ಹಿಟ್ ಅಂಡ್ ರನ್ ಗೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸದಾಶಿವನಗರದ ಎಂಎಸ್ ರಾಮಯ್ಯ ಬಳಿಯ ಇಸ್ರೋ ಸರ್ಕಲ್ ನಲ್ಲಿ ನಡೆದಿದೆ.

ಬೆಂಗಳೂರು (ಆ.7): ಹಿಟ್ ಅಂಡ್ ರನ್ ಗೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸದಾಶಿವನಗರದ ಎಂಎಸ್ ರಾಮಯ್ಯ ಬಳಿಯ ಇಸ್ರೋ ಸರ್ಕಲ್ ನಲ್ಲಿ ನಡೆದಿದೆ.

ರಘು ಮತ್ತು ಚಿರಂಜೀವಿ ಅಪ್ಪ ಮಗ) ಮೃತ ದುರ್ದೈವಿಗಳು. ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಮೃತರಿಬ್ಬರು ಕುವೆಂಪು ನಗರದ ನಿವಾಸಿಗಳು. ಒಂದೇ ಕುಟುಂಬದವರಾಗಿದ್ದು, ಮೂವರು ಪುಸ್ತಕದ ವ್ಯಾಪಾರ ಮಾಡ್ತಿದ್ರು. ಕಳೆದ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ವಾಪಸ್ಸು ಬರುವಾಗ ನಡೆದಿರೋ ಘಟನೆ. ಎಂಎಸ್‌ ರಾಮಯ್ಯ ಆಸ್ಪತ್ರೆ ಕಡೆಯಿಂದ ಬಂದ ಮಾರುತಿ ಇಕೋ ಕಾರು. ಮೊದಲು ನಿಂತಿದ್ದ ಒಂದು ಕಾರು ಮತ್ತೊಂದು ಆಟೋಗೆ ಡಿಕ್ಕಿ. ರಸ್ತೆ ಬದಿ ನಿಂತಿದ್ದ ಒರ್ವನಿಗೆ ಡಿಕ್ಕಿ ನಂತ್ರ ಡಿಯೋ ಸ್ಕೂಟರ್ ನಲ್ಲಿದ್ದ ಇಬ್ಬರಿಗೂ ಡಿಕ್ಕಿಯಾಗಿದೆ.

ಘಟನೆ ಬಳಿಕ ಕಾರು ತಡೆದು ನಿಲ್ಲಿಸಿದ್ದ ಸ್ಥಳೀಯರು. ಈ ವೇಳೆ ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾರಿನಲ್ಲಿ ಇದ್ದ ಆಕಾಶ್ ಎಂಬಾತನನ್ನು ಹಿಡಿದಿದ್ದು, ಇವನು ಮಾಗಡಿ ಜಿಲ್ಲಾ ಪಂಚಾಯತಿ ಸದಸ್ಯರ ಮಗ ಎಂದು ತಿಳಿದುಬಂದಿದೆ. ರಾತ್ರಿ ಕುಡಿದ ಮತ್ತಿನಲ್ಲಿ ಇದ್ದ ಆಕಾಶ್ ಯದ್ವಾತದ್ವಾ ಚಾಲನೆ ಮಾಡಿರುವುದರಿಂದ ಸರಣಿ ಅಪಘಾತವಾಗಿದೆ. ಸದ್ಯ ಘಟನೆ ಸಂಬಂಧ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ.


ಮೊಬೈಲ್ ಕದ್ದು ಪರಾರಿಯಾಗುವ ವೇಳೆ ಅಪಘಾತ: 


ವಿಜಯನಗರ: ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಅಪಘಾತವಾಗಿ ಕಳ್ಳನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ವಿಜಯನಗರ ಮಾರುತಿ ಮಂದಿರದ ಬಳಿ ನಡೆದಿದೆ. 

ಮಾರುತಿ ಮಂದಿರ ಏರಿಯಾದಲ್ಲಿ ಜನರ ಓಡಾಟ ಹೆಚ್ಚಿರುವುದರಿಂದ ಇಲ್ಲಿ ಕಳ್ಳತನ ಮಾಡಲು ಖದೀಮರಿಗೆ ಅನುಕೂಲವಾಗಿದೆ. ಮೊಬೈಲ್ ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಲು ಯತ್ನಿಸಿದ್ದ ಕಳ್ಳ. ಆದರೆ ಈ ವೇಳೆ ಬೈಕ್ ಅಪಘಾತವಾಗಿ ಖದೀಮ ಕೆಳಗೆ ಬಿದ್ದಿದ್ದಾನೆ. ಅವನನ್ನು ಬೆನ್ನಟ್ಟಿದ್ದ ಸಾರ್ವಜನಿಕರು ಹಿಡಿದಿದ್ದಾರೆ. ಒಟ್ಟು ಮೂವರ ಮೊಬೈಲ್ ಕಸಿದು ಪರಾರಿಯಾಗ್ತಿದ್ದ ಕಳ್ಳ. ಪೊಲೀಸರಿಗೆ ಠಾಣೆಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಕಳ್ಳತನ ನಡೆದ ಪ್ರಕರಣಗಳಲ್ಲಿ ಇವನ ಕೈಚಳಕ ಇದೆಯೋ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. 

ಸದ್ಯ ವಿಜಯನಗರ ಪೊಲೀಸರಿಂದ ಆರೋಪಿಯ ಬಂಧನ ವಿಚಾರಣೆ

ಬೈಕ್ ಕಳ್ಳತನ; ಬಂಧನ

ಗುಳೇದಗುಡ್ಡ: ಮೂರು ಬೈಕ್‌ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಗುಳೇದಗುಡ್ಡ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ನವನಗರದ ಯುವಕ ಹುಲಗಪ್ಪ ಗಂಗಪ್ಪ ಬೆನಕಟ್ಟಿಬಂಧಿತನಾಗಿದ್ದು, ಈತನಿಂದ ಮೂರು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಟ್ಟಣದ ಬಸ್‌ ನಿಲ್ದಾಣ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಪೊಲೀಸ್‌ ಠಾಣೆಗೆ ಕರೆ ತಂದು ಹೆಚ್ಚಿನ ಆತನನ್ನು ವಿಚಾರಣೆಗೊಳಪಡಿಸಿದಾಗ ಬೈಕ್‌ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ವಿಜಯಪುರ, ಗುಳೇದಗುಡ್ಡ ಹಾಗೂ ಬಾದಾಮಿ ಹೀಗೆ 3 ಕಡೆ 3 ಬೈಕ್‌ಗಳನ್ನು ಈತ ಕಳವು ಮಾಡಿದ್ದಾಗಿ ತಿಳಿಸಿದ್ದಾನೆ.

ದಾವಣಗೆರೆ: ಘನತ್ಯಾಜ್ಯ ವಿಲೇವಾರಿ ಘಟಕದ ಶೀಟು ಕಳವು, ಕುಣಿಗಲ್‌ನಲ್ಲಿ ಕೊಳವೆ ಬಾವಿ ಕೇಬಲ್ ಕಳವು

ಕಾರ್ಯಾಚರಣೆಯಲ್ಲಿ ಸಿಪಿಐ ಡಿ.ಡಿ.ಧೂಳಖೇಡ, ಪಿಎಸ್‌ಐ ಲಕ್ಷ್ಮಣ ಆರಿ, ಅಪರಾಧ ವಿಭಾಗದ ಪಿಎಸ್‌ಐ ಚಂದ್ರಶೇಖರ ಕಿರಶ್ಯಾಳ, ಎಎಸ್‌ಐ ಎಸ್‌.ಐ.ಬಿಳೆಕುದರಿ, ಸಿ.ವೈ.ಸಿದ್ದಣ್ಣವರ್‌, ಎಂ.ಎಲ್‌.ಬಜಂತ್ರಿ, ಎಚ್‌.ಪಿ.ಕುಗಟಿ, ಜಿ.ವಿ.ಮನ್ನಿಕಟ್ಟಿ, ಎಚ್‌.ಸಿ.ಬಿಂಜವಾಡಗಿ, ನಾಗರಾಜ ಕುಂದರಗಿ, ಹನಮಂತ ಭೋವಿ, ಎಸ್‌.ಐ.ಡಂಗಿ, ಸಂಗಮೇಶ ಮರೋಳ, ಕಲ್ಲಪ್ಪ ಭರಣಿ, ಎಚ್‌.ವೈ.ಮಾಗಿ, ಎಂ.ಪಿ.ಕುಂದರಗಿ ಇದ್ದರು.