ಬೆಂಗಳೂರು: ಆಸ್ತಿ ವರ್ಗಾವಣೆ ಮಾಡದ್ದಕ್ಕೆ ತಂದೆ ಕಣ್ಣು ಕಿತ್ತ ಮಗನಿಗೆ 9 ವರ್ಷ ಜೈಲು..!

ಪ್ರಕರಣದಲ್ಲಿ ಅಭಿಷೇಕ್‌ ಚೇತನ್‌ ಶಿಕ್ಷೆಗೆ ಒಳಗಾಗಿರುವ ಅಪರಾಧಿ. ಮಾರಣಾಂತಿಕ ಹಲ್ಲೆ, ಸುಲಿಗೆ ಮಾಡಲು ಹಲ್ಲೆ ನಡೆಸಿ ಗಾಯಗೊಳಿಸಿದ, ಕೊಲೆ ಯತ್ನ, ಆಸ್ತಿ ವಿಚಾರ ವಾಗಿ ನಂಬಿಕೆ ದ್ರೋಹ ಮತ್ತು ಶಾಂತಿಭಂಗ ಮತ್ತು ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧಿಸಿಂತೆ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 42 ಸಾವಿರ ರು. ದಂಡ ವಿಧಿಸಿದೆ. 

9 Years in Jail to Son For who Plucked out his Father Eye in Bengaluru grg

ಬೆಂಗಳೂರು(ನ.23): ಹೆತ್ತ ತಂದೆಯ ಕಣ್ಣು ಕಿತ್ತು ಹಾಕಿದ ಮಗನಿಗೆ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 42 ಸಾವಿರ ರು. ದಂಡ ವಿಧಿಸಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಅಭಿಷೇಕ್‌ ಚೇತನ್‌ (44) ಶಿಕ್ಷೆಗೆ ಒಳಗಾಗಿರುವ ಅಪರಾಧಿ. ಮಾರಣಾಂತಿಕ ಹಲ್ಲೆ, ಸುಲಿಗೆ ಮಾಡಲು ಹಲ್ಲೆ ನಡೆಸಿ ಗಾಯಗೊಳಿಸಿದ, ಕೊಲೆ ಯತ್ನ, ಆಸ್ತಿ ವಿಚಾರ ವಾಗಿ ನಂಬಿಕೆ ದ್ರೋಹ ಮತ್ತು ಶಾಂತಿಭಂಗ ಮತ್ತು ಆಸ್ತಿ ಹಾನಿ ಪ್ರಕರಣಕ್ಕೆ ಸಂಬಂಧಿಸಿಂತೆ 9 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 42 ಸಾವಿರ ರು. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಮತ್ತೆ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು. ದಂಡ ಮೊತ್ತದ ಪೈಕಿ 40 ಸಾವಿರ ರು.ಗಳನ್ನು ಪ್ರಕರಣ ಸಂತ್ರಸ್ತರಾದ ಅಪರಾಧಿ ಯ ತಂದೆ ಎಸ್‌ಎಸ್‌ ಪರಮೇಶ್‌ಗೆ ಪಾವತಿಸಬೇಕು ಎಂದು ನ್ಯಾಯಾಧೀಶ ಟಿ.ಗೋವಿಂದಯ್ಯ ಆದೇಶ ಮಾಡಿದ್ದಾರೆ.

ಕಲಬುರಗಿ: ಸೆಂಟ್ರಲ್‌ ಜೈಲಿನಲ್ಲಿ ಗಾಂಜಾ ಸರಬರಾಜಿಗೆ ಯತ್ನ

ತನ್ನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿಲ್ಲ ಎಂಬ ಕಾರಣಕ್ಕೆ ಅಭಿಷೇಕ್‌ ತನ್ನ 66 ವರ್ಷದ ತಂದೆ ಪರಮೇಶ್‌ ಮೇಲೆ ಹಲ್ಲೆ ನಡೆಸಿ ಕಣ್ಣು ಕಿತ್ತುಹಾಕಿದ್ದ. 2018 ರ ಆ.29ರಂದು ಬನಶಂಕರಿಯ ಶಾಕಾಂಬರಿನಗರದಲ್ಲಿ ಈ ಘಟನೆ ನಡೆದಿತ್ತು. ಜೆ.ಪಿ.ನಗರ ಠಾಣಾ ಪೊಲೀಸರು ಎಫ್‌ಐಆರ್‌ ದಾಖಲಿಸಿ ಅಭಿಷೇಕ್‌ನನ್ನು ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಜಾಮೀನು ಮೇಲೆ ಹೊರಬಂದಿದ್ದ ಅಭಿಷೇಕ್‌, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಪ್ರಕರಣದ ವಿಚಾರಣೆ ಮುಂದುವರಿಸಿದ್ದ ನಗರದ 57ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಇದೀಗ ಅಭಿಷೇಕ್‌ ತಂದೆಯ ಮೇಲೆ ಹಲ್ಲೆ ನಡೆಸಿ, ಕಣ್ಣು ಕಿತ್ತುಹಾಕಿರುವುದು ಸಾಕ್ಷ್ಯಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿ ಶಿಕ್ಷೆ ವಿಧಿಸಿದೆ. ತಲೆ ಮರೆಸಿಕೊಂಡಿದ್ದ ಅಪರಾಧಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ನ್ಯಾಯಾಲಯ ಅಪರಾಧಿಯನ್ನು ಜೈಲಿಗೆ ಕಳುಹಿಸಿದೆ. ಪೊಲೀಸರ ಪರ ಸರ್ಕಾರಿ ಅಭಿಯೋಜಕಿ ಕೆ.ಎಸ್‌.ವೀಣಾ ವಾದ ಮಂಡಿಸಿದ್ದರು.

Latest Videos
Follow Us:
Download App:
  • android
  • ios