ಬೆಂಗಳೂರು(ಏ.14):  ನಗರದ ಪುಟ್ಟೇನಹಳ್ಳಿಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ಇಂದು(ಬುಧವಾರ) ಕೋಣನ ಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಜುನಾಥ್ ಅಲಿಯಾಸ್ ಅಂಬಾರಿ ಬಂಧಿತ ಆರೋಪಿಯಾಗಿದ್ದಾನೆ.

ಮನೆಯಲ್ಲಿದ್ದ ಹಣ ಮೊಬೈಲ್, ಚಿನ್ನ ದೋಚುವ ಸಲುವಾಗಿ ಆರೋಪಿ ಮಂಜುನಾಥ್ ಎರಡು ಕೊಲೆ ಮಾಡಿದ್ದನು. ಮಂಜುನಾಥ್ ಮೇಲೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. 

ಅಧಿಕಾರಿಗಳ ಕಣ್ತಪ್ಪಿಸಲು ಪಾದದಲ್ಲಿ ಚಿನ್ನವಿಟ್ಟ ಖದೀಮನ ಬಂಧನ

ಆರೋಪಿ ಮಂಜುನಾಥ್‌ನನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ಕಿಶೋರ್ ಅವರು ಗುಂಡು ಹಾರಿಸಿ ಬಂಧಿಸಿದ್ದಾರೆ.