Uttara Kannada: ಕುಡುಕರನ್ನು ಹಿಡಿಯಲು ಹೋದ ಪೊಲೀಸರಿಗೆ ಸಿಕ್ತು 17 ಲಕ್ಷ ರೂ..!
* ಕಳ್ಳನಿಂದ 17.83 ಲಕ್ಷ ವಶಪಡಿಸಿಕೊಂಡ ಪೊಲೀಸರು
* ಕುಡುಕರೊಂದಿಗೆ ತಾನೂ ಓಡಿ ಹೋಗಿ ಪೊಲೀಸರ ಅತಿಥಿಯಾದ
* ಬಸ್‌ನಲ್ಲಿ ಗಲಾಟೆ ಮಾಡುತ್ತಿದ್ದ ನಾಲ್ವರನ್ನು ಬೆನ್ನಟ್ಟಲು ಹೋಗಿ ಸಿಕ್ಕಿಬಿದ್ದ ಕಳ್ಳ
ಅಳ್ನಾವರ(ಮಾ.30): ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದವರನ್ನು ಹಿಡಿಯಲು ಹೋದ ಅಳ್ನಾವರ(Alnavar) ಪೊಲೀಸರ(Police) ಬಲೆಗೆ ದಾಖಲೆ ಇಲ್ಲದೇ ಅಪಾರ ಪ್ರಮಾಣದ ಹಣ ಸಾಗಿಸುತ್ತಿದ್ದ ವ್ಯಕ್ತಿಯೋರ್ವ ಸಿಕ್ಕು ಬಿದ್ದಿದ್ದಾನೆ. ಉತ್ತರ ಕನ್ನಡ(Uttara Kannada) ಜಿಲ್ಲೆಯ ಹಳಿಯಾಳದ ನಾಗರಾಜ್ ನಾಯಕ ಈ ರೀತಿ ಸಿಕ್ಕಿ ಬಿದ್ದ ವ್ಯಕ್ತಿ. ಆತನ ಬಳಿ 17.86 ಲಕ್ಷ ನಗದು ಸಿಕ್ಕಿದೆ. ಆದರೆ ಅದಕ್ಕೆ ದಾಖಲೆ ನೀಡುತ್ತಿಲ್ಲ. ಸ್ವಂತ ಹಣ ಎಂದು ಹೇಳುತ್ತಿದ್ದಾನೆ. ಅದಕ್ಕೆ ಲೆಕ್ಕ, ದಾಖಲೆ ನೀಡುತ್ತಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ. ಹೀಗಾಗಿ ಪೊಲೀಸರು ಆತನ ವಿರುದ್ಧ ಕಳ್ಳತನದ(Theft) ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಆಗಿದ್ದೇನು?
ಗೋವಾದಿಂದ(Goa) ಶಿವಮೊಗ್ಗಕ್ಕೆ(Shivamogga) ಹೋಗುತ್ತಿದ್ದ ಬಸ್‌ನಲ್ಲಿ ನಾಲ್ವರು ಕಂಠಪೂರ್ತಿ ಕುಡಿದು ಗಲಾಟೆ ಮಾಡುತ್ತಿದ್ದರು. ಪ್ರಯಾಣಿಕರು(Passengers) ಎಷ್ಟೇ ತಿಳಿ ಹೇಳಿದರೂ ಗಲಾಟೆ ಜೋರಾಗುತ್ತಲೇ ಇತ್ತು. ಚಾಲಕ ಹಾಗೂ ನಿರ್ವಾಹಕರು ಸಹ ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಗಲಾಟೆ ಮಾತ್ರ ನಿಲ್ಲಲಿಲ್ಲ. ಬೇಸತ್ತು ಚಾಲಕ ಗೋವಾ ಮಾರ್ಗವಾಗಿ ಬರುವ ಅಳ್ನಾವರದ ಪೊಲೀಸ್ ಠಾಣೆಗೆ ಬಸ್ ಕೊಂಡೊಯ್ದಿದ್ದಾನೆ. ಪೊಲೀಸ್ ಠಾಣೆ ಬರುತ್ತಿದ್ದಂತೆ ಕುಡಿದ ನಾಲ್ವರು ಬಸ್‌ನಿಂದ ಜಿಗಿದು ಪರಾರಿಯಾಗಿದ್ದಾರೆ. ಇವರೊಂದಿಗೆ ಈ ವ್ಯಕ್ತಿಯೂ ಬ್ಯಾಗ್ ಹಿಡಿದು ಇಳಿದು ಓಡುತ್ತಿದ್ದಾಗ ಕುಡುಕರ ಬದಲು ಆತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
Bengaluru Crime: ಪ್ರೇಯಸಿಗೆ ವೇಳೆ ಮೆಸೇಜ್ ಮಾಡಿ ಕಿರಿಕಿರಿ ಕೊಡ್ತಿದ್ದ ಮಾಜಿ ಲವರ್ ಹತ್ಯೆಗೆ ಯತ್ನ
ಬ್ಯಾಗ್‌ನಲ್ಲಿ ಮದ್ಯದ(Alcohol) ಬಾಟಲ್ ಇರಬಹುದು ಎಂದು ಪರಿಶೀಲಿಸಲು ಮುಂದಾದಾಗ ತಡವರಿಸುತ್ತಾ ಹಣವಿದೆ ಎಂದಿದ್ದಾನೆ. ಮತ್ತಷ್ಟುಸಂಶಯ ಬಂದು ಪೊಲೀಸರು ಬ್ಯಾಗ್ ಪರಿಶೀಲಿಸಿದಾಗ ಬರೋಬ್ಬರಿ 17.86 ಲಕ್ಷ ಹಣ(Money) ದೊರಕಿದೆ. ಹಣದ ಮೂಲ, ದಾಖಲೆ ಹೇಳುತ್ತಿಲ್ಲ. ಪಿಎಸ್‌ಐ ಎಸ್.ಆರ್. ಕಣವಿ, ಮುಖ್ಯಪೇದೆ ನಾಗರಾಜ ಹಲವಾರ್ ನೇತೃತ್ವದ ತಂಡ ಈತನನ್ನು ಬಂಧಿಸಿದ್ದಾರೆ.
ಬಿಟ್ ಕಾಯಿನ್ ಹೂಡಿಕೆ ನೆಪದಲ್ಲಿ ಧೋಖಾ
ಬೆಂಗಳೂರು: ಇನ್‌ಸ್ಟಾಗ್ರಾಂನಲ್ಲಿ(Instagram) ಖಾತೆ ತೆರೆದು ಬಿಟ್ ಕಾಯಿನ್ (Crypto Currency) ವ್ಯವಹಾರದಲ್ಲಿ ಹಣ ಹೂಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಆಮಿಷವೊಡ್ಡಿ ಜನರಿಗೆ ಟೋಪಿ ಹಾಕುತ್ತಿದ್ದ ಓರ್ವ ಪದವಿ ವಿದ್ಯಾರ್ಥಿ ಸೇರಿದಂತೆ ಇಬ್ಬರು ಕಿಡಿಗೇಡಿಗಳು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರ(Police) ಬಲೆಗೆ ಬಿದ್ದ ಘಟನೆ ಮಾ.28 ರಂದು ನಡೆದಿತ್ತು.
Bengaluru Crime: ಸಿನಿಮಾ ಸ್ಟೈಲಲ್ಲಿ ಜೀವ ಉಳಿಸಿದ ಡ್ರೈವರ್..!
ಬೆಳಗಾವಿ(Belagavi) ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿ ಗ್ರಾಮದ ಕಿರಣ್ ಭರತೇಶ ಹಾಗೂ ಆರ್ಶದ್ ಮೊಹಿದ್ದೀನ್ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 3 ಸಿಮ್ ಕಾರ್ಡ್‌ಗಳು ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಅಲ್ಲದೆ ಆರೋಪಿಗಳ ಬ್ಯಾಂಕ್ ಖಾತೆಯಲ್ಲಿದ್ದ 40 ಸಾವಿರ ರು.ಗಳನ್ನು ಮುಟ್ಟುಗೋಲು ಹಾಕಲಾಗಿದೆ. ಇತ್ತೀಚಿಗೆ ಯಲಹಂಕದ 19 ವರ್ಷದ ಯುವಕನಿಗೆ ಲಾಭದಾಸೆ ತೋರಿಸಿ 20 ಸಾವಿರ ರು. ಪಡೆದು ಆರೋಪಿಗಳು ವಂಚಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಇನ್ಸ್‌ಪೆಕ್ಟರ್ ಆರ್.ಸಂತೋಷ್ ರಾಮ್ ನೇತೃತ್ವದ ತಂಡವು, ಮೊಬೈಲ್ ಕರೆಗಳು ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.
ವಂಚನೆ ನಡೆದದ್ದು ಹೇಗೆ?:
ಕಿರಣ್ ಹಾಗೂ ಆರ್ಶದ್ ಆತ್ಮೀಯ ಸ್ನೇಹಿತರು. ರಾಯಭಾಗ(Raibag) ತಾಲೂಕಿನಲ್ಲಿ ಆರ್ಶದ್ ಅಂತಿಮ ವರ್ಷದ ಬಿಎ ಓದುತ್ತಿದ್ದರೆ, ಕಿರಣ್ ಪದವಿ ಮುಗಿಸಿ ಕೆಲಸಕ್ಕೆ ಹುಡುಕಾಟ ನಡೆಸಿದ್ದ. ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ abhise-akwane ಎಂಬ ಖಾತೆ youngstcrpto treader ಮಿನಿಮಮ್ ಶೇ.60 ರಷ್ಟು ಪ್ರಾಫಿಟ್ ಎಂದು ಬರೆದುಕೊಂಡಿದ್ದರು.
ಈ ಖಾತೆಯ ಜಾಹೀರಾತು ಗಮನಿಸಿದ ಯಲಹಂಕದ ಯುವಕ, ಮಾ.17ರಂದು ಆರೋಪಿಗಳಿಗೆ ಮೆಸೇಜ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿದ ಅವರು, ಕೇವಲ 20 ನಿಮಿಷದಲ್ಲಿ ಲಾಭ ನೀಡುವುದಾಗಿ ನಂಬಿಸಿದ್ದಾರೆ. ಈ ಮಾತು ನಂಬಿದ ಸಂತ್ರಸ್ತನಿಂದ .26 ಸಾವಿರ ಹಣ ಪಡೆದು ಮೋಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ ಹಣದಾಸೆಗೆ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.