ನಕಲಿ ದಾಖಲಾತಿ ಸೃಷ್ಟಿಸಿ ಅನುಕಂಪದ ಹುದ್ದೆ ಗಿಟ್ಟಿಸಿಕೊಂಡಿದ್ದ ಬೆಸ್ಕಾಂನ ಬೃಹತ್‌ ಜಾಲವೊಂದನ್ನು ಭೇದಿಸಿರುವ ಚಿತ್ರದುರ್ಗ ಪೊಲೀಸರು ಈ ಸಂಬಂಧ ಎಂಟು ಜನರನ್ನು ಬಂಧಿಸಿದ್ದು ಇತರೆ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

ಚಿತ್ರದುರ್ಗ (ಡಿ.21) : ನಕಲಿ ದಾಖಲಾತಿ ಸೃಷ್ಟಿಸಿ ಅನುಕಂಪದ ಹುದ್ದೆ ಗಿಟ್ಟಿಸಿಕೊಂಡಿದ್ದ ಬೆಸ್ಕಾಂನ ಬೃಹತ್‌ ಜಾಲವೊಂದನ್ನು ಭೇದಿಸಿರುವ ಚಿತ್ರದುರ್ಗ ಪೊಲೀಸರು ಈ ಸಂಬಂಧ ಎಂಟು ಜನರನ್ನು ಬಂಧಿಸಿದ್ದು ಇತರೆ ಇಬ್ಬರು ತಲೆ ಮರೆಸಿಕೊಂಡಿದ್ದಾರೆ. ಜ್ಯೂನಿಯರ್‌ ಇಂಜಿನಿಯರ್‌ ಸೇರಿದಂತೆ ಪ್ರಮುಖ ಆರು ಹುದ್ದೆಗಳಲ್ಲಿ ನಕಲಿ ದಾಖಲೆ ನೀಡಿ ಅನುಕಂಪದ ಆಧಾರದಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲಾಗಿದ್ದು ಇದರಲ್ಲಿ ಮೇಲಧಿಕಾರಿಯಿಂದ ಕೆಳ ಹಂತದವರೆಗೂ ಶ್ಯಾಮೀಲಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣವೊಂದರಲ್ಲಿ ಬೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್‌, ನಾಗರಾಜ್‌ ಅವರು ನೀಡಿದ ದೂರು ಬೆನ್ನತ್ತಿದ ಪೊಲೀಸರಿಗೆ ವಂಚಕರ ಜಾಲ ಪತ್ತೆ ಯಾಗಿದೆ.

ಪ್ರಕರಣ ಬೆಳಕಿಗೆ ಬಂದದ್ದು ಹೀಗೆ:

ಚಿತ್ರದುರ್ಗ ನಗರದ ಫೈಜಾನ್‌ ಮುಜಾಹಿದ್‌ಸಿ.ಕೆ ಎಂಬಾತ, ತನ್ನ ಅಣ್ಣ ಮಹಮದ್‌ ಷೇಕ್‌.ಸಿ.ಕೆ. ಸಹಾಯಕ ಮಾರ್ಗದಾಳು ಆಗಿ ಬೆಸ್ಕಾಂನಲ್ಲಿ ಕೆಲಸ ಮಾಡಿಕೊಂಡಿದ್ದು ಮೃತಪಟ್ಟಿದ್ದಾರೆ. ಹಾಗಾಗಿ ಅನುಕಂಪದ ಆಧಾರದ ಮೇಲೆ ಅವರ ಜಾಗಕ್ಕೆ ತನ್ನನ್ನು ನೇಮಕಾತಿ ಮಾಡಿಕೊಳ್ಳುವಂತೆ ಅರ್ಜಿ ಸಲ್ಲಿಸಿದ್ದರು.

ಮೋದಿ, ಸುಪ್ರೀಂ, ಚುನಾವಣಾ ಆಯೋಗದ ಬಗ್ಗೆ ಸುಳ್ಳು ಸುದ್ದಿ ಹರಡ್ತಿದ್ದ 3 ಯೂಟ್ಯೂಬ್ ಚಾನೆಲ್‌ ಪತ್ತೆಹಚ್ಚಿದ PIB..!

ದಾಖಲಾತಿ ಪರಿಶೀಲನೆ ಮಾಡುವ ವೇಳೆ ಮಹಮದ್‌ ಪೇಕ್‌ ಸಿ.ಕೆ ಎಂಬ ವ್ಯಕ್ತಿ ಸಹಾಯಕ ಮಾರ್ಗದಾಳುವಾಗಿ ಉಪವಿಭಾಗ ವ್ಯಾಪ್ತಿಯಲ್ಲಿ ಈ ಹಿಂದೆ ಯಾರು ಕಾರ್ಯ ನಿರ್ವಹಿಸಿರು ವುದಿಲ್ಲವೆಂಬ ಸಂಗತಿ ದೃಢವಾಗಿದೆ. ಅನುಕಂಪ ಆಧಾರಿತ ನೌಕರಿ ಪಡೆಯಲು ನಕಲಿ ದಾಖಲಾತಿ ಸೃಷ್ಟಿಸಿ ಸರ್ಕಾರವನ್ನು ವಂಚಿಸಲು ಮುಂದಾಗಿರುವುದು ಪತ್ತೆಯಾಗಿದೆ. ಅಕ್ರಮವಾಗಿ ನೌಕರಿ ಪಡೆಯಲು ಫೈಜಾನ್‌ ಮುಜಾಹಿದ್‌, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ನಾಗರಾಜ್‌ ಕೋಟೆ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು.

ದೂರು ದಾಖಲಿಸಿಕೊಂಡಿದ್ದ ಕೋಟೆ ಪೊಲೀಸರು ತನಿಖೆಗೆ ಮುಂದಾದಾಗ ಅನುಕಂಪ ಆಧಾರದ ಹುದ್ದೆ ಕೊಡಿಸಲೆಂದೇ ವಂಚಕರ ತಂಡವೊಂದು ಬೆಸ್ಕಾಂನಲ್ಲಿ ಸಕ್ರಿಯವಾಗಿರುವುದÜರ ಸುಳಿವು ಸಿಕ್ಕಿದೆ. ಈ ಸಂಬಂಧ ಅಧೀಕ್ಷಕ ಇಂಜಿನಿಯರ್‌ ಎಸ್‌.ಟಿ.ಶಾಂತಮಲ್ಲಪ್ಪ, ಸಹಾಯಕ ಅಧಿಕಾರಿ ಎಲ್‌.ರವಿ, ಮತ್ತೋರ್ವ ಸಹಾಯಕ ಎಚ್‌.ಸಿ.ಪ್ರೇಮ್‌ಕುಮಾರ್‌ ಹಾಗೂ ಅನುಕಂಪ ಆಧಾರಿತ ಹುದ್ದೆ ಗಿಟ್ಟಿಸಿಕೊಳ್ಳಲು ಮುಂದಾದ ಫೈಜಾನ್‌ ಮುಜಾಹಿದ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ಬೆಸ್ಕಾಂನ ಚಿತ್ರದುರ್ಗ ವ್ಯಾಪ್ತಿಯೊಂದರಲ್ಲಿಯೇ ಆರು ಮಂದಿ ನಕಲಿ ದಾಖಲಾತಿ ಸೃಷ್ಟಿಸಿ ಅನುಕಂಪದ ಹುದ್ದೆ ಗಿಟ್ಟಿಸಿಕೊಂಡಿದ್ದು ಕೂಡಾ ಬಹಿರಂಗಗೊಂಡಿದೆ.

ಪತ್ತೆಯಾದ 8 ಆರೋಪಿಗಳು:

ಕಿರಿಯ ಸಹಾಯಕರಾದ ಹರೀಶ್‌, ವಿ.ವಿರೇಶ್‌, ಸಹಾಯಕ ಸಿ. ರಘುಕಿರಣ್‌, ಜೆ.ರಕ್ಷಿತ್‌, ಓ.ಕಾರ್ತಿಕ್‌, ಜ್ಯೂನಿಯರ್‌ ಇಂಜಿನಿಯರ್‌ ಎಂ.ಆರ್‌. ಶಿವಪ್ರಸಾದ್‌ ನಕಲಿ ದಾಖಲಾತಿ ಸಲ್ಲಿಸಿ ಅನುಕಂಪದ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಆರೋಪಿಗಳಾದ ಎಲ….ರವಿ, ವೀರೇಶ್‌, ಇವರುಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನಕಲಿ ಅನುಕಂಪ ಆಧಾರಿತ ನೌಕರಿಗೆ ಅರ್ಜಿ ಸಲ್ಲಿಸುತ್ತಿದ್ದರು. ಪ್ರೇಮ… ಕುಮಾರ್‌ ಕಡತಗಳ ನಿರ್ವಹಣೆ ಮಾಡುತ್ತಿದ್ದರು. ಶಾಂತಮಲ್ಲಪ್ಪ , ಶಿವಪ್ರಸಾದ್‌, ರಕ್ಷಿತ್‌ ಮತ್ತು ಕಾರ್ತಿಕ್‌ ನೌಕರಿ ಪ್ರಸ್ತಾವನೆ ಅನುಮೋದನೆಯಾಗುವಂತೆ ನೋಡಿಕೊಳ್ಳುತ್ತಿದ್ದುದು ವಿಚಾರಣೆ ವೇಳೆ ಬಯಲಿಗೆ ಬಂದಿದೆ.

ಪ್ರಕರಣದಲ್ಲಿ 8 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಲ್ಲಿ ಜೆ.ರಕ್ಷಿತ್‌, ಓ.ಕಾರ್ತಿಕ್‌ ತಲೆ ಮರೆಸಿಕೊಂಡಿದ್ದಾರೆÜ ಎಂದು ಎಸ್ಪಿ ಪರಶುರಾಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಐಪಿಎಸ್‌ ಅಧಿಕಾರಿ ಎಂದು ಪೋಸ್‌ ನೀಡಿ ಮಹಿಳೆಯರ ವಂಚಿಸಿದ 8ನೇ ತರಗತಿ ಓದಿರುವ ಭೂಪ..!

ಇಡೀ ಪ್ರಕರಣ ಬೇಧಿಸಲು ಡಿವೈಎಸ್‌ಪಿ ಎಚ್‌.ಆರ್‌.ಅನಿಲ… ಕುಮಾರ್‌, ಡಿಸಿಆರ್‌ಬಿ ಡಿವೈಎಸ್ಪಿ ಲೋಕೇಶಪ್ಪ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಕೋಟೆ ಪೊಲೀಸ್‌ ಠಾಣೆಯ ಪಿಐ ರಮೇಶ್‌ ರಾವ್‌ , ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಪಿಎಸ್‌ಐ ಸಚಿನ್‌ ಬೀರಾದಾರ್‌, ಸಿಬ್ಬಂದಿ ಆರ್‌.ಇ.ತಿಪ್ಪೆಸ್ವಾಮಿ, ಡಿ.ತಿಪ್ಪಸ್ವಾಮಿ, ಚಂದ್ರಶೇಖರ್‌, ಸಿ.ಮಲ್ಲೇಶಪ್ಪ, ಎಂ.ಹಾಲೇಶಪ್ಪ, ಎಂ.ಬಾಬು, ಜೆ.ಸಿ.ಚಿದಾನಂದ, ನಾಗರಾಜ… ಹಲುವಾಗಿಲು, ಚಂದ್ರಶೇಖರಪ್ಪ ರವರುಗಳನ್ನೊಳಗೊಂಡ ತಂಡವನ್ನು ರಚಿಸಿಸಲಾಗಿತ್ತೆಂದು ಎಸ್ಪಿ ಪರಶುರಾಂ ತಿಳಿಸಿದರು.