ಮಾಟ ತೆಗಿಸೋದಾಗಿ ಇಡೀ ಕುಟುಂಬಕ್ಕೆ ಲಕ್ಷ ಲಕ್ಷ ಉಂಡೆನಾಮ; ಸ್ನೇಹಿತನಿಂದಲೇ ವಂಚನೆ!
ಮಾಟ ತೆಗಿಸೋದಾಗಿ ಸ್ನೇಹಿತನೇ ಇಡೀ ಕುಟುಂಬಕ್ಕೆ ಲಕ್ಷ ಲಕ್ಷ ಉಂಡೆನಾಮ ಹಾಕಿ ಪರಾರಿಯಾದ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ಜು.16): ಮಾಟ ತೆಗಿಸೋದಾಗಿ ಸ್ನೇಹಿತನೇ ಇಡೀ ಕುಟುಂಬಕ್ಕೆ ಲಕ್ಷ ಲಕ್ಷ ಉಂಡೆನಾಮ ಹಾಕಿ ಪರಾರಿಯಾದ ಘಟನೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದೀಪಕ್, ವಂಚನೆಗೊಳಗಾದ ವ್ಯಕ್ತಿ. ಮನು ವಂಚಿಸಿ ಪರಾರಿಯಾಗಿರುವ ಆರೋಪಿ. ದೀಪಕ್, ಮನು ಇಬ್ಬರೂ ಫೇಸ್‌ಬುಕ್ ಮೂಲಕ ಪರಿಚಯವಾಗಿ ಆತ್ಮೀಯ ಸ್ನೇಹಿತರಾಗಿದ್ದರು. ರಾತ್ರಿವೇಳೆ ಕೆಟ್ಟಕನಸುಗಳು ಬಿಳುತ್ತಿರುವ ಬಗ್ಗೆ ಮನು ಬಗ್ಗೆ ಹೇಳಿಕೊಂಡಿದ್ದ ದೀಪಕ್. ನಾನು ಕೈ ನೋಡಿ
ಉದ್ಯಮಿ ಶಿವಕಾಂತ ಸಾವಿಗೆ ಕಾರಣವಾಯಿತಾ ಮಾಟಮಂತ್ರ? ಇದರಿಂದಲೇ ಸಾವು ಎಂದು ಪತ್ನಿ ದೀಪಾ ಆರೋಪ!
ಈ ವೇಳೆ ದೀಪಕ್ ಕೈ ನೋಡಿ 'ಯಾರೋ ಮಾಟ ಮಾಡಿದ್ದಾರೆ ನಿಂಗೆ' ಎಂದಿದ್ದ ಮನು. ಇದರಿಂದ ಭಯಗೊಂಡಿದ್ದ ದೂರುದಾರ ದೀಪಕ್. ಈಗ ಏನು ಮಾಡೋದು ಅಂತಾ ಆರೋಪಿ ಮನುವನ್ನ ಕೇಳಿದ್ದಾನೆ. ಇದೇ ಅವಕಾಶಕ್ಕೆ ಕಾದಿದ್ದ ಆರೋಪಿ, ಇದರಿಂದ ಪರಿಹಾರ ಇದೆ ಛಾಯಾದೇವಿಯ ಮುಂದೆ ನಿಲ್ಲಿಸಿ ಪೂಜೆ ಮಾಡಿಸಿ ಮಾಟ ತೆಗೆದ್ರೆ ಸರಿಹೋಗುತ್ತೆ ಎಂದು ನಂಬಿಸಿದ್ದಾನೆ. ಅವನ ಮಾತನ್ನ ನಂಬಿದ್ದ ದೀಪಕ್ ಮಾಟ ತೆಗೆಸಲು ಮುಂದಾಗಿದ್ದಾನೆ. ಅದರ ಪೂಜೆಗೆಂದೇ 35000 ರೂ. ವಸೂಲಿ ಮಾಡಿಕೊಂಡಿದ್ದ ಮನು. ಅಲ್ಲಿವರೆಗೆ ಇವನು ವಂಚಿಸುತ್ತಿದ್ದಾನೆಂಬ ಯಾವ ಅನುಮಾನವೂ ದೀಪಕ್ ಗೆ ಬಂದಿಲ್ಲ. ಆದರೆ ಪೂಜೆ ಮಾಡಿಸಿ ಮಾಟ ತೆಗೆದ ಬಳಿಕವೂ ಕೆಟ್ಟ ಕನಸುಗಳು ಬರಲಾರಂಭಿಸಿವೆ. ಈ ಬಗ್ಗೆ ಮತ್ತೆ ಮನು ಬಳಿ ಹೇಳಿದ್ದ ದೀಪಕ್.
ಮುಯಿಜು ಮೇಲೆ ಮಾಟ ಮಾಡಿಸಿದ ಮಾಲ್ಡೀವ್ಸ್ ಸಚಿವೆ ಶಮ್ನಾಜ್ ಅಲಿ ಸೆರೆ!
ಇವನು ಮುಗ್ಧನಿದ್ದಾನೆ ಯಾಮಾರಿಸಲು ಇದೇ ಅಂದುಕೊಂಡಿರುವ ಆರೋಪಿ, 'ಮಾಟ ಕ್ಲೀಯರ್ ಆಗಿಲ್ಲ, ಇನ್ನೊಂದು ಸಲ ಪೂಜೆ ಮಾಡಿಸ್ತಿನಿ ಎಂದು ದೀಪಕ್ ಕುಟುಂಬ ಸದಸ್ಯರಿಂದ ಹಂತ ಹಂತವಾಗಿ 2 ಲಕ್ಷ, 80 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿಸಿದ್ದಾನೆ. ಆದರೆ ಹಣ ಪಡೆದು ಇತ್ತ ಪೂಜೆಯೂ ಮಾಡಿಸಿಲ್ಲ, ಆ ಕಡೆ ಅವನು ಸಂಪರ್ಕದಲ್ಲಿಲ್ಲ. ಕೊನೆ ದೀಪಕ್ ಮೋಸ ಹೋಗಿರುವುದು ಖಚಿತವಾಗಿದೆ. ಅಷ್ಟರಲ್ಲಾಗಲೇ ಆರೋಪಿ ಹಣದೊಂದಿಗೆ ಪರಾರಿಯಾಗಿದ್ದಾನೆ. ಮೂಢನಂಬಿಕೆ ಹಾಗೂ ಮುಗ್ಧತೆಯಿಂದ ಸ್ನೇಹಿತ ಎನಿಸಿಕೊಂಡವನಿಂದಲೇ ವಂಚನೆಗೊಳಗಾಗಿರುವ ದೀಪಕ್ ಸದ್ಯ ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಖತರ್ನಾಕ್ ಮನು ಇದೇ ರೀತಿ ಎಷ್ಟು ಜನರಿಗೆ ವಂಚನೆ ಮಾಡಿದ್ದಾನೋ ಏನೋ ಪೊಲೀಸರೇ ಹೇಳಬೇಕು.