ಬೆಂಗಳೂರು, (ಜ.25): ಮ್ಯಾನ್ ಹೋಲ್‌ಗೆ ಇಳಿದ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸುಮಾರು 38 ವರ್ಷದ ಸಿದ್ದಪ್ಪ ಮೃತ ಕಾರ್ಮಿಕ ಎಂದು ತಿಳಿದುಬಂದಿದೆ. ಇಂದು (ಶನಿವಾರ) ಸಿದ್ದಪ್ಪ ಹಾಗೂ ಮುನಿಯಪ್ಪ ಎನ್ನುವರು ಗಣೇಶ್ ಬಾಗ್ ಸಭಾಂಗಣದ ಸಮೀಪ ಚೇಂಬರ್ ಕ್ಲೀನ್ ಮಾಡಲು ಮ್ಯಾನ್ ಹೋಲ್‌ಗೆ ಇಳಿದಿದ್ದಾರೆ.

ಮೃತ್ಯುಕೂಪ ಮ್ಯಾನ್ ಹೋಲ್ ಮುಚ್ಚಿದ ಬೆಂಗಳೂರು ಪೊಲೀಸ್‌ಗೊಂದು ಶಹಬ್ಬಾಸ್

ಆ ವೇಳೆ ಉಸಿರಾಟ ತೊಂದರೆ ಕಾಣಿಸಿಕೊಂಡಿದ್ದು, ಮ್ಯಾನ್ ಹೋಲ್‌ನಲ್ಲೇ ಸಿದ್ದಪ್ಪ ಮೃತಪಟ್ಟಿದ್ದಾನೆ. ಇನ್ನು ಮತ್ತೋರ್ವ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಈತನನ್ನು ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಇಂತಹ ಪ್ರಕರಣಗಳು ಸಾಕಷ್ಟು ನಡೆದಿರುವ ಉದಾಹರಣೆಗಳಿವೆ. ಮುಂಜಾಗೃತವಿಲ್ಲದೇ ಯಾವುದೇ ವ್ಯಕ್ತಿಯನ್ನು ಮ್ಯಾನ್ ಹೋಲ್ ಇಳಿಸುವುದು ಅಪರಾಧವೆಂದು ಗೊತ್ತಿದ್ದರೂ. ಮತ್ತದೇ ಯಾವುದೇ ಮುಂಜಾಗೃತ ಕ್ರಮಗಳಿಲ್ಲದೇ ಏಕಾಏಕಿ ಮ್ಯಾನ್ ಹೋಲ್‌ಗೆ ಇಳಿದಿರುವುದು ಈ ದುರಂತಕ್ಕೆ ಕಾರಣವಾಗಿದೆ.