ಬಾಡಿ ಕ್ಯಾಮೆರಾ ಹಾಕಿದ್ರೂ ಬಿಡದ ಭ್ರಷ್ಟಾಚಾರ; ಡ್ರಂಕ್‌ ಆ್ಯಂಡ್‌ ಡ್ರೈವ್ ಎಂದು ಮಹಿಳೆಗೆ ಬೆದರಿಸಿ 5 ಸಾವಿರ ಲಂಚ ಪಡೆದ ಪೇದೆ!

ತಮ್ಮ ಪುತ್ರಿಗೆ ಪಾನಮತ್ತ ಚಾಲನೆ ಮಾಡಿರುವುದಾಗಿ ಬೆದರಿಸಿ ₹5 ಸಾವಿರ ವಸೂಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಜೀವನ್‌ಭೀಮಾ ನಗರ ಸಂಚಾರ ಠಾಣೆ ಕಾನ್‌ಸ್ಟೇಬಲ್‌ವೊಬ್ಬರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

A policeman threatened  woman to drink and drive and received a bribe of 5 thousand at bengaluru rav

ಬೆಂಗಳೂರು (ಫೆ.26) : ತಮ್ಮ ಪುತ್ರಿಗೆ ಪಾನಮತ್ತ ಚಾಲನೆ ಮಾಡಿರುವುದಾಗಿ ಬೆದರಿಸಿ ₹5 ಸಾವಿರ ವಸೂಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಜೀವನ್‌ಭೀಮಾ ನಗರ ಸಂಚಾರ ಠಾಣೆ ಕಾನ್‌ಸ್ಟೇಬಲ್‌ವೊಬ್ಬರ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಜೆ.ಬಿ.ನಗರ ಕಾನ್‌ಸ್ಟೇಬಲ್ ಹುಚ್ಚುಸಾಬ್‌ ಕಡಿಮಣಿ ಮೇಲೆ ಆರೋಪ ಬಂದಿದ್ದು, ಕಾನ್‌ಸ್ಟೇಬಲ್ ವಿರುದ್ಧ ವಿಚಾರಣೆ ನಡೆಸಿ ಮುಂದಿನ ಶಿಸ್ತು ಕ್ರಮಕ್ಕೆ ಆಯುಕ್ತರಿಗೆ ಭಾನುವಾರ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಜೆ.ಬಿ.ನಗರ ಸಮೀಪ ಇಸ್ರೋ ಜಂಕ್ಷನ್‌ ಬಳಿ ಪೊಲೀಸರು ಶನಿವಾರ ರಾತ್ರಿ ಪಾನಮತ್ತ ಚಾಲಕರ ತಪಾಸಣೆ ನಡೆಸುವ ವೇಳೆ ಈ ಕೃತ್ಯ ನಡೆದಿದೆ.

ಕ್ಯಾಮೆರಾ ತೆಗೆದಿಟ್ಟು ವಸೂಲಿ:

ವಾರಾಂತ್ಯದಲ್ಲಿ ಡ್ರಿಂಕ್ ಆ್ಯಂಡ್‌ ಡ್ರೈವ್‌ ತಪಾಸಣೆಗೆ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಸ್ರೋ ಜಂಕ್ಷನ್‌ನಲ್ಲಿ ಶನಿವಾರ ರಾತ್ರಿ ಜೆ.ಬಿ.ನಗರ ಸಂಚಾರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಮಣಿಪಾಲ್ ಆಸ್ಪತ್ರೆ ಕಡೆಯಿಂದ ಬಂದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿದ ಜೆ.ಬಿ.ನಗರ ಸಂಚಾರ ಠಾಣೆ ಕಾನ್‌ಸ್ಟೇಬಲ್ ಹುಚ್ಚುಸಾಬ್‌, ಆ ಮಹಿಳೆಗೆ ಅಲ್ಕೋಮೀಟರ್‌ ಮೂಲಕ ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ನಡೆಸಿದ್ದಾರೆ. ಆದರೆ ಮಹಿಳೆ ಮದ್ಯ ಸೇವಿಸದೆ ಇದ್ದರೂ ₹15 ಸಾವಿರ ನೀಡುವಂತೆ ಕಾನ್‌ಸ್ಟೇಬಲ್ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಗೂಗಲ್ ಪೇ ಮೂಲಕ ₹5 ಸಾವಿರ ಪಡೆದು ಅವರನ್ನು ಕಾನ್‌ಸ್ಟೇಬಲ್ ಕಳುಹಿಸಿದ್ದಾರೆ.

ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ, 43 ಚಾಲಕರ ವಿರುದ್ಧ ಕೇಸ್‌

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ‘ಎಕ್ಸ್‌’ ತಾಣದಲ್ಲಿ ಮಹಿಳೆಯ ತಂದೆ ಕೋಶಿ ವರ್ಗೀಸ್ ದೂರು ನೀಡಿದ್ದಾರೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಕೂಡಲೇ ಘಟನೆ ಬಗ್ಗೆ ವಿಚಾರಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ. ಅಂತೆಯೇ ವಿಚಾರಣೆ ನಡೆಸಿದಾಗ ಕಾನ್‌ಸ್ಟೇಬಲ್ ಹಣ ಪಡೆದಿರುವುದು ಖಚಿತವಾಗಿದೆ. ಅಲ್ಲದೆ ವಾಹನ ತಪಾಸಣೆ ವೇಳೆ ಬಾಡಿ ವೋರ್ನ್ ಕ್ಯಾಮೆರಾ ಧರಿಸುವಂತೆ ನಿಯಮ ಇದೆ. ವಾಹನ ತಪಾಸಣೆ ವೇಳೆ ತನ್ನ ಕ್ಯಾಮೆರಾ ಮ್ಯೂಟ್ ಮಾಡಿಕೊಂಡು ಕಾನ್‌ಸ್ಟೇಬಲ್ ಹಣ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ

Latest Videos
Follow Us:
Download App:
  • android
  • ios