Asianet Suvarna News Asianet Suvarna News

ಬೆಳಗಾವಿ: 20 ದಿನಗಳಿಂದ ಟೊಮೆಟೋ ಕದಿಯುತ್ತಿದ್ದವ ಸಿಕ್ಕಿಬಿದ್ದ..!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಿದ್ದಾಪೂರ ಗ್ರಾಮದ ಬುಜಪ್ಪಾ ಗಾಣಗೇರ ಟೊಮೆಟೋ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈತನ ವಿರುದ್ಧ ಪ್ರಕರಣ ದಾಖಲು. 

Accused Arrested for Tomato Theft at Raibag in Belagavi grg
Author
First Published Aug 2, 2023, 11:00 PM IST

ಬೆಳಗಾವಿ(ಆ.02):  ಜಮೀನಿನಲ್ಲಿ ಟೊಮೆಟೋ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಯಲ್ಲಾರಟ್ಟಿ ಗ್ರಾಮದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಸಿದ್ದಾಪೂರ ಗ್ರಾಮದ ಬುಜಪ್ಪಾ ಗಾಣಗೇರ ಟೊಮೆಟೋ ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ಒಪ್ಪಿಸಲಾಗಿದ್ದು, ಈತನ ವಿರುದ್ಧ ಪ್ರಕರಣವೂ ದಾಖಲಾಗಿದೆ. ಟೊಮೆಟೋ ಬೆಲೆ ಗಗನಕ್ಕೇರಿ 200 ಗಡಿ ಮುಟ್ಟಿದೆ. ಇದನ್ನೇ ಲಾಭ ಮಾಡಿಕೊಂಡ ಆರೋಪಿ ಬುಜಪ್ಪಾ ತೋಟಕ್ಕೆ ನುಗ್ಗಿ ಟೊಮೆಟೋ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ನಂತರ ಆತನನ್ನು ಹೊಲದ ಮಾಲೀಕ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾನೆ.

ರಾಯಬಾಗ ತಾಲೂಕಿನ ಯಲ್ಪಾರಟ್ಟಿಗ್ರಾಮದ ರೈತ ಕುಮಾರ ಗುಡೋಡಗಿ ಎಂಬುವರು ತಮ್ಮ ಅರ್ಧ ಎಕರೆ ಹೊಲದಲ್ಲಿ ಟೊಮೆಟೋ ಬೆಳೆದಿದ್ದರು. ಇದರಿಂದ ಅವರು ಉತ್ತಮ ಆದಾಯ ಪಡೆಯುತ್ತಿದ್ದರು. ಟೊಮೆಟೋ ಬೆಲೆ ಹೆಚ್ಚಾದ ದಿನದಿಂದ ಅವರ ತೋಟದಲ್ಲಿ ಟೊಮೆಟೋ ಕಳ್ಳತನವಾಗುತ್ತಿದ್ದವು. ಕಳೆದ 20 ದಿನದಿಂದ ಟೊಮೆಟೋ ಕಳ್ಳತನವಾಗುತ್ತಿತ್ತು. ಈ ಬಗ್ಗೆ ಅನುಮಾನ ಬಂದು ರೈತ ಕುಮಾರ ಅವರು ಯುವಕನೊಬ್ಬನನ್ನು ಇಲ್ಲಿ ಕಾವಲಿಗೆ ಇರಿಸಿದ್ದರು.

ದಾವಣಗೆರೆ: ಅಧಿಕಾರಿಗಳಿಗೇ ಖೆಡ್ಡಾ, ಅಕ್ರಮ ಬೈಕ್‌ಗಳಿಗೆ ಸಕ್ರಮ ಮುದ್ರೆ ಒತ್ತುತ್ತಿದ್ದ ಆರ್‌ಟಿಒ ಸಿಬ್ಬಂದಿ ಬಂಧನ

ನಸುಕಿನಲ್ಲಿ ಆಗಮಿಸಿದ ಬುಜಪ್ಪಾ ಗಾಣಗೇರ ಕಳ್ಳತನ ಮಾಡುವಾಗ ಆತನನ್ನು ಸೆರೆಹಿಡಿದಿದ್ದಾರೆ. ಕಳೆದ 20 ದಿನದಿಂದ ಪ್ರತಿನಿತ್ಯ ಸುಮಾರು ಹತ್ತು ಬಾಕ್ಸ್‌ ಟೊಮೆಟೋ ಕಳ್ಳತನವಾಗಿವೆ. ಇದುವರೆಗೆ ಅಂದಾಜು 200 ಬಾಕ್ಸ್‌ ಟೊಮೆಟೋ ಕಳ್ಳತನವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಒಂದು ಬಾಕ್ಸ್‌ ದರ .2200 ಇದೆ. ಈ ಹಿಂದೆ ಬೆಳಗಾವಿ ಮಾರುಕಟ್ಟೆಗೆ ನಾವು ಟೊಮೆಟೋ ಮಾರಾಟ ಮಾಡುತ್ತಿದ್ದನು. ಇದೀಗ ವಿಜಯಪುರದಲ್ಲಿ ಟೊಮೆಟೋ ಮಾರಾಟ ಮಾಡುತ್ತಿದ್ದೇವೆ. ಆರೋಪಿಯಿಂದ ನಮಗೆ ಬಾರಿ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಮ್ಮ ಅಳಳು ತೋಡಿಕೊಂಡರು. ಈ ಹಿಂದೆ ಕೂಡ ನಮ್ಮ ತೋಟದಲ್ಲಿ ಮೆಣಸಿನಕಾಯಿ ಕಳ್ಳತನವಾಗಿತ್ತು. ಆದರೆ ಸಾಕ್ಷಿ ಇಲ್ಲದೆ ಇದ್ದುದರಿಂದ ನಾವು ಪೊಲೀಸರಿಗೆ ದೂರು ನೀಡಿರಲಿಲ್ಲ. ಟೊಮೆಟೋ ಕಳ್ಳನನ್ನು ಹಿಡಿಯಲು ಕಳೆದ 15 ದಿನದಿಂದ ಸತತ ಪ್ರಯತ್ನಪಟ್ಟು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ರೈತ ಕುಮಾರ ಗುಡೋಡಗಿ ಮಾಹಿತಿ ನೀಡಿದರು.

Follow Us:
Download App:
  • android
  • ios