ಉಡುಪಿ, (ಡಿ.12): ಮಸೀದಿಯ ನಕಲಿ ದಾಖಲೆಗಳನ್ನು ನೀಡಿ 3 ಮದುವೆಯಾಗಿದ್ದ ಕಾಪು ತಾಲೂಕಿನ ಮೂಳೂರು ಗ್ರಾಮದ ಮೊಹಮ್ಮದ್ ರಫೀಕ್ (44) ಎಂಬಾತನನ್ನು ಪೊಲೀಸರು 20 ವರ್ಷಗಳ ನಂತರ ಬಂಧಿಸಿದ್ದಾರೆ.

 ಈತ 2000ರಲ್ಲಿ ಮೂಳೂರಿನ ಮಸೀದಿಯ ನಕಲಿ ಲೆಟರ್ ಹೆಡ್ ಬಳಸಿ 3ನೇ ಮದುವೆಯಾಗಿದ್ದ, ಈ ವಿಷಯ ತಿಳಿದು ಪತ್ನಿಯ ಕಡೆಯವರು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

FIR ಇಲ್ಲ, ಮತಾಂತರ ಇಲ್ಲ.. ಆದರೂ ಲವ್ ಜಿಹಾದ್ ಕೇಸಲ್ಲಿ ಯುವಕನ  ಬಂಧನ!

ಆದರೇ ಆರೋಪಿ ರಫೀಕ್ ಪೊಲೀಸರ ಕೈಗೆ ಸಿಗದೇ ಇದುವರೆಗೆ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಉಲ್ಲಾಳದಲ್ಲಿ ತನ್ನ 2ನೇ ಪತ್ನಿಯ ಮಗಳ ಮದುವೆಗೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಪು ಎಸೈ ಐ.ಆರ್.ಗಡ್ಡೆಕರ್ ಮತ್ತು ಸಿಬ್ಬಂದಿಗಳು, ಮದುವೆ ಮಗಿದ ಬಳಿಕ  ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.