Asianet Suvarna News Asianet Suvarna News

ಮೈಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ!

ಮೈ ಮೇಲೆ ಡೀಸೆಲ್ ಸುರಿದು ಬೆಂಕಿ ಹಂಚಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಫತ್ತೆಪುರ ಗ್ರಾಮದಲ್ಲಿ ನಡೆದಿದೆ.

A married man commits suicide in kalaburagi district today rav
Author
First Published Aug 16, 2024, 7:51 PM IST | Last Updated Aug 16, 2024, 7:56 PM IST

ಕಲಬುರಗಿ (ಆ.16): ಮೈ ಮೇಲೆ ಡೀಸೆಲ್ ಸುರಿದು ಬೆಂಕಿ ಹಂಚಿಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಫತ್ತೆಪುರ ಗ್ರಾಮದಲ್ಲಿ ನಡೆದಿದೆ.

ಮಹೇಶ್ ಮಾರುತಿ ನಾಗೇನಕರ್ (27) ಮೃತ ದುರ್ದೈವಿ. ಮೃತ ಮಹೇಶ್ ಮೂಲತಃ ಬೀದರ್ ಜಿಲ್ಲೆಯ ರೇಕುಳಗಿ ಗ್ರಾಮದ ನಿವಾಸಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಫತ್ತೆಪುರ ಗ್ರಾಮದ ಈಶ್ವರಿ ಎಂಬಾಕೆಯನ್ನು ಮದುವೆಯಾಗಿದ್ದ ಮಹೇಶ್. ಮದುವೆ ಬಳಿಕ ಚೆನ್ನಾಗಿದ್ದ ದಂಪತಿಗಳು ಇತ್ತೀಚೆಗೆ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ದ ಪತ್ನಿ.  ತವರಿಗೆ ಹೋದ ಪತ್ನಿ ವಾಪಸ್ ಬಾರದೇ ಇದ್ದುದ್ದರಿಂದ ಮೃತ ಮಹೇಶ್ ಕೂಡ ಹೆಂಡತಿಯ ತವರು ಮನೆಗೆ ಬಂದು ನೆಲೆಸಿದ್ದ. ಆದರೆ ಇಂದು ಅದೇನಾಯಿತು. ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಟ್ರ್ಯಾಕ್ಟರ್‌ಗೆ ಹಾಕಲು ಡೀಸೆಲ್ ಬೇಕಾಗಿದೆ ಎಂದು ತೆಗೆದುಕೊಂಡು ಹೋದವನು ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ರಾಮನಗರ: ಪ್ರೀತಿಗೆ ಪೋಷಕರ ವಿರೋಧ, ಯುವಕ ನೇಣಿಗೆ ಶರಣು, ಚಾಕು ಇರಿದುಕೊಂಡ ಯುವತಿ

ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೇ? ಆನಾರೋಗ್ಯವೇ? ಜೀವನದಲ್ಲಿ ಜುಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾದನೇ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ ಬಳಿಕವೇ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ.
 

Latest Videos
Follow Us:
Download App:
  • android
  • ios