Asianet Suvarna News Asianet Suvarna News

ವಿವಾಹಿತ ಪ್ರಿಯತಮೆ ಬಾಗಿಲು ತೆರೆಯದ್ದಕ್ಕೆ ಆ್ಯಸಿಡ್ ಎರಚಿದ ಕಿರಾತಕ!

ವಿವಾಹಿತ ಪ್ರಿಯತಮೆ ಮನೆ ಬಾಗಿಲು ತೆರೆಯದಿದ್ದಕ್ಕೆ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿದ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಲಕ್ಷ್ಮಿ ಬಡಿಗೇರ (33), ಆ್ಯಸಿಡ್ ದಾಳಿಗೊಳಗಾದ ಮಹಿಳೆ. ಮೌನೇಶ್ ಪತ್ತಾರ ಆ್ಯಸಿಡ್ ಎರಚಿದ ಆರೋಪಿ.

A man acid attack on a woman for a trivial reason was arrested at bagalkote rav
Author
First Published May 28, 2024, 9:22 PM IST

ಬಾಗಲಕೋಟೆ (ಮೇ.28): ವಿವಾಹಿತ ಪ್ರಿಯತಮೆ ಮನೆ ಬಾಗಿಲು ತೆರೆಯದಿದ್ದಕ್ಕೆ ಪ್ರಿಯಕರ ಕಿಟಕಿಯಿಂದ ನೀರು ಮಿಶ್ರಿತ ಆ್ಯಸಿಡ್ ಎರಚಿದ ಘಟನೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್‌ನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಲಕ್ಷ್ಮಿ ಬಡಿಗೇರ (33), ಆ್ಯಸಿಡ್ ದಾಳಿಗೊಳಗಾದ ಮಹಿಳೆ. ಮೌನೇಶ್ ಪತ್ತಾರ ಆ್ಯಸಿಡ್ ಎರಚಿದ ಆರೋಪಿ. ಆ್ಯಸಿಡ್ ದಾಳಿಯಿಂದ ಮಹಿಳೆಯ ಎಡಗಣ್ಣು ಹಾಗೂ ಮುಖದ ಮೇಲೆ ಸುಟ್ಟು ಗಾಯವಾಗಿದೆ. ಸದ್ಯ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ. ಎಂಟು ವರ್ಷದ ಮಗಳ ಮೇಲೆಯೂ ಆ್ಯಸಿಡ್ ಮುಖದ ಮೇಲೆ ಅಲ್ಪ ಪ್ರಮಾಣದ ಗಾಯವಾಗಿದೆ.

ಎಮ್ಮೆ ಮಾರಾಟ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ; ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

ದಾಳಿಗೊಳಗಾದ ಮಹಿಳೆ ಹಾಗೂ ಆರೋಪಿ ಮೌನೇಶ್ ಇಬ್ಬರೂ ವಿಜಯಪುರ ನಗರದ ಮೂರನಕೇರಿ ಮೂಲದವರಾಗಿದ್ದಾರೆ. ಮೌನೇಶ್ ಮೂರ್ತಿ ತಯಾರಿಸುವ ಕೆಲಸ ಮಾಡುತ್ತಿದ್ದ. ಇಬ್ಬರು ಪ್ರತ್ಯೇಕ ಬೇರೆ ಬೇರೆಯವರನ್ನು ಮದುವೆಯಾದವರು. ಆದರೆ ಯಾವುದೇ ಡೈವೋರ್ಸ್ ಪಡೆಯದೇ ಲಿವಿಂಗ್ ಟು ಗೆದರ್‌ನಲ್ಲಿದ್ದರು. ಆದರೂ ಅನಧಿಕೃತವಾಗಿ ಒಂದೂವರೆ ತಿಂಗಳಿನಿಂದ ಗದ್ದನಕೇರಿ ಕ್ರಾಸ್‌ನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಇಬ್ಬರು ಪರಸ್ಪರ ಒಪ್ಪಿಗೆ ಮೇಲೆ ಒಂದೇ ಮನೆಯಲ್ಲಿದ್ದರೂ ಲಕ್ಷ್ಮೀ ಮೇಲೆ ಪದೇಪದೆ ಸಂಶಯ ಪಡುತ್ತಿದ್ದ ಮೌನೇಶ್, ಇದರಿಂದ ಮೇಲಿಂದ ಮೇಲೆ ಜಗಳ ಸಹ ಮಾಡ್ತಾ ಇದ್ರು ಎನ್ನಲಾಗಿದೆ.

ಬಾಗಲಕೋಟೆ: ಶಾಲಾ ವಾಹನ ಭೀಕರ ಅಪಘಾತ ನಾಲ್ವರು ಮಕ್ಕಳು ದುರ್ಮರಣ!

ಇದೇ ವಿಚಾರವಾಗಿ ಕಳೆದೊಂದು ವಾರದಿಂದ ಮೌನೇಶ್ ಮನೆಬಿಟ್ಟು ಹೋಗಿದ್ದ. ನಂತರ ಲಕ್ಷ್ಮೀ ಅವನ ನಂಬರ್ ಬ್ಲಾಕ್ ಮಾಡಿದ್ದಳು. ಆದರೆ ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದು ಬಾಗಿಲು ಬಡಿದಿದ್ದಾನೆ.  ಈ ವೇಳೆ ಲಕ್ಷ್ಮೀ ಬಾಗಿಲು ತೆಗೆದಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಮೌನೇಶ್ ಕಿಟಕಿ ಬಾಗಿಲು ತೆಗೆದು ಆ್ಯಸಿಡ್ ಎರಚಿದ್ದಾನೆ.

Latest Videos
Follow Us:
Download App:
  • android
  • ios