ವೇಶ್ಯೆಯರ ಬಳಿ ಹೋಗಿ ಬಂದು ಅವರ ಮನೆಯನ್ನೇ ದೋಚುತ್ತಿದ್ದ ಖದೀಮರು ಅರೆಸ್ಟ್
ಅವರೆಲ್ಲ ಶಾಲಾ, ಕಾಲೇಜು ಹಂತದ ಡ್ರಾಪ್ಔಟ್ ಸ್ಟೂಡೆಂಟ್ಸು. ಓದು ತಲೆಗೆ ಅತ್ತಲಿಲ್ಲ, ಮಾಡೋದಕ್ಕೆ ಕೆಲಸ ಇಲ್ಲ. ಆದ್ರೆ ದುಷ್ಚಟ, ಶೋಕಿಗಳಿಗೇನೂ ಕಮ್ಮಿ ಇಲ್ಲ. ದುಷ್ಚಟಕ್ಕೆ ದುಡ್ಡುಬೇಕಲ್ಲ, ಆಗ ಶುರುವಾಗಿದ್ದು ರೋಡ್ ರಾಬರಿಯಂತಹ ದುಷ್ಕೃತ್ಯಗಳು. ಗುಂಪು ಕಟ್ಟಿಕೊಂಡ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಆರೋಪಿಗಳು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು, (ಸೆ.16): ವೇಶ್ಯೆಯರು ಸೇರಿದಂತೆ ಅಮಾಯಕರನ್ನು ದೋಚುತ್ತಿದ್ದ 8 ಜನ ದರೋಡೆಕೋರನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. 30 ಜನ ದರೋಡೆಕೋರ ಬೃಹತ್ ತಂಡ ಮೈಸೂರಿನಲ್ಲಿ ಬೇರು ಬಿಟ್ಟಿದೆ. ಸದ್ಯ 8 ಜನರನ್ನು ಬಂಧಿಸಿ, 8 ಪ್ರಕರಣ ಭೇದಿಸಿರುವ ಪೊಲೀಸರು, ಉಳಿದವರ ಹೆಡೆಮುರಿ ಕಟ್ಟಲು ಬಲೆ ಬೀಸಿದ್ದಾರೆ.
ಶರತ್, ಸುಮಂತ್, ಕಾರ್ತಿಕ್, ಮಹದೇವ್, ಸುನೀಲ್ ಕುಮಾರ್, ದಿನೇಶ್ ಅಲಿಯಾಸ್ ದಿನಿ, ಶಶಾಂಕ್ ಅಲಿಯಾಸ್ ತೇಜಸ್ ಅಲಿಯಾಸ್ ಅಫಿಷಿಯಲ್, ಧರ್ಮೇಶ್ ಅಲಿಯಾಸ್ ಕರಿಯಾ.... ಎಲ್ಲರೂ 20ರಿಂದ 30 ವರ್ಷದೊಳಗಿನ ಹುಡುಗರು. ಕಳ್ಳತನ, ದರೋಡೆ, ವಸೂಲಿಯಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಕೊಲೆಗೂ ವಿಫಲ ಯತ್ನ ನಡೆಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಇಂತಹ ಕೆಲಸದಲ್ಲಿ ತೊಡಗಿದ್ದ ಮಹಿಳೆ ಸೇರಿ 21 ಮಂದಿ ಅರೆಸ್ಟ್
ಬೋಗಾದಿ ಮೈಸೂರಿನ ಹೊರವಲಯದಲ್ಲಿ ಇರುವ ಗ್ರಾಮ. ಈ ಗ್ರಾಮ ಸಿಟಿಗೆ ಹೊಂದಿಕೊಂಡೇ ಇದ್ದರೂ ಹೆಸರಿಗೆ ಮಾತ್ರ ಹಳ್ಳಿ ಬೋಗಾದಿ ಅಂತಲೇ ಫೇಮಸ್ಸು. ಆರೋಪಿಗಳೆಲ್ಲರೂ ಬೋಗಾದಿ ಮತ್ತು ಆಸುಪಾಸಿನ ನಿವಾಸಿಗಳು. ಇವರೆಲ್ಲರಿಗೂ ಶರತ್ ಟೀಮ್ ಲೀಡರ್. ಇತ್ತೀಚೆಗೆ ಬೋಗಾದಿ ಬಳಿ ರೋಡ್ ರಾಬ್ರಿಗೆ ಹೊಂಚು ಹಾಕುತ್ತಿದ್ದಾಗ ಸರಸ್ವತಿಪುರಂ ಠಾಣೆಯ ಸಬ್ಇನ್ಸ್ಪೆಕ್ಟರ್ ದಿವ್ಯಾ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ತಮ್ಮೆಲ್ಲ ಕೃತ್ಯಗಳನ್ನೂ ಒಪ್ಪಿಕೊಂಡಿದ್ದಾರೆ.
ವೇಶ್ಯೆಯರ ಮನೆಯನ್ನೂ ಬಿಟ್ಟಿಲ್ಲ ಈ ಖದೀಮರು
ಹೌದು ಶೋಕಿಗಾಗಿ ದರೋಡೆ ಮಾಡುತ್ತಿದ್ದ ಆಸಾಮಿಗಳಿಗೆ ಹುಡುಗಿಯರ ಶೋಕಿಯೂ ಇತ್ತು. ನಗರದ ಹಲವು ಏರಿಯಾಗಳಲ್ಲಿ ಇರುವ ವೆಶ್ಯಯರ ಮನೆಗಳಿಗೆ ಹೋಗಿ ಬರುತ್ತಿದ್ದರು. ಒಮ್ಮೆ ಅವರ ಮನೆಗೆ ಹೋಗಿ ಬಂದ ಮೇಲೆ. ಅವರ ಪೂರ್ವಾಪರ ತಿಳಿದುಕೊಂಡು ಮತ್ತೆ ಆಕೆಯ ಬಳಿಯೇ ರಾಬರಿ ಮಾಡಿದ್ದ ನೀಚರು ಇವರು.
ಇನ್ನು ಶರತನ್ನ ಪುಡಾರಿ ಪಟಾಲಮ್ನಲ್ಲಿ ಬರೋಬ್ಬರಿ 30ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ, ಒಮ್ಮೆ ವೇಶ್ಯ, ಮತ್ತೊಮ್ಮೆ ಪ್ರೇಮಿಗಳು ಈಗೆ ನಾನ ಜನರನ್ನ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ. ನಡು ರಸ್ತೆಯಲ್ಲಿ ವಾಹನ ಸವಾರರನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದಾರೆ.
ಹುಬ್ಬಳ್ಳಿ: ಪೊಲೀಸರ ಭರ್ಜರಿ ಕಾರ್ಯಾಚರಣೆ, ಲಕ್ಷಾಂತರ ರೂ. ಮೌಲ್ಯದ ಗಾಂಜಾ ಜಪ್ತಿ
ದರೋಡೆ ಜೊತೆಗೆ ಕೊಲೆಗೂ ಸೈ
ಮೇಲಿನ ಆರೋಪಿಗಳು ವರ್ಷದ ಹಿಂದೆ ನವೀನ್ ಮತ್ತು ಪ್ರಸನ್ನ ಎಂಬವರ ಕೊಲೆಗೆ ಪ್ಲ್ಯಾನ್ ಮಾಡಿ ವಿಫಲರಾಗಿದ್ದರು. 2019ರಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಸಣ್ಣ ಗಲಾಟೆಗೆ ಇರುವ ಗಲಾಟೆ ಮಾಡಿದವರನ್ನೇ ಮುಗಿಸಲು ಮುಂದಾಗಿದ್ರು. ಹೀಗೆ ಹೇಳುತ್ತಾ ಹೋದ್ರೆ ಇವತ ಕಥೆ ಮುಗಿಯೋದಿಲ್ಲ.
ಆರೋಪಿಗಳ ಬಂಧನದೊಂದಿಗೆ ಸರಸ್ವತಿಪುರಂ, ವಿದ್ಯಾರಣ್ಯಪುರಂ, ಲಕ್ಷ್ಮಿಪುರಂ, ವಿಜಯನಗರ, ಕೆ.ಆರ್. ಪೊಲೀಸ್ ಠಾಣಾ ವ್ಯಾಪ್ತಿಯ 5 ಪ್ರಕರಣಗಳು ಪತ್ತೆಯಾಗಿವೆ. 6 ಸಾವಿರ ರೂ. ನಗದು, ಮಾರುತಿ ಓಮ್ನಿ ಕಾರು, 4 ದ್ವಿಚಕ್ರ ವಾಹನ, 11 ಮೊಬೈಲ್ ಫೋನ್, 4 ಹಾಕಿ ಸ್ಟಿಕ್, 5 ಡ್ರಾಗರ್, ಲಾಂಗ್ ಮುಂತಾದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ 15ಕ್ಕೂ ಹೆಚ್ಚು ಆರೋಪಿಗಳು ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದಾರೆ.