Asianet Suvarna News Asianet Suvarna News

ಬಟ್ಟೆ ತೊಳೆಯಲು ಹೋದ ಮಹಿಳೆ ಕಾಲು ಜಾರಿ ಕೆರೆಗೆ ಹಾರ!

ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಆಯಾತಪ್ಪಿ ಬಿದ್ದು ಮಹಿಳೆಯೋರ್ವಳು ಮೃತಪಟ್ಟ ದುರ್ಘಟನೆ ರಾಮನಗರ ಪಟ್ಟಣದ ಬೋಳಪ್ಪನಕೆರೆಯಲ್ಲಿ ನಡೆದಿದೆ. ರೇಣುಕಮ್ಮ(30) ಮೃತ ಮಹಿಳೆ, ರಾಮನಗರ ಪಟ್ಟಣದ ಕೋಡಿಪುರ ನಿವಾಸಿಯಾಗಿರುವ ಮಹಿಳೆ.

A woman drowned in the lake and died at ramanagar town rav
Author
First Published May 23, 2024, 2:33 PM IST

ರಾಮನಗರ (ಮೇ.23): ಕೆರೆಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಆಯಾತಪ್ಪಿ ಬಿದ್ದು ಮಹಿಳೆಯೋರ್ವಳು ಮೃತಪಟ್ಟ ದುರ್ಘಟನೆ ರಾಮನಗರ ಪಟ್ಟಣದ ಬೋಳಪ್ಪನಕೆರೆಯಲ್ಲಿ ನಡೆದಿದೆ.

ರೇಣುಕಮ್ಮ(30) ಮೃತ ಮಹಿಳೆ, ರಾಮನಗರ ಪಟ್ಟಣದ ಕೋಡಿಪುರ ನಿವಾಸಿಯಾಗಿರುವ ಮಹಿಳೆ. ಇಂದು ತನ್ನಿಬ್ಬರು ಮಕ್ಕಳೊಂದಿಗೆ ಬಟ್ಟೆ ತೊಳೆಯಲು ಬೋಳಪ್ಪನಕೆರೆಗೆ ಹೋಗಿದ್ದ ಮಹಿಳೆ. ಇಳಿಯುವ ವೇಳೆ ಕಾಲು ಜಾರಿ ಕೆರೆಯಲ್ಲಿ ಬಿದ್ದಿರುವ ಮಹಿಳೆ, ಬಿದ್ದ ಬಳಿಕ ಸಹಾಯಕ್ಕೆ ಕಿರುಚಾಡಿರುವ ಮಹಿಳೆ ಜೊತೆಗಿದ್ದ ಮಕ್ಕಳ ಚಿಕ್ಕವಯಸ್ಸಿನವು ಸಹಾಯ ಮಾಡಲಾಗದೆ ತಾಯಿ ಮುಳುಗುತ್ತಿದ್ದರು ಅಸಹಾಯಕವಾಗಿ ನಿಂತ ಮಕ್ಕಳು. ಸ್ವಲ್ಪ ಯಾಮಾರಿದ್ದರೂ ಮಕ್ಕಳ ಸಹ ಕೆರೆಗೆ ಹಾರ ಆಗಬೇಕಿತ್ತು. ಅದೃಷ್ಟವಶಾತ್ ಮಕ್ಕಳು ಬದುಕುಳಿದಿವೆ.

ಘಟನೆ ಬಳಿಕ ಸ್ಥಳಕ್ಕೆ ಐಜೂರು ಪೊಲೀಸರು ಭೇಟಿ ನೀಡಿ ಮಹಿಳೆಯ ಮೃತದೇಹ ಹೊರತೆಗೆದಿದ್ದಾರೆ.  

ವಿಷಾಹಾರ ಸೇವಿಸಿ 55ಕ್ಕೂ ಹೆಚ್ಚು ಕುರಿಗಳು ಸಾವು; ಮುಂದೇನು ತೋಚದೇ ಕುರಿಗಾಹಿಗಳು ಕಂಗಾಲು! 

ಟ್ರ್ಯಾಕ್ಟರ್ ಪಲ್ಟಿ ಓರ್ವ ಸಾವು

ಚಿಕ್ಕಮಗಳೂರು: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಒಕ್ಕಳ್ಳಿ ಬಳಿ ನಡೆದಿದೆ.

ಯಾದಗಿರಿ: ಪ್ರತ್ಯೇಕ ಅಪಘಾತ ಮೂವರು ದುರ್ಮರಣ 

A woman drowned in the lake and died at ramanagar town rav

ಸತೀಶ್ (28) ಸ್ಥಳದಲ್ಲೇ ಸಾವು, ಚಾಲಕ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರು. ಟ್ರ್ಯಾಕ್ಟರ್‌ನಲ್ಲಿ 50ಕ್ಕೂ ಹೆಚ್ಚು ಗೊಬ್ಬರ ಚೀಲಗಳನ್ನು ತುಂಬಿಕೊಂಡು ಬಣಕಲ್‌ನಿಂದ  ಸಾರಗೋಡು ಗ್ರಾಮಕ್ಕೆ ಹೋಗುತ್ತಿದ್ದ ಟ್ರ್ಯಕ್ಟರ್. ರಸ್ತೆ ಇಳಿಜಾರಿಗೆ ಬರುತ್ತಿದ್ದಂತೆ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಉಲ್ಟಾ ಬಿದ್ದಿರೋ ಟ್ರ್ಯಾಕ್ಟರ್. ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios