Asianet Suvarna News Asianet Suvarna News

ಪಿಎಚ್‌ಡಿ ಮಾಡ್ತಿದ್ದ ಉಗಾಂಡ ವಿದ್ಯಾರ್ಥಿ ನಾಪತ್ತೆ!

  • ಪಿಎಚ್‌ಡಿ ಮಾಡುತ್ತಿದ್ದ ಉಗಾಂಡ ವಿದ್ಯಾರ್ಥಿ ನಾಪತ್ತೆ
  • ತತ್ವಶಾಸ್ತ್ರ ವಿಭಾಗದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ಜೋಯಲ್‌
  • ವಿವಿಗೆ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳ ಭೇಟಿ
A Ugandan student who was doing PhD is missing! at dharwad university rav
Author
First Published Oct 29, 2022, 1:02 PM IST | Last Updated Oct 29, 2022, 1:02 PM IST

ಧಾರವಾಡ (ಅ.29) : ಕರ್ನಾಟಕ ವಿಶ್ವವಿದ್ಯಾಲಯದ ತತ್ವಶಾಸ್ತ್ರ ವಿಭಾಗದಲ್ಲಿ ಪಿಎಚ್‌.ಡಿ ಮಾಡುತ್ತಿದ್ದ ಉಗಾಂಡಾದ ಸಂಶೋಧನಾರ್ಥಿಯೊಬ್ಬ ಕಳೆದ ಮೇ ತಿಂಗಳಿಂದ ನಾಪತ್ತೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಯನ್ನು ಪತ್ತೆ ಹಚ್ಚುವ ಪ್ರಯತ್ನದಲ್ಲಿ ಈ ವರೆಗೂ ಯಶಸ್ಸು ಸಿಕ್ಕಿಲ್ಲ. ಕವಿವಿ ಕುಲಸಚಿವ ಯಶಪಾಲ್‌ ಕ್ಷೀರಸಾಗರ ಹುಬ್ಬಳ್ಳಿ-ಧಾರವಾಡ ಪೊಲೀಸ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಸಂಶೋಧನಾ ವಿದ್ಯಾರ್ಥಿ ನಾಪತ್ತೆಯಾಗಿರುವ ವಿಷಯ ತಿಳಿಸಿದ್ದು, ಈ ಪತ್ರದ ಪ್ರತಿಯನ್ನು ಹೊಸದೆಹಲಿಯಲ್ಲಿರುವ ಉಗಾಂಡಾ ರಾಯಭಾರಿ ಕಚೇರಿಗೂ ಕಳುಹಿಸಿದ್ದಾರೆ.

ನಾಪತ್ತೆಯಾದ ವ್ಯಕ್ತಿಯ ಅಸ್ತಿಪಂಜರ ಪತ್ತೆ: ಹೆಸ್ಕಾಂ ವಿರುದ್ಧ ಕೊಲೆ ಪ್ರಕರಣ ದಾಖಲು

ಕುಲಸಚಿವರ ಪತ್ರದ ಪ್ರಕಾರ, ಉಗಾಂಡಾ ದೇಶದ ನಾಗರಿಕ ಕನ್ನಾಯಾನ ಜೋಯಲ್‌ ಕವಿವಿ ತತ್ವಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಡಾ. ಎಂ.ಎ. ಜಾಲಿಹಾಳ ಬಳಿ 2016ರ ಮಾಚ್‌ರ್‍ 23ರಂದು ಸಂಶೋಧನಾ ವಿದ್ಯಾರ್ಥಿಯಾಗಿ ಸೇರ್ಪಡೆಯಾಗಿದ್ದರು. ವಿಶ್ವವಿದ್ಯಾಲಯದ ಕಿಚನೆಟ್‌ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ಅವರಿಗೆ ಮಾಚ್‌ರ್‍ 22, 2021ರ ವರೆಗೆ ಐದು ವರ್ಷಗಳ ಅವಧಿಗೆ ಸಂಶೋಧನಾ ಸಮಯ ನೀಡಲಾಗಿತ್ತು. ಈ ಅವಧಿಯಲ್ಲಿ ಪ್ರಬಂಧ ಮಂಡನೆ ಆಗದೇ ಇರುವುದರಿಂದ ಅವರು ಸಪ್ಟೆಂಬರ್‌ 22, 2021ರ ವರೆಗೆ ಅವಧಿ ವಿಸ್ತರಣೆ ಕೋರಿದ್ದರು. 2021ರ ಆಗಸ್ಟ6ರಂದು ಅವಧಿ ವಿಸ್ತರಣೆಗೆ ಮತ್ತೊಂದು ಪತ್ರ ನೀಡಿದ್ದ ಅವರು, ತಮ್ಮ ಸಂಶೋಧನಾ ಮಾರ್ಗದರ್ಶಕರನ್ನು ಕೊನೆಯ ಬಾರಿ 2021ರ ಅಕ್ಟೋಬರ್‌ 13ರಂದು ಭೇಟಿಯಾಗಿ ತಾವು ಪಿಎಚ್‌ಡಿ ವಿದ್ಯಾರ್ಥಿ ಎಂಬ ಅಧಿಕೃತ ಪ್ರಮಾಣ ಪತ್ರ ನೀಡುವಂತೆ ವಿನಂತಿಸಿ ತಮ್ಮ ವೀಸಾ ವಿಸ್ತರಣೆಗೆ ಈ ಪತ್ರ ಬೇಕಾಗಿದೆ ಎಂದು ತಿಳಿಸಿದ್ದರು. ಜೋಯೆಲ್‌ ತಮ್ಮ ಸಂಶೋಧನೆಯನ್ನು ಮಾಚ್‌ರ್‍ 21, 2022ರ ಒಳಗೆ ಮುಗಿಸಿ ಪ್ರಬಂಧವನ್ನು ಮಂಡಿಸಬೇಕೆಂದು ಪೊ›. ಜಾಲಿಹಾಳ ಸೂಚಿಸಿದ್ದರು.

ಈ ಮಧ್ಯೆ ಕಿಚನೆಟ್‌ ಹಾಸ್ಟೆಲ್‌ನ ವಾರ್ಡನ್‌ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು ಜೋಯೆಲ್‌ ಹಾಸ್ಟೇಲನಲ್ಲಿ ಜುಲೈ 2017ರಿಂದ 2022ರ ಮೇ ವರೆಗೆ ವಾಸವಾಗಿದ್ದರು ಎಂದು ತಿಳಿಸಿದರು. ಸಂಶೋಧನೆಗೆ ಅವಧಿ ವಿಸ್ತರಣೆ ಪಡೆದಿದ್ದ ಜೋಯಲ್‌ ಇದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಸಂದಾಯ ಮಾಡಬೇಕಿದ್ದ ಶುಲ್ಕವನ್ನು ನೀಡಿಲ್ಲ ಎಂದು ತಿಳಿಸಲಾಗಿದೆ.

ಜೋಯಲ್‌ ಬಳಿ ಉಗಾಂಡಾ ರಿಪಬ್ಲಿಕನ ಪಾಸಪೋರ್ಚ್‌ ಇದ್ದು, ಅದರ ಅವಧಿ 2022ರ ಸಪ್ಟೆಂಬರ್‌ 18ಕ್ಕೆ ಮುಕ್ತಾಯಗೊಂಡಿದೆ. ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಉಗಾಂಡಾ ರಾಯಭಾರಿ ಕಚೇರಿಗೆ ವಿವಿ ತಿಳಿಸಿದೆ ಎಂದು ಪತ್ರಿಕೆಗೆ ಕ್ಷೀರಸಾಗರ ಮಾಹಿತಿ ನೀಡಿದರು. ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ವಿವಿಗೆ ಗುರುವಾರವಷ್ಟೇ ಭೇಟಿ ನೀಡಿ ಈ ಕುರಿತು ವಿಚಾರಣೆ ನಡೆಸಿದ್ದಾರೆ.

ವಿಚ್ಛೇದನಕ್ಕೆ ಹೆಂಡ್ತಿ ನೋಟಿಸ್‌: ಮನನೊಂದು ಗಂಡ ನಾಪತ್ತೆ..!

ಮನೆ ಹಾನಿ ತಾರತಮ್ಯ: ಸಂತ್ರಸ್ತ ಆತ್ಮಹತ್ಯೆ

ಮನೆಹಾನಿಗೆ ಸರ್ಕಾರ ನೀಡುವ ಕಟಗೇರಿಯಲ್ಲಿ ತಾರತಮ್ಯ ಆಗಿರುವ ಹಿನ್ನೆಲೆಯಲ್ಲಿ ಮನನೊಂದ ಸಂತ್ರಸ್ತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಮಾಧನಬಾವಿ ಗ್ರಾಮದ ಭೀಮಪ್ಪ ಪಾಟೀಲ(60) ಆತ್ಮಹತ್ಯೆಗೆ ಶರಣಾದ ಸಂತ್ರಸ್ತ. ನಿರಂತರ ಸುರಿದ ಮಳೆಗೆ ಭೀಮಪ್ಪ ಮನೆ ಸಂಪೂರ್ಣ ಬಿದ್ದಿತ್ತು. ಗುರುವಾರ ವರೆಗೆ ಬಿ ಕಟಗೇರಿ ಇತ್ತು. ಶುಕ್ರವಾರ ಏಕಾಏಕಿ ಸಿ ಕಟಗೇರಿಗೆ ಸೇರಿದಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶವಗಾರದ ಮುಂದೆ ಭೀಪಪ್ಪ ಕುಟುಂಬದ ಸದಸ್ಯರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಶವ ಇಟ್ಟು ಸ್ಥಳಕ್ಕೆ ತಹಸೀಲ್ದಾರ್‌ ಬರಬೇಕೆಂದು ಘೋಷಣೆ ಕೂಗಿದರು. ಕೂಡಲೇ ಪರಿಹಾರ ಬಿಡುಗಡೆಗೆ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಸಂತೋಷ ಹಿರೇಮಠ ಕಾರ್ಯಕರ್ತರ ಮನವೊಲೈಕೆಗೆ ಯತ್ನಿಸಿ ಪರಿಹಾರದ ಭರವಸೆ ನೀಡಿದರು. ಈ ಘಟನೆ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Latest Videos
Follow Us:
Download App:
  • android
  • ios