Asianet Suvarna News Asianet Suvarna News

ಮಂಗಳೂರಿನಲ್ಲಿ‌ ಯುವಕನಿಗೆ ಚೂರಿ ಇರಿತ: ಪ್ರಾಣಾಪಾಯದಿಂದ ಪಾರು

ಇಲ್ಲಿನ ಹೊರವಲಯದ ಕಳವಾರು ಎಂಬಲ್ಲಿಂದ ದ್ವಿಚಕ್ರ ವಾಹನದಲ್ಲಿ ಬಜ್ಪೆಗೆ ತೆರಳುತ್ತಿದ್ದ ಯುವಕನ ಮೇಲೆ ಗುಂಪೊಂದು ದಾಳಿ ಮಾಡಿ ಚೂರಿಯಿಂದ ಇರಿದಿರುವ ಘಟನೆ ಸುರತ್ಕಲ್‌ ಪೊಲೀಸ್ ಠಾಣೆಯ ಕರಂಬಾರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.

A young man was stabbed in Mangaluru gvd
Author
First Published Sep 4, 2023, 2:40 AM IST

ಮಂಗಳೂರು (ಸೆ.04): ಇಲ್ಲಿನ ಹೊರವಲಯದ ಕಳವಾರು ಎಂಬಲ್ಲಿಂದ ದ್ವಿಚಕ್ರ ವಾಹನದಲ್ಲಿ ಬಜ್ಪೆಗೆ ತೆರಳುತ್ತಿದ್ದ ಯುವಕನ ಮೇಲೆ ಗುಂಪೊಂದು ದಾಳಿ ಮಾಡಿ ಚೂರಿಯಿಂದ ಇರಿದಿರುವ ಘಟನೆ ಸುರತ್ಕಲ್‌ ಪೊಲೀಸ್ ಠಾಣೆಯ ಕರಂಬಾರು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಿಂದ ಕರಂಬಾರು ಶಾಂತಿಗುಡ್ಡೆ ನಿವಾಸಿ ಅಬ್ದುಲ್‌ ಸಫ್ವಾನ್‌ (23) ಇರಿತಕ್ಕೆ ಒಳಗಾದ ಯುವಕ ಎಂದು ತಿಳಿದು ಬಂದಿದೆ. 

ಘಟನೆಯಿಂದ ಅಬ್ದುಲ್‌ ಸಫ್ವಾನ್‌ ಅವರ ಕೈ ಮತ್ತು ಕುತ್ತಿಗೆಗೆ ಚುಚ್ಚಿದ ಗಾಯಗಳಾಗಿದ್ದು, ದಾರಿಹೋಕರು ಅವರನ್ನು ತಕ್ಷಣ ಬಜ್ಪೆಯ ಖಾಸಗಿ ಆಸ್ಪತ್ರಗೆ ದಾಖಲಿಸಿ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಸ್ಥಳೀಯರಿಂದಲೇ ಸಫ್ವಾನ್ ಮೇಲೆ‌ ಹಲ್ಲೆ ನಡೆದಿದ್ದು, ಈ ಸಂಬಂಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಬೇಡ್ಕರ್‌ ಅಧ್ಯಯನದಿಂದ ವಿದ್ಯಾರ್ಥಿಗಳ ಜೀವನ ಹಸನು: ಸಚಿವ ಡಿ.ಸುಧಾಕರ್

ಮದ್ಯ ಕೊಡಲು ಒಪ್ಪದ ಬಾರ್‌ ಸಪ್ಲೈಯರ್‌ಗೆ ಚಾಕು ಇರಿತ: ಬಾರ್‌ ತೆರೆದು ಮದ್ಯ ಕೊಡಲಿಲ್ಲ ಎಂಬ ಕಾರಣಕ್ಕೆ ಮೂವರು ದುಷ್ಕರ್ಮಿಗಳು ಬಾರ್‌ ಸಪ್ಲೈಯರ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಸ್ವಾಗತ್‌ಗೌಡ(28) ಚಾಕು ಇರಿತಕ್ಕೆ ಒಳಗಾದ ಸಪ್ಲೈಯರ್‌. ಯಡಿಯೂರು ಬಳಿಯ ಎಂಬಿಆರ್‌ ಬಾರ್‌ ಬಳಿ ಆ.28ರಂದು ಮುಂಜಾನೆ 1.43ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಸ್ವಾಗತ್‌ ಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಠಾಣೆ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?: ಚಾಕು ಇರಿತಕ್ಕೆ ಒಳಗಾಗಿರುವ ಸ್ವಾಗತ್‌ಗೌಡ ಎಂಬಿಆರ್‌ ಬಾರ್‌ನಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದರು.ಆ.28ರಂದು ಮುಂಜಾನೆ 1.43ರ ಸುಮಾರಿಗೆ ಬಾರ್‌ ಕ್ಲೋಸ್‌ ಮಾಡಿಕೊಂಡು ಸ್ವಾಗತ್‌ ಗೌಡ ಹಾಗೂ ಇತರೆ ಸಿಬ್ಬಂದಿ ರೂಮ್‌ಗೆ ತೆರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ಮೂವರು ದುಷ್ಕರ್ಮಿಗಳು, ಬಾರ್‌ ತೆರೆದು ಮದ್ಯ ಕೊಡುವಂತೆ ಕೇಳಿದ್ದಾರೆ. ಸಮಯ ಮೀರಿರುವುದರಿಂದ ಮದ್ಯ ಕೊಡಲು ಸಾಧ್ಯವಿಲ್ಲ ಎಂದು ಸ್ವಾಗತ್‌ ಗೌಡ ಹೇಳಿದ್ದಾರೆ.

ಕಾಂಗ್ರೆಸ್ ಸೇರುತ್ತೇನೆಂದು ಎಲ್ಲೂ ಹೇಳಿಲ್ಲ: ಮಾಜಿ ಸಚಿವ ರೇಣುಕಾಚಾರ್ಯ

ಇದರಿಂದ ಕೆರಳಿದ ದುಷ್ಕರ್ಮಿಗಳು ಏಕಾಏಕಿ ಸ್ವಾಗತ್‌ಗೌಡನ ಮೇಲೆ ಹಲ್ಲೆ ಮಾಡಿದ್ದಾರೆ. ಈ ನಡುವೆ ದುಷ್ಕರ್ಮಿಯೊಬ್ಬ ಚಾಕು ತೆಗೆದು ಸ್ವಾಗತ್‌ಗೌಡನ ಹೊಟ್ಟೆಭಾಗಕ್ಕೆ ಇರಿದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಸ್ವಾಗತ್‌ ಗೌಡ ಕುಸಿದು ಬಿದ್ದಿದ್ದಾನೆ. ಆಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಬಾರ್‌ನ ಇತರೆ ಸಿಬ್ಬಂದಿ ಸ್ವಾಗತ್‌ ಗೌಡನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಗಾಯಾಳು ಸ್ವಾಗತ್‌ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ದುಷ್ಕರ್ಮಿಗಳ ಪೈಕಿ ಓರ್ವನ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios