ಕೌಟುಂಬಿಕ ಸಮಸ್ಯೆಗೆ ಬೇಸತ್ತು ಯುವಕನೋರ್ವ ಕಂಠಪೂರ್ತಿ ಕುಡಿದು ತಹಸೀಲ್ದಾರ್ ಕಚೇರಿಯಲ್ಲಿ ರಂಪಾಟ ಮಾಡಿದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಕಚೇರಿಯಲ್ಲಿ ನಡೆದಿದೆ. ತುರುವೇಕೆರೆ ಪಟ್ಟಣದ ವಿನೋಭಾ ನಗರದ ನಿವಾಸಿಯಾಗಿರುವ ರವಿ ಎಂಬಾತನ ಪೊಲೀಸರ ಜೊತೆಗೆ ಕಿರಿಕ್ ಮಾಡಿಕೊಂಡ ಯುವಕ.

ತುಮಕೂರು (ಮಾ.1): ಕೌಟುಂಬಿಕ ಸಮಸ್ಯೆಗೆ ಬೇಸತ್ತು ಯುವಕನೋರ್ವ ಕಂಠಪೂರ್ತಿ ಕುಡಿದು ತಹಸೀಲ್ದಾರ್ ಕಚೇರಿಯಲ್ಲಿ ರಂಪಾಟ ಮಾಡಿದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕು ಕಚೇರಿಯಲ್ಲಿ ನಡೆದಿದೆ.

ತುರುವೇಕೆರೆ ಪಟ್ಟಣದ ವಿನೋಭಾ ನಗರದ ನಿವಾಸಿಯಾಗಿರುವ ರವಿ ಎಂಬಾತನ ಪೊಲೀಸರ ಜೊತೆಗೆ ಕಿರಿಕ್ ಮಾಡಿಕೊಂಡ ಯುವಕ. ದಿನನಿತ್ಯ ಕೌಟುಂಬಿಕ ಕಲಹದಿಂದ ಮನನೊಂದಿದ್ದ ಯುವಕ. ಕಂಠಪೂರ್ತಿ ಕುಡಿದು ತಹಸೀಲ್ದಾರ್ ಕಚೇರಿಗೆ ಬಂದಿದ್ದಾನೆ. ಕುಡಿದ ನಶೆಯಲ್ಲಿ ಕಚೇರಿಯಲ್ಲೇ ಸಾರ್ವಜನಿಕರು, ಪೊಲೀಸರ ಮುಂದೆಯೇ ಬಟ್ಟೆ ಬಿಚ್ಚಿ ಅರೆನಗ್ನನಾಗಿ ಹುಚ್ಚಾಟ ಮಾಡಿದ್ದಾನೆ. 

ಮುಂದುವರಿದ ಬಲಿ; ಕಿಲ್ಲರ್ ಬಿಎಂಟಿಸಿ ಬಸ್‌ಗೆ ಮತ್ತೊಬ್ಬ ಬೈಕ್ ಸವಾರ ಸಾವು!

ತಹಸೀಲ್ದಾರ್ ಕಚೇರಿಗೆ ಬಂದಿದ್ದ ಯುವಕನ ತಾಯಿ, ಪತ್ನಿ ಮೇಲೆ ಕುಡಿದ ನಶೆಯಲ್ಲಿ ಹಲ್ಲೆ ಮುಂದಾಗಿದ್ದ ಯುವಕ. ಈ ವೇಳೆ ಪೊಲೀಸರು ಯುವಕನನ್ನು ಹೊರಗೆ ಕಳಿಸಲು ಯತ್ನಿಸಿದ್ದಾರೆ. ಆದರೆ ಪೊಲೀಸರಿಗೂ ತೊಡೆ ತಟ್ಟಿ ಕಿರಿಕ್ ಮಾಡಿರುವ ಕುಡುಕ. ಈ ವೇಳೆ ಕುಡುಕನ ಕಪಾಳಕ್ಕೆ ಬಿಗಿದ ಪೊಲೀಸ್. ಯುವಕನ ರಂಪಾಟದಿಂದ ಕಚೇರಿಗೆ ಬಂದಿದ್ದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. 

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟ; ಐವರಿಗೆ ಗಂಭೀರ ಗಾಯ!

ಸದ್ಯ ಆರೋಪಿ ಪಾನಮತ್ತ ಯುವಕ ರವಿಯನ್ನು ವಶಕ್ಕೆ ಪಡೆದ ಪೊಲೀಸರು. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ