ವೃದ್ಧ ತಂದೆ-ತಾಯಿಯ ಆರೈಕಾಗಿ ನೇಮಿಸಿಕೊಂಡಿದ್ದ ಯುವತಿ ಮೇಲೆ ಮನೆಯ ಮಾಲಿಕನೇ ಆತ್ಯಾಚಾರ ಎಸೆಗಿರುವ ಹೀನಕೃತ್ಯ ಪರಪ್ಪ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 21 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ಕೂಡ್ಲು ಬಡಾವಣೆ ನಿವಾಸಿ ಪರಶಿವಮೂರ್ತಿ(47) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರು (ಡಿ.20) : ವೃದ್ಧ ತಂದೆ-ತಾಯಿಯ ಆರೈಕಾಗಿ ನೇಮಿಸಿಕೊಂಡಿದ್ದ ಯುವತಿ ಮೇಲೆ ಮನೆಯ ಮಾಲಿಕನೇ ಆತ್ಯಾಚಾರ ಎಸೆಗಿರುವ ಹೀನಕೃತ್ಯ ಪರಪ್ಪ ಅಗ್ರಹಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 21 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿ ಕೂಡ್ಲು ಬಡಾವಣೆ ನಿವಾಸಿ ಪರಶಿವಮೂರ್ತಿ(47) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನ.30ರ ತಡರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಪರಶಿವಮೂರ್ತಿ ಖಾಸಗಿ ಕಂಪನಿಯೊಂದರ ಅಕೌಂಟ್ಸ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿಗೆ ವಿವಾಹವಾಗಿದ್ದು, ಕೌಟುಂಬಿಕ ಕಲಹದಿಂದ ಪತ್ನಿ ಹಾಗೂ ಮಕ್ಕಳು ದೂರುವಾಗಿದ್ದಾರೆ. ಹೀಗಾಗಿ ವೃದ್ಧ ತಂದೆ-ತಾಯಿ ಜತೆಗೆ ಮನೆಯಲ್ಲಿ ನೆಲೆಸಿದ್ದ. ಆರೋಪಿಯು ಇತ್ತೀಚೆಗೆ ತಂದೆ-ತಾಯಿ ಆರೈಕೆಗಾಗಿ ಕೆಲಸಗಾರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದ. ಅದರಂತೆ ಬುಕ್‌ ಮೈ ಬಾಯ್‌ ಎಂಬ ಏಜೆನ್ಸಿ ಮುಖಾಂತರ 21 ವರ್ಷದ ಯುವತಿಯನ್ನು ಮನೆಗೆಲಸ ಹಾಗೂ ಪೋಷಕರ ಆರೈಕೆಗಾಗಿ ನೇಮಿಸಿಕೊಂಡಿದ್ದ.

Pocso case: ಅಪ್ರಾಪ್ತೆಯ ಅತ್ಯಾಚಾರ; ಆರೋಪಿಗೆ 20 ವರ್ಷ ಸಜೆ

ಆರೋಪಿ ಪರಶಿವಮೂರ್ತಿ ನ.30ರ ತಡರಾತ್ರಿ ಯುವತಿ ಮೇಲೆ ಅತ್ಯಾಚಾರ ಎಸೆಗಿದ್ದ. ಬಳಿಕ ಯುವತಿಯ ಮೊಬೈಲ್‌ ಕಸಿದುಕೊಂಡು ಈ ವಿಚಾರವನ್ನು ಯಾರಿಗೂ ಹೇಳಬೇಡ ಎಂದು ಬೆದರಿಸಿದ್ದ. ಮುಂಜಾನೆ ಮನೆಯೊಳಗೆ ಯುವತಿಯ ಕೂಡಿ ಹಾಕಿ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದ. ಬೆಳಗ್ಗೆ ಮತ್ತೆ ಮನೆಗೆ ಬಂದಿರುವ ಆರೋಪಿ, ಯುವತಿಗೆ ಆಕೆಯ ಮೊಬೈಲ್‌ ನೀಡಿದ್ದಾನೆ. ಈ ವಿಚಾರವನ್ನು ಯಾರಿಗೂ ಹೇಳದಂತೆ ತಿಳಿಸಿ ಮತ್ತೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದ.

ಈ ವೇಳೆ ಆ ಯುವತಿ ತನ್ನನ್ನು ಕೆಲಸಕ್ಕೆ ನಿಯೋಜಿಸಿದ್ದ ಬುಕ್‌ ಮೈ ಬಾಯ್‌ ಏಜೆನ್ಸಿಗೆ ಕರೆ ಮಾಡಿ ಅತ್ಯಾಚಾರದ ವಿಚಾರ ತಿಳಿಸಿದ್ದಾಳೆ. ಏಜೆನ್ಸಿಯವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಬಳಿಕ ಏಜೆನ್ಸಿಯವರು ಹಾಗೂ ಪೊಲೀಸರು ಆರೋಪಿಯ ಮನೆ ಬಳಿ ಬಂದು ಬಾಗಿಲು ಒಡೆದು ಯುವತಿಯನ್ನು ರಕ್ಷಿಸಿದ್ದಾರೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 8 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ 14ರ ಬಾಲಕ!