ಖತರ್ನಾಕ್‌ ಕಳ್ಳಿಯ ಹಿಸ್ಟರಿಯೇ ಭಯಾನಕ: ನವಜಾತ ಶಿಶುಗೆ ಹಾಲು ಕುಡಿಸೋ ಬದ್ಲು ಉಪ್ಪಿಟ್ಟು ಕೊಡ್ತಿದ್ದ ಪಾಪಿ..!

ಈ ಹಿಂದೆ ಮೊಬೈಲ್, ಹಣ ಕದ್ದು ಎಸ್ಕೇಪ್ ಅಗ್ತಿದ್ದ ಕಿರಾತಕಿ, ರಾತ್ರಿಯಾಗ್ತಿದ್ದಂತೆ ಈಕೆಯ ಕೈಗೆ ಚಾಕು, ಚೂರಿ ಬರ್ತಿತ್ತು, ರಾತ್ರಿ ವೇಳೆ ರಾಬರಿ ಕೂಡ ಮಾಡ್ತಿದ್ಲಂತೆ ಕಳ್ಳಿ. ರಸ್ತೆ ಮೇಲೆ ಓಡಾಡೋರಿಗೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದಳಂತೆ ಚಾಲಾಕಿ ಕಳ್ಳಿ. 

Accused Arrested For Infant Theft Case in Bengaluru grg

ಬೆಂಗಳೂರು(ಮಾ.28): ಮನೆಯಲ್ಲಿ ಮಲಗಿದ್ದ ನವಜಾತ ಹೆಣ್ಣು ಮಗುವನ್ನ ಕದ್ದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗು ಕಳ್ಳತನ ಮಾಡಿದ ಆರೋಪಿತೆಯ ಹಿಸ್ಟರಿಯೇ ಭಯಾನಕವಾಗಿದೆ. ಹೌದು, ಈಕೆ ಕಳ್ಳತನ ಮಾಡಲು ಮನೆಗೆ ಎಂಟ್ರಿ ಕೊಡೊ ರೀತಿ ಕೇಳಿದ್ರೆ ಎಂಥವರು ಶಾಕ್ ಅಗ್ತಾರೆ. ಇಂತಹ ಖತರ್ನಾಕ್‌ ಕಳ್ಳಿಯ ಹೆಸರು ನಂದಿನಿ @ ಅಯೇಷಾ ಅಂತ. 

ಯಾರಾದ್ರೂ ಮನೆ ಬಾಗಿಲಿಗೆ ಡೋನೆಷನ್ ಕೇಳ್ಕೊಂಡು ಬಂದ್ರೆ ಎಚ್ಚರ ವಹಿಸೋದು ಅಗತ್ಯವಾಗಿದೆ. ಬಂಧಿತ ಆರೋಪಿತೆ ಈ ಹಿಂದೆ ಸಣ್ಣ ಪುಟ್ಟ ಪ್ರಕರಣಗಳಲ್ಲಿ ಈಕೆ ಪೊಲೀಸರ ಅತಿಥಿಯಾಗಿದ್ದಳು. ಯಾವುದೋ ಒಂದು ಸಂಸ್ಥೆಯ ಬ್ರೋಷರ್ ಹಿಡ್ಕೊಂಡು ಮನೆಗೆ ಬರ್ತಾಳೆ, ಈ ಸಂಸ್ಥೆಗೆ ಧನ ಸಹಾಯ ಮಾಡಿ ಅಂತ ಪರಿಪರಿಯಾಗಿ ಬೇಡ್ಕೋಳ್ತಾಳೆ. ನೀವು ಹಣ ತರಲು ಒಳಗೆ ಹೋದ್ರೆ ನಿಮ್ಮ ಮನೆಯಲ್ಲಿ ವಸ್ತು ಅಥವಾ ಮಗು ಕದಿತಾಳೆ. ಬುರ್ಖಾ ಹಾಕಿಕೊಂಡೆ ಮನೆಗೆ ಎಂಟ್ರಿ ಕೊಡ್ತಾಳೆ ಈ ಐನಾತಿ ಕಳ್ಳಿ. ಸಿಸಿಟಿವಿಯಲ್ಲೂ ಈಕೆ ಯಾರು ಅನ್ನೋದೇ ಗೊತ್ತಾಗೋದಿಲ್ಲ. ಅಂತಹ ಪ್ಲಾನ್‌ ಮಾಡಿಕೊಂಡೇ ಬರ್ತಾಳೆ ಈ ಚಾಲಾಕಿ ಕಳ್ಳಿ. 

Suicide case: ಅನುಮಾನಾಸ್ಪದವಾಗಿ ಪತ್ನಿ ಆತ್ಮಹತ್ಯೆ: ಪತಿಯಿಂದ ದೂರು

ಈ ಹಿಂದೆ ಮೊಬೈಲ್, ಹಣ ಕದ್ದು ಎಸ್ಕೇಪ್ ಅಗ್ತಿದ್ದ ಕಿರಾತಕಿ, ರಾತ್ರಿಯಾಗ್ತಿದ್ದಂತೆ ಈಕೆಯ ಕೈಗೆ ಚಾಕು, ಚೂರಿ ಬರ್ತಿತ್ತು, ರಾತ್ರಿ ವೇಳೆ ರಾಬರಿ ಕೂಡ ಮಾಡ್ತಿದ್ಲಂತೆ ಕಳ್ಳಿ. ರಸ್ತೆ ಮೇಲೆ ಓಡಾಡೋರಿಗೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದಳಂತೆ. 

ಈ ಹಿಂದೆ ಕೂಡ ಹಲವು ಮಕ್ಕಳನ್ನ ಕಳ್ಳತನ ಮಾಡಿರುವ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕದ್ದ ಮಗುವನ್ನ ಯಾರಿಗೆ ಕೊಡ್ತಿದ್ಲೂ ಅನ್ನೋದನರ ಬಗ್ಗೆ ಪೊಲೀಸರು ಇದೀಗ ತನಿಖೆಯನ್ನ ಆರಂಭಿಸಿದ್ದಾರೆ. ‌ಮಗುವನ್ನ ಕದ್ದು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ ಆರೋಪಿತೆ ನಂದಿನಿ. ಒಂದು ತಿಂಗಳ ಮಗುವಿಗೆ ಹಾಲು ಕೊಡೋದರ ಬದಲು ಉಪ್ಪಿಟ್ಟು ಕೊಟ್ಟಿದ್ಲಂತೆ ಪಾಪಿ. 

ಮಗು ಅಳುವುದನ್ನ ನೋಡಿದ ಸ್ಥಳೀಯರು ಅನುಮಾನಗೊಂಡಿದ್ದರು. ಮಗುವನ್ನ ಹುಡುಕಲು ಸಾರ್ವಜನಿಕರು ಸಹಾಯ ಮಾಡಿದ್ದಾರೆ. ಸದ್ಯ ಚಾಲಾಕಿ ಕಳ್ಳಿಯನ್ನ ಕಲಾಸಿಪಾಳ್ಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 

Latest Videos
Follow Us:
Download App:
  • android
  • ios