೆ ಕಾಮಗಾರಿಯನ್ನು ವಿನೋದ್ ಆಳ್ವ ಅವರು ಮಾಡಿಸುತ್ತಿದ್ದ ವೇಳೆ ಅದೇ ರಸ್ತೆಯಾಗಿ ಹೋಗುತ್ತಿದ್ದ ನಾನು, ರಸ್ತೆ ಕೆಲಸ ಮಾಡುವ ವೇಳೆ ನೀರಿನ ಪೈಪ್ ಒಡೆದು ಮನೆಗಳಿಗೆ ನೀರು ಬರುತ್ತಿಲ್ಲ ಎಂದು ವಿನೋದ್ ಆಳ್ವರಲ್ಲಿ ಹೇಳಿದ್ದೆ. ಈ ವೇಳೆ ಅವರು, ನೀರು ಬಾರದಿದ್ದರೆ ನನ್ನಲ್ಲಿ ಕೇಳುವುದಲ್ಲ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು.

ಲಾರಿ ಸಮೇತ ಚಾಲಕನ ಅಪಹರಣ, ಮೂವರ ಬಂಧನ

ಆಳ್ವಾ ಜೊತೆಯಲ್ಲಿದ್ದ ದೀಕ್ಷಿತ್ ಕೂಡಾ ಹಲ್ಲೆ ನಡೆಸಿದ್ದಾರೆ. ನಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನೆಂದು ತಿಳಿದೂ ವಿನೋದ್ ಆಳ್ವ ಮತ್ತು ದೀಕ್ಷಿತ್ ಅವರು ಉದ್ದೇಶ ಪೂರ್ವಕವಾಗಿ ನನಗೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ ಎಂದು ಉದಯ  ದೂರು ನೀಡಿದ್ದರು. ಆರೋಪಿಗಳ ವಿರುದ್ಧ ಕಲಂ  323, 504, 506, 34 ಐಪಿಸಿ ಕಲಂ 3(1(ಆರ್), ಎಸ್ಸಿ ಎಸ್ಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿ ದೀಕ್ಷಿತ್ ಅವರನ್ನು ಆರಂಭದಲ್ಲೇ ಪೊಲೀಸರು ಬಂಧಿಸಿದ್ದರು.

ಏ.21ರಂದು ಚಿತ್ರ ನಟ ವಿನೋದ್ ಆಳ್ವ ಅವರು ಪೊಲೀಸ್ ಠಾಣೆಗೆ ಶರಣಾಗಿದ್ದರು. ಅಲ್ಲಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮಧ್ಯಾಹ್ನದ ವೇಳೆ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾತಿ ನಿಂದನೆ ಪ್ರಕರಣ ಬರುವುದಿಲ್ಲ ವಕೀಲರ ವಾದ: ವಿನೋದ್ ಆಳ್ವ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿ ಅವರ ಪರವಾಗಿ ವಾದ ಮಾಡಿದ ನ್ಯಾಯಾವಾದಿ ನರಸಿಂಹಪ್ರಸಾದ್ ಅವರು ಜಾತಿ ನಿಂದನೆ ಮಾಡಿಲ್ಲ. ಹಾಗಾಗಿ ಇದೊಂದು ಜಾತಿ ನಿಂದನೆ ಪ್ರಕರಣಕ್ಕೆ ಬರುವುದಿಲ್ಲ ಎಂದು ವಾದಿಸಿದರು. ಅವರ ವಾದವನ್ನು ಎತ್ತಿ ಹಿಡಿದ ನ್ಯಾಯಾಲಯ ಆರೋಪಿ ವಿನೋದ್ ಆಳ್ವರಿಗೆ ಎ.26ರ ತನಕ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.