ಬೆಂಗ್ಳೂರಲ್ಲಿ ಬುಲೆಟ್ ಕಳ್ಳತನ, ರಾಯಚೂರಲ್ಲಿ ಮಾರಾಟ: ಖತರ್ನಾಕ್ ಕಳ್ಳನ ಬಂಧನ
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ
ರಾಯಚೂರು(ಜು.29): ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಿದ್ದು, ಬಂಧಿತ ಆರೋಪಿಯಿಂದ ಆರು ಬುಲೆಟ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ವಾಸವಿರುವ ಜಾಲಹಳ್ಳಿಯ ರಂಗನಾಥ ದುರುಗಪ್ಪ ದೊಡ್ಡಮನಿ (25) ಬಂಧಿತ ಆರೋಪಿ. ಬೆಂಗಳೂರಿನಲ್ಲಿ ಪಲ್ಸರ್ ಹಾಗೂ ರಾಯಲ್ ಎನ್‌ಫಿಲ್ಡ್ ಬೈಕ್ ಕಳ್ಳತನ ಮಾಡಿಕೊಂಡು ತಂದು, ಜಾಲಹಳ್ಳಿ ಮತ್ತು ಸುತ್ತಲಿನ ಗ್ರಾಮಗಳ ಜನರಿಗೆ ಮಾರಾಟ ಮಾಡಿ ಹೋಗುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ತಿಂಥಿಣಿ ಬ್ರಿಡ್ಜ್ ಕಡೆಯಿಂದ ಜಾಲಹಳ್ಳಿಗೆ ಬೆಳಗಿನ ಜಾವ ರಾಯಲ್ ಎನ್‌ಫಿಲ್ಡ್‌ನಲ್ಲಿ ಬರುತ್ತಿದ್ದ ಆರೋಪಿಯು, ದೂರದಿಂದ ಪೊಲೀಸರನ್ನು ಗಮನಿಸಿ ವಾಪಸ್ ಹೋಗಿದ್ದು ಸಂಶಯಕ್ಕೀಡು ಮಾಡಿತ್ತು. ಪೊಲೀಸರು ಬೆನ್ನುಬಿದ್ದು ವಿಚಾರಿಸಿದಾಗ ವಿಷಯ ಬೈಕ್ ಕಳ್ಳತನ ಬಯಲಾಗಿದೆ. ಆರೋಪಿಯು ಬೆಂಗಳೂರಿನಲ್ಲಿ ಛಾಯಾಚಿತ್ರಗ್ರಾಹಕ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
Bengaluru ಹುಟ್ಟುಹಬ್ಬದಂದೇ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಪೊಲೀಸ್ ತನಿಖೆಯಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ
ಪಿಎಸ್‌ಐ ಮುದ್ದುರಂಗಸ್ವಾಮಿ, ಸಿಬ್ಬಂದಿ ಬಾಲಗೌಡ, ವೆಂಕಟೇಶ, ದೇವರಾಜ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕುರಿತು ಲಿಂಗಸುಗೂರು ಡಿವೈಎಸ್‌ಪಿ ಎಸ್. ಮಂಜುನಾಥ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಿಪಿಐ ಖಾಜಾಹುಸೇನ್ ಇದ್ದರು.