Asianet Suvarna News Asianet Suvarna News

ಲಾರಿ ಬೈಕ್ ನಡುವೆ ಭೀಕರ ಅಪಘಾತ: ಪೂಜಾ ಕುಣಿತ ಕಲಾವಿದ ಸ್ಥಳದಲ್ಲೇ ಸಾವು!

ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪೂಜಾ ಕುಣಿತ ಕಲಾವಿದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿಯ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಜರುಗಿದೆ.

Accident pooja dance artist died on the spot in maddur at mandya rav
Author
First Published Nov 30, 2023, 8:52 AM IST

ಮದ್ದೂರು (ನ.30): ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪೂಜಾ ಕುಣಿತ ಕಲಾವಿದ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತೊರೆಶೆಟ್ಟಿಹಳ್ಳಿಯ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಜರುಗಿದೆ.

ತಾಲೂಕಿನ ಆತಗೂರು ಹೋಬಳಿಯ ತೂಬಿನಕೆರೆ ಗ್ರಾಮದ ನಂಜುಂಡಸ್ವಾಮಿ(34) ಮೃತ ದುರ್ದೈವಿ. ವೃತ್ತಿಯಲ್ಲಿ ಪೂಜಾ ಕುಣಿತ ಕಲಾವಿದನಾಗಿದ್ದ ನಂಜುಂಡಸ್ವಾಮಿ ಭಾನುವಾರ ರಾತ್ರಿ ತಾಲೂಕಿನ ಮಾದನಾಯಕನಹಳ್ಳಿಯ ಗೃಹಪ್ರವೇಶ ಕಾರ್ಯಕ್ರಮದ ನಂತರ ತಮ್ಮ ರಾಯಲ್ ಎನಿ ಫೀಲ್ಡ್ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಬರುತ್ತಿದ್ದರು.

ಆರೋಗ್ಯ ಇಲಾಖೆಯ 262 ಹೊಸ ಆಂಬ್ಯುಲೆನ್ಸ್‌ ಸೇವೆಗಳಿಗೆ ಇಂದು ಸಿಎಂ ಚಾಲನೆ

ಬೆಳಗಿನ ಜಾವ 4.30ರ ಸಮಯದಲ್ಲಿ ಮದ್ದೂರು - ತುಮಕೂರು ರಾಜ್ಯ ಹೆದ್ದಾರಿಯ ತೊರೆಶೆಟ್ಟಿಹಳ್ಳಿಯ ಅಪ್ಪು ಡಾಬಾ ಬಳಿ ಎದುರಿನಿಂದ ಬಂದ ಲಾರಿ ಬೈಕ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಅಪಘಾತದ ನಂತರ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಈ ಸಂಬಂಧ ಕೆಸ್ತೂರು ಠಾಣೆ ಪಿಎಸ್ ಐ ನರೇಶ್ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ವೆಂಕಟೇಗೌಡ ತನಿಖಾ ಕಾರ್ಯ ಕೈಗೊಂಡಿದ್ದಾರೆ.

ತುಮಕೂರು - ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಎಂ.ಸ್ಟ್ಯಾಂಡ್ , ಮರಳು ಮತ್ತು ಸಿಮೆಂಟ್ ಲಾರಿಗಳು ಅತಿಯಾಗಿ ಸಂಚರಿಸುತ್ತಿದ್ದವು. ಇಂತಹ ವಾಹನಗಳಿಂದ ಅಪಘಾತ ಸಂಭವಿಸಿರಬಹುದೇ ಎಂಬ ಬಗ್ಗೆ ಪೊಲೀಸರು ಹೆದ್ದಾರಿಯಲ್ಲಿ ಬರುವ ಮದ್ಯದ ಅಂಗಡಿ ಸೇರಿದಂತೆ ಇತರೆ ಅಂಗಡಿ, ಮನೆಗಳ ಮುಂದೆ ಇರುವ ಸಿಸಿ ಟಿವಿ ದೃಶ್ಯಾವಳಿ ಕಲೆಹಾಕುವ ಕಾರ್ಯದಲ್ಲಿ ತೊಡಗಿದ್ದಾರೆ.

ಅನುಮತಿ ಇಲ್ಲದೇ ತಾಯಿಯ ಮೊಬೈಲ್ ಬಳಸಿದ್ದಕ್ಕೆ ಮಗನಿಗೆ ಚೂರಿ ಇರಿದು ಕೊಂದ ತಂದೆ!

Follow Us:
Download App:
  • android
  • ios