Asianet Suvarna News Asianet Suvarna News

ಮೊದಲಿಗೆ ಲವ್ ಮಾಡಿ ಮದ್ವೆ ಆದ್ಲು. ಬಳಿಕ ಪಕ್ಕದ ಮನೆ ಹುಡ್ಗನೂ ಬೇಕಂದ್ಲು..!

* ಸಂಬಂಧಿ ಜೊತೆ ಪತ್ನಿಯ ಅನೈತಿಕ ಸಂಬಂಧ
* ಮನನೊಂದ ಪತಿ ಆತ್ಮಹತ್ಯೆಗೆ ಶರಣು
* ಪ್ರೀತಿಸಿ ಮದುವೆಯಾಗಿದ್ದವನ ದುರಂತ ಅಂತ್ಯ

A Man commits suicide Over Wife illicit relationship at Vijayapura rbj rbj
Author
Bengaluru, First Published Sep 25, 2021, 3:49 PM IST
  • Facebook
  • Twitter
  • Whatsapp

ವಿಜಯಪುರ, (ಸೆ.25): ತನ್ನ ಸಂಬಂಧಿ ಜತೆಗೆ ಪತ್ನಿ ಅನೈತಿಕ ಸಂಬಂಧ (ಈllicit ಋelationship) ಹೊಂದಿರುವುದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಜಯಪುರ(Vijayapura) ಜಿಲ್ಲೆಯ ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವೆಂಕಟೇಶ ದ್ವಾರನಹಳ್ಳಿ (25 ವ) ಆತ್ಮಹತ್ಯೆ (suicide)  ಮಾಡಿಕೊಂಡ ದುರ್ದೈವಿ.

ಪ್ರೀತಿಸಿ ಓಡಿಹೋಗಿದ್ದ ಜೋಡಿಗೆ  'ಟೈರ್ ಮೆರವಣಿಗೆ' ಶಿಕ್ಷೆ

ವೆಂಕಟೇಶ ಆತ್ಮಹತ್ಯೆಗೆ ಮುನ್ನ ಫೇಸ್‌ಬುಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಹಾಕಿ ಜಮೀನಿನಲ್ಲಿ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ತನ್ನ ಸಾವಿಗೆ ಪಕ್ಕದ ಮನೆಯ ಶ್ರೀಶೈಲನೇ ಕಾರಣ ಎಂದು ಹೇಳಿಕೊಂಡಿದ್ದಾನೆ,

ವಿಷಯ ತಿಳಿದ ಸ್ನೇಹಿತರು, ಕುಟುಂಬ ಸದಸ್ಯರು ಕೂಡಲೇ ಸ್ಥಳಕ್ಕೆ ಧಾವಿಸಿ, ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

ವೆಂಕಟೇಶ ಎರಡು ವರ್ಷಗಳ ಹಿಂದೆ ಪ್ರೀತಿಸಿದ ಯುವತಿ ಜೊತೆ ಮದುವೆಯಾಗಿದ್ದ. ಆದರೆ ಈಚೆಗೆ ವೆಂಕಟೇಶನ ಪತ್ನಿ ಪಕ್ಕದ ಮನೆಯ ಶ್ರೀಶೈಲ ಎಂಬಾತನ ಜೊತೆ ಮನೆಬಿಟ್ಟು ಪರಾರಿಯಾಗಿದ್ದಳು.

ವೆಂಕಟೇಶ ದೂರು ನೀಡಿದ ಬಳಿಕ ತಾಳಿಕೋಟೆ ಪೊಲೀಸರು ಕರೆತಂದರೂ ವೆಂಕಟೇಶ ತನಗೆ ಬೇಡ, ನಾನು ಶ್ರೀಶೈಲನ ಜೊತೆಯೇ ಇರುವುದಾಗಿ ಹಠ ಹಿಡಿದಿದ್ದಳು. ಪರಿಣಾಮ ಪೊಲೀಸರು ಆಕೆಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದರು.

ಇದರಿಂದ ಮನನೊಂದ ವೆಂಕಟೇಶ ಫೇಸ್‌ಬುಕ್‌ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಂದೇಶ ಹಾಕಿ ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios