ಬ್ಯಾಂಕಿನ ಆಂತರಿಕ ತನಿಖೆಗಳ ನಂತರ ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಾಸನದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅನುರಾಧ ಟಿ. ತಂಗವೇಲು
ಅರಕಲಗೂಡು(ಜೂ.18): ತಾಲೂಕಿನ ಬೆಳವಾಡಿಯಲ್ಲಿರುವ ಎಸ್‌ಬಿಐ ಶಾಖೆಯಲ್ಲಿ ಸಾಲ ಪಡೆಯಲು ಗ್ರಾಹಕರು ಗಿರವಿ ಇಟ್ಟಿದ್ದ 94,06,484 ಮೌಲ್ಯದ ಚಿನ್ನಾಭರಣಗಳನ್ನು ಅದೇ ಬ್ಯಾಂಕಿನ ಗುತ್ತಿಗೆ ನೌಕರ ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳವಾಡಿ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಗುತ್ತಿಗೆ ನೌಕರ ಲವ ಎಂಬಾತ ಒಡವೆಗಳನ್ನು ಕದ್ದೊಯ್ದು ಪರಾರಿಯಾಗಿದ್ದಾನೆ. ಬ್ಯಾಂಕ್‌ನ ನಗದು ಅಧಿಕಾರಿ ಕಿಶೋರ್ ಕುಮಾರ್ ಅವರಿಗೆ ಇತ್ತೀಚೆಗೆ ವರ್ಗಾವಣೆ ಆಗಿತ್ತು. ಕಳೆದ ಮೇ 5ರಂದು ಚಿನ್ನದ ಪ್ಯಾಕೆಟ್‌ಗಳನ್ನು ಪರಿಶೀಲಿಸುತ್ತಿದ್ದಾಗ ಆಭರಣಗಳು ಮೌಲ್ಯಮಾಪಕನ ವರದಿಗೆ ತಾಳೆಯಾಗಲಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಚಿನ್ನದ ಆಭರಣಗಳನ್ನು ಬದಲಾಯಿಸಿ ನಕಲಿ ಆಭರಣಗಳನ್ನು ಪ್ಯಾಕೆಟ್‌ಗಳಲ್ಲಿ ತುಂಬಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಮಲಗಿದ್ದ ದಂಪತಿಗೆ ಕಚ್ಚಿದ ಹಾವು: ಪತಿ ಸಾವು, ಪತ್ನಿ ಸ್ಥಿತಿ ಗಂಭೀರ
ಬ್ಯಾಂಕಿನ ಆಂತರಿಕ ತನಿಖೆಗಳ ನಂತರ ಹಾಸನದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಅನುರಾಧ ಟಿ. ತಂಗವೇಲು ಅವರು ಕೊಣನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುತ್ತಿಗೆ ನೌಕರ ಲವ ತಲೆಮರೆಸಿಕೊಂಡಿದ್ದಾನೆ.
