ಸಂಬಂಧಿಕರ ಮದುವೆಗೆ ಹೋಗುವ ವಿಚಾರಕ್ಕೆ ಬೇಸರ: ಗೃಹಿಣಿ ನೇಣು ಬಿಗಿದು ಆತ್ಮಹತ್ಯೆ!
ಕೌಟುಂಬಿಕ ಮನಸ್ತಾಪ ಹಿನ್ನೆಲೆಯಲ್ಲಿ ಬೇಸರಗೊಂಡು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು (ನ.24): ಕೌಟುಂಬಿಕ ಮನಸ್ತಾಪ ಹಿನ್ನೆಲೆಯಲ್ಲಿ ಬೇಸರಗೊಂಡು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಿಪ್ಪಸಂದ್ರದ ನಿವಾಸಿ ರಾಧಾ (21) ಮೃತ ದುರ್ದೈವಿ. ಮನೆಯಲ್ಲಿ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ರಾಧಾ ಆತ್ಮಹತ್ಯೆ ಯತ್ನಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಮನೆಗೆ ಮರಳಿದ ಮೃತಳ ಪತಿ ರವಿಕುಮಾರ್, ಕೂಡಲೇ ನೇಣಿನ ಕುಣಿಕೆಯಿಂದ ಪತ್ನಿಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಅಷ್ಟರಲ್ಲಿ ತೀವ್ರ ಉಸಿರಾಟ ಸಮಸ್ಯೆ ಉಂಟಾಗಿ ಆಕೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ: ಇಂಧನ ಸಚಿವ ಕೆ.ಜೆ. ಜಾರ್ಜ್
ಎರಡೂವರೆ ವರ್ಷಗಳ ಹಿಂದೆ ಆಟೋ ಚಾಲಕ ರವಿಕುಮಾರ್ ಹಾಗೂ ರಾಮನಗರ ತಾಲೂಕಿನ ವಡ್ಡರದೊಡ್ಡಿಯ ರಾಧಾ ವಿವಾಹವಾಗಿದ್ದರು. ಮದುವೆ ಬಳಿಕ ಅನ್ಯೋನ್ಯವಾಗಿಯೇ ದಂಪತಿ ಇದ್ದರು. ಆದರೆ ಸಂಬಂಧಿಕರ ಮನೆ ಕಾರ್ಯಕ್ರಮಕ್ಕೆ ಹೋಗುವ ವಿಚಾರವಾಗಿ ಬುಧವಾರ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಇದರಿಂದ ಬೇಸರಗೊಂಡು ರಾಧಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ವಿದ್ಯುತ್ ಶಾಕ್‌ನಿಂದ ವ್ಯಕ್ತಿ ಸಾವು:
ಮೈಸೂರು: ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆ ತಾಲೂಕಿನ ಆನೆಮಾಳದಲ್ಲಿ ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೊಬ್ಬನ ದುರಂತ ಸಾವು ಸಂಭವಿಸಿದೆ.
ಕುಡಿದ ಮತ್ತಿನಲ್ಲಿ ಭಾರೀ ಗಾತ್ರದ ವಾಹನ ಯದ್ವಾತದ್ವಾ ಚಾಲನೆ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!
ಸಿದ್ದಪ್ಪಾಜಿ ರಸ್ತೆಯ ನಿವಾಸಿ ಪ್ರವೀಣ್ (27) ಮೃತ ವ್ಯಕ್ತಿ. ರಸ್ತೆ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕಾಂಕ್ರಿಟ್ ಸುರಿಯುವ ವೇಳೆ ವಿದ್ಯುತ್ ತಂತಿಗೆ ವಾಹನ ತಗುಲಿ ಸಂಭವಿಸಿರುವ ಅವಘಡ. ವಿದ್ಯುತ್ ಶಾಕ್ ತಗುಲಿ ಬಿದ್ದ ಪ್ರವೀಣ್‌ನನ್ನು ಕೇರಳದ ಮಾನಂದವಾಡಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರವೀಣ್. ಘಟನೆ ಸಂಬಂಧ ಅಂತರ ಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.