Vijayanagara; ಬೇಲಿಯೇ ಎದ್ದು ಹೊಲ ಮೇಯ್ದ ಕಥೆ, ದೂರು ನೀಡಲು ಬಂದ ಮಹಿಳೆಗೆ ಲೈಂಗಿಕ ಕಿರುಕುಳ
ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ ಪೇದೆಯೊಬ್ಬ ಅಸಭ್ಯವಾಗಿ ಮಾತನಾಡಿದ್ದಲ್ಲೇ ತಮ್ಮ ಜೊತೆ ಸಹಕರಿಸಿದ್ರೇ, ಪ್ರಕರಣ ತಮ್ಮ ಪರವಾಗಿ ಬರುವಂತೆ ಮಾಡಿಕೊಡುತ್ತೆನೆಂದು ಅಮೀಷವೊಡ್ಡಿರೋ ಘಟನೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ
ವಿಜಯನಗರ (ಸೆ.23): ಇದು ಬೇಲಿಯೇ ಎದ್ದು ಹೊಲ ಮೇಯ್ದ ಕತೆಯಾಗಿದೆ. ಯಾಕಂದ್ರೇ, ದೂರು ನೀಡಲು ಠಾಣೆಗೆ ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ ಪೇದೆಯೊಬ್ಬ ಅಸಭ್ಯವಾಗಿ ಮಾತನಾಡಿದ್ದಲ್ಲೇ ತಮ್ಮ ಜೊತೆ ಸಹಕರಿಸಿದ್ರೇ, ಪ್ರಕರಣ ತಮ್ಮ ಪರವಾಗಿ ಬರುವಂತೆ ಮಾಡಿಕೊಡುತ್ತೆನೆಂದು ಅಮೀಷವೊಡ್ಡಿರೋ ಘಟನೆ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಘಟನೆಯಿಂದ ಎಚ್ಚತ್ತ ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ ಠಾಣೆಯ ಮುಖ್ಯ ಪೇದೆಯನ್ನು ಅಮಾನತ್ತು ಮಾಡಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯ ಹೆಡ್ ಕಾನಿಸ್ಟೇಬಲ್ ಮಾರೆಪ್ಪ ಅವರೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಮಹಿಳೆಯೊಬ್ಬಳು ತನ್ನ ಚಿಕ್ಕಮ್ಮನ ಮಗಳ ಜೊತೆ ಹಣ ಮತ್ತು ಇತರೆ ಕೌಟುಂಬಿಕ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮಹಿಳೆ ಕೊಟ್ಟೂರು ಠಾಣೆಗೆ ತೆರಳಿದ್ದಾಳೆ. ಠಾಣೆಗೆ ಬಂದಾಗ ಸಂತ್ರಸ್ತ ಮಹಿಳೆಯ ಮೊಬೈಲ್ ನಂಬರ್ ತೆಗೆದುಕೊಂಡಿದ್ದ ಮುಖ್ಯ ಪೇದೆ ಮಾರೆಪ್ಪ ಅವರು, ಪದೇ ಪದೇ ಪೋನ್ ಮಾಡಿ ಮಹಿಳೆಗೆ ಕಿರಿಕಿರಿಯಾಗುವಂತೆ ವರ್ತಿಸಿದ್ದಾರೆ. ಅಲ್ಲದೇ ತಮ್ಮ ಜೊತೆ ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಕೇಸ್ ನಿಮ್ಮ ಕಡೆ ಮಾಡುತ್ತೇನೆಂದು ಆಮೀಷವೊಡ್ಡಿದ್ದಾರೆಂದು ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ. ಇನ್ನೂ ನಾವಿಬ್ಬರು ಒಂದೆ ಜಾತಿಯವರು ಎಂದು ಹೆಳೋ ಮೂಲಕ ಜಾತಿ ವಿಚಾರ ಬಳಸಿ ಬುಟ್ಟಿಗೆ ಹಾಕಿಕೊಳ್ಳಲು ಮಾರೆಪ್ಪ ಯತ್ನಿಸಿದ್ದಾರೆಂತೆ. ಇದೆಲ್ಲವೂ ತೆಲುಗಿನಲ್ಲಿ ಸಂಭಾಷಣೆ ಮಾಡಿರೋ ಆಡಿಯೋ ದಾಖಲೆ ಸಮೇತ ಸಂತ್ರಸ್ತ ಮಹಿಳೆ ದೂರನ್ನು ನೀಡಿದ್ದಾರೆ.
ಹರಿಹರಕ್ಕೆ ಅಥವಾ ದಾವಣಗೆರೆಗೆ ಹೋಗೋಣ: ಇನ್ನೂ ಮೊಬೈಬ್ ಸಂಭಾಷಣೆಯಲ್ಲಿ ತೀರ ಅಸಭ್ಯವಾಗಿ ಮಾತನಾಡಿದ್ದು, ನಿನ್ನ ಮೇಲೆ ಮನಸ್ಸಾಗಿದೆ ಎಲ್ಲಾದರೂ ಹೋಗಿ ಇಬ್ಬರು ಸೇರೋಣ. ಕೊಟ್ಟೂರು ವ್ಯಾಪ್ತಿ ಯಲ್ಲಿ ಸೇರಿದ್ರೇ, ಯಾರಿಗಾದ್ರೂ ಗೊತ್ತಾಗುತ್ತದೆ ದಾವಣಗೆರೆ ಅಥವಾ ಹರಿಹರದ ಲಾಡ್ಜ್ ನಲ್ಲಿ ರೂಂ ಮಾಡುತ್ತೇನೆ. ಏನು ತೊಂದರೆಯಾಗೋದಿಲ್ಲ ಲೈಂಗಿಕ ಕ್ರಿಯೆಗೆ ಸಮ್ಮತಿ ನೀಡುವಂತೆ ಒತ್ತಾಯಿಸಿದ್ದಾರಂತೆ. ಪ್ರಕರಣದ ಗಂಭೀರತೆಯನ್ನು ಅರಿತ ವಿಜಯನಗರ ಜಿಲ್ಲೆಯ ಎಸ್ಪಿ ಅರುಣ್ ಕುಮಾರ ಪೇದೆಯನ್ನು ಅಮಾನತ್ತು ಮಾಡೋದ್ರ ಜೊತೆ ಕೊಟ್ಟೂರು ಪೊಲೀಸ್ ಠಾಣೆ ಪಿಎಸ್ಐ ವಿಜಯ ಕೃಷ್ಣ ಅವರಿಗೆ ಪ್ರಕರಣದ ತನಿಖೆ ಮಾಡುವಂತೆ ಆದೇಶ ನೀಡಿದ್ದಾರೆ.
ಮೈಗೆ ಎಣ್ಣೆ ಸವರಿಕೊಂಡು ಬೆತ್ತಲಾಗಿ ಕಳವಿಗೆ ಇಳಿಯುತ್ತಿದ್ದ ಖದೀಮ ಅಂದರ್
ರದ್ದಾಗಿದ್ದರೂ ತಲಾಖ್ ಕೊಟ್ಟ! ಕೊಪ್ಪಳ ಕೋರ್ಟ ಆವರಣದಲ್ಲಿ ಘಟನೆ
ತ್ರಿವಳಿ ತಲಾಖ್ ರದ್ದುಗೊಂಡಿದ್ದರೂ ಪತ್ನಿಗೆ ತಲಾಖ್ ನೀಡಿದ ಪತಿ ವಿರುದ್ಧ ದೂರು ದಾಖಲಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಪ್ರಕರಣ ಇದಾಗಿದೆ. ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ದೂರು ದಾಖಲಿಸಿ, ನ್ಯಾಯಾಲಯದ ಮೊರೆ ಹೋಗಿದ್ದ ಪತ್ನಿಗೆ ನ್ಯಾಯಾಲಯದ ಆವರಣದಲ್ಲಿಯೇ ತಲಾಖ್ ನೀಡಿದ್ದ (ಮೂರು ಬಾರಿ ತಲಾಖ್ ಘೋಷಿಸಿದ್ದು) ಹಿನ್ನೆಲೆಯಲ್ಲಿ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ, ಎಸ್ಪಿ ಲಕ್ಷ್ಮೀಪ್ರಸಾದ್ ಸುದ್ದಿಗೋಷ್ಠಿ
ನಗರದ ಮರಿಶಾಂತವೀರನಗರ ನಿವಾಸಿ ಖಾಲೀದಾ ಬೇಗಂ ಅವರು ತಮ್ಮ ಪತಿಯ ವಿರುದ್ಧ ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ 2021ರಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ನಗರದ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಕೋರ್ಚ್‌ಗೆ ಹಾಜರಾಗಲು ಸೆ. 15ರಂದು ಖಾಲೀದಾಬೇಗಂ ಅವರು ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವೇಳೆ ನ್ಯಾಯಾಲಯದ ಆವರಣದಲ್ಲಿಯೇ ಪತಿ ಸೈಯದ್ ವಾಹೀದ್ ಅತ್ತರ ಆಗಮಿಸಿ ಷರಿಯತ್ ಪ್ರಕಾರ ಬೇರೆ ಮದುವೆಯಾಗುತ್ತೇನೆ, ನಿನಗೆ ತಲಾಖ್ ಕೊಡುತ್ತಿದ್ದೇನೆ. ತಂಟೆಗೆ ಬಂದರೆ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದು ಅಲ್ಲದೆ ಮೂರು ಬಾರಿ ತಲಾಖ್, ತಲಾಖ್, ತಲಾಖ್ ಎಂದು ಹೇಳಿ ಹೋಗಿದ್ದಾನೆ ಎಂದು ದೂರುದಾರರು ತಿಳಿಸಿದ್ದಾರೆ. ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ತ್ರಿವಳಿ ತಲಾಕ್ ವಿರುದ್ಧ ದೂರು ದಾಖಲಿಸಿದ್ದಾರೆ.