Chamarajanagar: ಸಾಮಾಜಿಕ ಬಹಿಷ್ಕಾರ: ಮನನೊಂದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು!
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದ್ರು ಇನ್ನು ಸಹ ಸಾಮಾಜಿಕ ಪಿಡುಗುಗಳನ್ನ ತೊಲಗಿಸೋಕೆ ಸಾದ್ಯವಾಗಿಲ್ಲ. ಇನ್ನು ಸಹ ಸಾಮಾಜಿಕ ಬಹಿಷ್ಕಾರದಂತಹ ಚಾಮರಾಜನಗರದಲ್ಲಿ ಜೀವಂತವಾಗಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಅಮಾಯಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವರದಿ: ಪುಟ್ಟರಾಜು. ಆರ್.ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಅ.21): ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಕಳೆದ್ರು ಇನ್ನು ಸಹ ಸಾಮಾಜಿಕ ಪಿಡುಗುಗಳನ್ನ ತೊಲಗಿಸೋಕೆ ಸಾದ್ಯವಾಗಿಲ್ಲ. ಇನ್ನು ಸಹ ಸಾಮಾಜಿಕ ಬಹಿಷ್ಕಾರದಂತಹ ಚಾಮರಾಜನಗರದಲ್ಲಿ ಜೀವಂತವಾಗಿದೆ. ಸಾಮಾಜಿಕ ಬಹಿಷ್ಕಾರಕ್ಕೆ ಅಮಾಯಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ. ಮನೆ ಮುಂದೆ ಹಾಕಿರೊ ಶಾಮೀಯಾನ. ಶಾಮೀಯಾನದ ಸುತ್ತ ನೆರೆದಿರೊ ಕುಟುಂಬಸ್ಥರು.. ಅದೇನನ್ನೊ ಗೊಣಗುತ್ತ ಕಣ್ಣಲ್ಲಿ ನೀರು ಹಾಕುತ್ತಿರುವ ಮಹಿಳೆಯರು.. ಕುಟುಂಬಸ್ಥರ ಬಳಿ ಮಾಹಿತಿ ಕಲೆ ಹಾಕುತ್ತಿರುವ ಖಾಕಿ.
ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಯಡ್ವನಹಳ್ಳಿಯಲ್ಲಿ. ಹೌದು ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದ ಶಿವರಾಜ್ ನೇಣಿಗೆ ಕೊರಳೊಡ್ಡಿದ್ದಾನೆ. ಸಾಮಾಜಿಕ ಬಹಿಷ್ಕಾರದಂತಹ ಪಿಡುಗು ಇನ್ನು ಸಹ ಚಾಮರಾಜನಗರದಲ್ಲಿ ಜೀವಂತವಾಗಿದ್ದು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರ ಎಂಬ ಪ್ರಶ್ನೆಗಳು ಮೂಡುತ್ತಿದೆ. ಇನ್ನೂ ಶಿವರಾಜ್ ಕಳೆದೊಂದು ವಾರದ ಹಿಂದೆ ತನ್ನ ಅಕ್ಕ ದೊಡ್ಡಮ್ಮರಿಗೆ ವೃದ್ಧಾಪ್ಯ ವೇತನ ಮಾಡಿಸಲು ತೆರಳಿದ್ದಾರೆ, ಆದ್ರೆ ಅಧಿಕಾರಿಗಳು ಇವತ್ತು ನಾಳೆ ಎಂದು ಸತಾಯಿಸಿದ್ದಾರೆ. ಎಷ್ಟೇ ಭಾರಿ ಮನವಿ ಮಾಡಿದ್ರು ವೃದ್ದಾಪ್ಯ ವೇತನವನ್ನ ಮಾಡಿಕೊಟ್ಟಿಲ್ಲ.
ಸಂಸದ ರಾಜಾ ಅಮರೇಶ್ವರ ಜನಪರವಾದ ರಾಜಕಾರಣಿ: ಸಚಿವ ಬೋಸರಾಜು ಬಣ್ಣನೆ
ಇನ್ನು ಇದೆ ಯಡ್ವನಹಳ್ಳಿ ಗ್ರಾಮದಲ್ಲಿ ನಲವತ್ತು ಐವತ್ತು ವರ್ಷದವರಿಗೆ ಅಕ್ರಮವಾಗಿ ಹಣ ಪಡೆದು ಪಂಚಾಯಿತಿ ಸದಸ್ಯ ಆರ್.ಐ ಜೊತೆಗೂಡಿ ವೃದ್ದಾಪ್ಯ ವೇತನ ಮಾಡಿಕೊಟ್ಟಿರುವ ಆರೋಪವಿದೆ, ಈ ಹಿನ್ನಲೆ ಶಿವರಾಜ್ ಯಡವನಹಳ್ಳಿ ಗ್ರಾಮದಲ್ಲಿ ಎಷ್ಟು ಜನ ವೃದ್ದಾಪ್ಯ ವೇತನವನ್ನ ಪಡೆಯುತ್ತಿದ್ದಾರೆ ಈ ಕುರಿತು ಮಾಹಿತಿ ನೀಡಿಯೆಂದು ಆರ್.ಟಿ.ಐ ಹಾಕಿದ್ದಾರೆ. ಇದರಿಂದ ಕುಪಿತಗೊಂಡ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಬೇಕಂತಲೇ ಕಿರಿಕ್ ತೆಗೆದು ಶಿವರಾಜ್ ರ ಸಂಗಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿವರಾಜ್ ಸ್ನೇಹಿತ ಶಿವನಾಯ್ಕ ಕೃಷ್ಣಮೂರ್ತಿ ಕಡೆಯವರಿಗೆ ಚಪ್ಪಲಿ ತೆಗೆದುಕೊಂಡು ಹೊಡೆದಿದ್ದ.
ಒಬ್ಬ ರೈತನಿಗೆ ಪ್ರೋತ್ಸಾಹ ನೀಡಿದರೆ 100 ಮಂದಿಗೆ ಉದ್ಯೋಗ ಸಿಗುತ್ತೆ: ಸಚಿವ ಚಲುವರಾಯಸ್ವಾಮಿ
ಈ ವಿಚಾರವನ್ನ ಶಿವನಾಯ್ಕ ,ಶಿವರಾಜ್ ಮೊಬೈಲ್ ನಲ್ಲಿ ಗಲಾಟೆ ನಡೆದ ವಿಚಾರವನ್ನ ಊರಿನ ಹಿರಿಯರಿಗೆ ತಿಳಿಸಿದ್ದ. ಊರಿನ ಹಿರಿಯವರಿಗೆ ಕರೆ ಮಾಡಲು ಮೊಬೈಲ್ ನೀಡಿದ ಎಂಬ ಒಂದೇ ಒಂದು ಕಾರಣಕ್ಕೆ ಶಿವರಾಜ್ ಗೆ 6 ಸಾವಿರ ದಂಡ ಹಾಗೂ ಸಾಮಾಜಿಕ ಬಹಿಷ್ಕಾರ ಹಾಕಿದ್ರು ಇದರಿಂದ ಮನನೊಂದ ಶಿವರಾಜ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದೇನೆ ಹೇಳಿ ಮಾಡದ ತಪ್ಪಿಗೆ ಅಮಾಯಕನ ಜೀವ ಬಲಿಯಾಗಿದೆ. ಸಂವಿಧಾನದ ಪ್ರಕಾರ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ನಾನ್ನುಡಿ ಕೇವಲ ಪುಸ್ತಕದ ಮೇಲಿನ ಬರಹಕ್ಕೆ ಮಾತ್ರ ಸೀಮಿತವಾಗಿದೆ. ಇನ್ಮುಂದೆ ಯಾದ್ರು ಜಿಲ್ಲಾಡಳಿತ ಇಂತ ಸಾಮಾಜಿಕ ಬಹಿಷ್ಕಾರದಂತ ಪಿಡುಗುಗಳಿಗೆ ಕಡಿವಾಣ ಹಾಕಲೇಬೇಕಿದೆ.