Koppal: ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆಯ ಅಪೂರ್ಣ ಕಾಮಗಾರಿಗೆ ಯುವಕ ಬಲಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಯ ಅಪೂರ್ಣ ಕಾಮಗಾರಿಗೆ ಯುವಕ ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ (23) ಮೃತ ಯುವಕ. 

A young man died due to incomplete work of road due to the negligence of the officials and contractors gvd

ಕೊಪ್ಪಳ (ಜು.12): ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಯ ಅಪೂರ್ಣ ಕಾಮಗಾರಿಗೆ ಯುವಕ ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ (23) ಮೃತ ಯುವಕ. ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಸಾವನಪ್ಪಿದ್ದು, ಕಾಮಗಾರಿಗೆ ಬಳಸಿದ್ದ ಮಣ್ಣಿಗೆ ಡಿಕ್ಕಿ ಹೊಡೆದು ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾನೆ. ಯಾವುದೇ ಸೂಚನಾ ಫಲಕ ಹಾಕದೇ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಮೇಲೆಯೇ ಮಣ್ಣಿನ ಗುಡ್ಡೆಗಳನ್ನು ಹಾಕಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಘಟನೆ ನಡೆದಿದೆ. ಸದ್ಯ ರಸ್ತೆ ಕಾಮಗಾರಿಯ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ಪಡೆದಿದ್ದು, ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕಾಲು ಜಾರಿ ಕೆರೆಗೆ ಬಿದ್ದು ವಿಕಲನಚೇತನ ಸಾವು: ಕಳೆದ ಬುಧವಾರ ರಾತ್ರಿ ಮತ್ತು ಗುರುವಾರ ನಿರಂತರ ಸುರಿದ ಭಾರಿ ಮಳೆಗೆ ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಹಲವೆಡೆ ತಗ್ಗು ಪ್ರದೇಶಗಳು, ಮನೆಗಳು ಜಲಾವೃತವಾಗಿದ್ದು ಓರ್ವ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಘಟನೆ ನಡೆದಿದೆ. ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಟ್ರಾಡಿಯ ವ್ಯಕ್ತಿಯೊಬ್ಬರು ಗುರುವಾರ ಬೆಳಗ್ಗೆ ಕಾಲು ಜಾರಿ ಕೆರೆಗೆ ಬಿದ್ದು, ಮೃತಪಟ್ಟಿದ್ದಾರೆ. ಪಂಚಾಯಿತಿ ಕಚೇರಿ ಬಳಿಯ ನಿವಾಸಿ ನಿರಂಜನ್‌ (42) ಮೃತರು. ವಿಕಲಚೇತನರಾಗಿದ್ದ ಅವರು ಅವಿವಾಹಿತರಾಗಿದ್ದರು.

ವ್ಯವಹಾರದಲ್ಲಿ ನಷ್ಟ, ಜೀವನದಲ್ಲಿ ಜಿಗುಪ್ಸೆಯಿಂದ ವ್ಯಕ್ತಿ ನೇಣಿಗೆ ಶರಣು

ಮೂಡುಬಿದಿರೆ ಜ್ಯೋತಿನಗರ ಪರಿಸರದಲ್ಲಿ ಭಾರಿ ಸಾಲು ಮರವೊಂದು ಅಂಗಡಿಯೊಂದರ ಮೇಲೆ ಬೀಳುವುದು ಪವಾಡ ಸದೃಶ್ಯ ಎಂಬಂತೆ ತಪ್ಪಿದ್ದು ಸಂಭಾವ್ಯ ದುರಂತವೊಂದು ತಪ್ಪಿದಂತಾಗಿದೆ. ಕೆಲವೆಡೆ ಮನೆಯೊಳಗೆ ನೀರು ಒಸರಿನಂತೆ ಹರಿದು ಬರುವ ಸಮಸ್ಯೆಗಳು ಕಾಣಿಸಿಕೊಂಡಿವೆ. ಮನೆಗಳು ಜಲಾವೃತ: ಪುರಸಭೆ ವ್ಯಾಪ್ತಿಯ, ಆಲಂಗಾರು ಉಳಿಯ, ಬೈಲಾರೆಯ ಮೂರು ಮನೆಗಳು ಜಲಾವೃತಗೊಂಡಿವೆ. ಇಲ್ಲಿನ ಕಲ್ಯಾಣಿ ಪೂಜಾರ್ತಿ, ಲಲಿತಾ ಪೂಜಾರ್ತಿ ಹಾಗೂ ಉದಯ ಎಂಬವರ ಮನೆಗಳಿಗೆ ನೀರು ನುಗ್ಗಿದೆ. ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯರ್‌ ಪುಂಡು ಕಾಲನಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆ, ತೋಟದತ್ತ ಸಾಗಿ ತುಂಬಿಕೊಂಡಿತ್ತು.

ಶಿವಮೊಗ್ಗ ಏರ್‌ಪೋರ್ಟ್‌ ವೆಚ್ಚದಲ್ಲಿ ಅಕ್ರಮ ನಡೆದಿದ್ದರೆ ಕ್ರಮ: ಎಂ.ಬಿ.ಪಾಟೀಲ್‌

ತಪ್ಪಿದ ದುರಂತ: ಮೂಡುಬಿದಿರೆ ಪೇಟೆಯ ಮೆಸ್ಕಾಂ ಕಚೇರಿ ಎದುರಿನ ತಾಜಾ ಮೀನಿನ ಮಳಿಗೆಯ ಮೇಲೆ ಅಪರಾಹ್ನದ ವೇಳಗೆ ಪಕ್ಕದ ಸಾಲು ಮರಗಳ ಪೈಕಿ ಭಾರಿ ಮರವೊಂದು ಉರುಳಿತಾದರೂ ಪಕ್ಕದ ಮರದ ಸಣ್ಣ ಕೊಂಬೆಗೆ ತಾಗಿ ನಿಂತದ್ದು ಪವಾಡವೇ ಎಂಬಂತಿತ್ತು. ಘಟನೆ ನಡೆದಾಗ ಅಂಗಡಿಯೊಳಗೆ ಐದು ಮಂದಿ ಇದ್ದರು. ಕೂಡಲೇ ಅರಣ್ಯಾಧಿಕಾರಿಗಳು, ಪೋಲೀಸ್‌, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕ್ರೇನ್‌, ಜೆಸಿಬಿ ಬಳಸಿ ಭಾರೀ ಮರವನ್ನು ತೆರವುಗೊಳಿಸಲು ಶ್ರಮಿಸಿದರು. ಅಕ್ಕ ಪಕ್ಕದ ಅಪಾಯಕಾರಿ ಮರದ ಕೊಂಬೆಗಳನ್ನೂ ಸವರಿದರು. ಸಂಜೆವರೆಗೂ ನಡೆದ ಈ ತೆರವು ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ, ಬಂಟ್ವಾಳದತ್ತ ಸಾಗುವ ಜನ ವಾಹನ ಸವಾರರಿಗೆ ಕೊಂಚ ಅಡಚಣೆಯಾಗಿತ್ತು.

Latest Videos
Follow Us:
Download App:
  • android
  • ios