ಪತ್ನಿ ತಂಗಿ ಮೇಲಿನ ಮೋಹಕ್ಕೆ 10 ಲಕ್ಷ ಕೊಟ್ಟ ಮಹಾಶಯ!

ಪತ್ನಿಯ ಸಹೋದರಿಯ ಮೋಹಕ್ಕೆ ಒಳಗಾದ ಮಹಾಶಯನೊಬ್ಬ ಬರೊಬ್ಬರಿ 10 ಲಕ್ಷ ಸುಪಾರಿ ಕೊಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

A Man Gives Rs 10 lakh supari For Wife Sister at Dharwad rbj

ಧಾರವಾಡ, (ಏ.19): ಧರ್ಮಪತ್ನಿಯ ಸಹೋದರಿಯನ್ನೇ ಅಪಹರಣ ಮಾಡುವಂತೆ  10 ಲಕ್ಷ ರೂ. ಸುಪಾರಿ ನೀಡಿದ್ದ ಪ್ರಕರಣವನ್ನು ಇಲ್ಲಿಯ ಶಹರ ಠಾಣೆ ಪೊಲೀಸರು ಬೇಧಿಸಿದ್ದಾರೆ.
 
ಹುಬ್ಬಳ್ಳಿ ಮೂಲದ, ಕುಂದಗೋಳದ ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆ ಕಚೇರಿಯಲ್ಲಿ ಎಫ್‌ಡಿಎ ನೌಕರನಾಗಿದ್ದ ಮಕ್ತುಂ ಅಲಿ ಟೋಪದಾರ (35) ತನ್ನ ಪತ್ನಿಯ ಸಹೋದರಿಯ ಮೇಲೆ ಮೋಹಗೊಂಡು ಆಕೆಯನ್ನು ಮದುವೆಯಾಗುವುಕ್ಕೆ ಸಂಚು ರೂಪಿಸಿದ್ದನು. ಅದಕ್ಕಾಗಿ ಪ್ರವೀಣ ನಾಯ್ಕ್ (25) ಹಾಗೂ ಚೇತನ್ ಹಡಪದ ಎಂಬುವವರೊಂದಿಗೆ 10 ಲಕ್ಷಕ್ಕೆ ಸುಪಾರಿ ನೀಡಿದ್ದನು. ಆ ಪೈಕಿ ಈ ಇಬ್ಬರಿಗೂ ಮಕ್ತುಂ 5 ಲಕ್ಷ ರೂ. ಮುಂಗಡ ಹಣ ನೀಡಿದ್ದನು.

ಮಧ್ಯರಾತ್ರಿ ಹುಡುಗನಿಗೆ ಪ್ರೇಯಸಿಯ ಮೆಸೇಜ್...ಮಿಡ್‌ನೈಟ್ ಸಿಕ್ರೇಟ್ ಕಹಾನಿ

ಸಹೋದರಿ ಅಪಹರಣವಾದ ಕಾರಣ ಈ ಕುರಿತು ಮಕ್ತುಂ ಅಲಿ ಪತ್ನಿ ನಾಜಿಯಾಬಾನು ಧಾರವಾಡ ಶಹರ ಠಾಣೆಯಲ್ಲಿ ಏ.13 ರಂದು ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ತನಿಖೆ ನಡೆಸಿದಾಗ ಮುಕ್ತುಂ ಅಲಿಯೇ ಈ ಕೃತ್ಯ ಮಾಡಿರುವುದು ಗೊತ್ತಾಗಿದೆ. ಸದ್ಯ ಮೂವರು ಆರೋಪಿಗಳನ್ನು  ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Latest Videos
Follow Us:
Download App:
  • android
  • ios