ರಾಮದುರ್ಗ ತಾಲೂಕಿನ ಕೊಣ್ಣೂರು ಗ್ರಾಮದ ಈರಪ್ಪ ಕರಡಿ ಎಂಬಾತನೇ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಬೆಳಗಾವಿ(ಜ.21): ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು ಆರೋಪಿ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದಲ್ಲಿ ನಡೆದಿದೆ. 

ರಾಮದುರ್ಗ ತಾಲೂಕಿನ ಕೊಣ್ಣೂರು ಗ್ರಾಮದ ಈರಪ್ಪ ಕರಡಿ ಎಂಬಾತನೇ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃಷಿ ಕಾರ್ಮಿಕನಾಗಿದ್ದ ಈರಪ್ಪ ತೋರಣಗಟ್ಟಿಯಲ್ಲಿ ವಾಸವಾಗಿದ್ದ. ಮೊಬೈಲ್ ಆಸೆ ತೋರಿಸಿ ತನ್ನ ಮನೆಗೆ ಬಾಲಕಿಯನ್ನು ಕರೆದೊಯ್ದಿದ್ದ. ಬಳಿಕ ಕಾಮುಕ ಈರಪ್ಪ ಪುಟ್ಟ ಕಂದಮ್ಮನ ಮೇಲೆ ಅಟ್ಟಹಾಸ ಮೆರೆದಿದ್ದ. 

ದೇವದುರ್ಗ: ಮೂತ್ರ ವಿಸರ್ಜನೆಗೆ ಹೋಗಿದ್ದ ಬಾಲಕಿಯನ್ನ ಹಿಂಬಾಲಿಸಿ ಬಲತ್ಕಾರಕ್ಕೆ ಯತ್ನಿಸಿದ ಕಾಮುಕ!

ಅತ್ಯಾಚಾರಗೈದ ವಿಷಯ ಬಾಲಕಿ ಕುಟುಂಬಸ್ಥರಿಗೆ ಗೊತ್ತಾಗ್ತಿದ್ದಂತೆ ಈರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲೇ ನೇಣುಬಿಗಿದುಕೊಂಡು ಕಾಮುಕ ಈರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.