ದಾಳಿ ನಡೆಸಿ 19 ಜನ ಯುವತಿಯರನ್ನ ರಕ್ಷಿಸಿ, 7 ಜನ ಆರೋಪಿಗಳ ಬಂಧಿಸಿದ ಸಿಸಿಬಿ ಅಧಿಕಾರಿಗಳು

ಬೆಂಗಳೂರು(ಆ.21): ನಗರದ ಮ್ಯಾಂಗೋ ಟ್ರೀ ಲಾಡ್ಜ್ ಮೇಲೆ ನಿನ್ನೆ(ಶನಿವಾರ) ರಾತ್ರಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ 19 ಜನ ಯುವತಿಯರನ್ನ ರಕ್ಷಿಸಿ, 7 ಜನ ಆರೋಪಿಗಳ ಬಂಧಿಸಿದ್ದಾರೆ. 4 ನೇ ಮಹಡಿಯ ಎಕ್ಸಕ್ಯೂಸ್ ಲೇಡಿಸ್ ಬಾರ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. 

ಮಹಿಳೆಯರಿಂದ ಅಶ್ಲೀಲ ನೃತ್ಯ ಮಾಡಿಸುತ್ತಿದ್ದ ಮಾಹಿತಿ ಅಧಾರದ ಮೇಲೆ ಸಿಸಿಬಿ ದಾಳಿ ಮಾಡಿದ ಅಂತ ತಿಳಿದು ಬಂದಿದೆ. ಕಸ್ಟಮರ್ಸ್‌ಗಳಿಗೆ ಲೈಂಗಿಕ ಪ್ರಚೋದನೆ ನೀಡುವಂತ ಅರೆ ನಗ್ನ ಉಡುಪುಗಳನ್ನ ಧರಿಸಿ ಯುವತಿಯರು ನೃತ್ಯ ಮಾಡುತ್ತಿದ್ದರು ಅಂತ ತಿಳಿದು ಬಂದಿದೆ. 

ಬೆಂಗಳೂರು: 80 ಹಂದಿ ಕದ್ದಿದ್ದ 10 ಕಳ್ಳರ ಬಂಧನ

ದಾಳಿ ವೇಳೆ ಡ್ಯಾನ್ಸ್ ಬಾರ್ ಮತ್ತು ಡಿಜೆಯನ್ನ ಅನಧಿಕೃತವಾಗಿ ನಡೆಸುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನ ಮುಂದುವರೆಸಲಾಗಿದೆ.