ರಾತ್ರಿ ಮಲಗಿದ್ದವರ ಮೇಲೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ದುರ್ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ನಡೆದಿದೆ. ಶ್ರೀನಿವಾಸ್, ಹೇಮಶ್ರಿ, ಶಿವ, ನಾಗಮ್ಮ, ಮುನಿವೆಂಕಟಮ್ಮ ಮಕ್ಕಳಾದ, ಮೇಘನಾ (6),  ವೈಶಾಲಿ (7) ಗಾಯಾಳುಗಳು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 7 ಮಂದಿಗೆ ಗಾಯಗಳಾಗಿದ್ದು,, ಬಾಲಕಿ ಮೇಘನಾ ಸ್ಥಿತಿ ಗಂಭೀರವಾಗಿದೆ.

ಕೋಲಾರ (ಡಿ.14): ರಾತ್ರಿ ಮಲಗಿದ್ದವರ ಮೇಲೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ದುರ್ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಶ್ರೀನಿವಾಸ್, ಹೇಮಶ್ರಿ, ಶಿವ, ನಾಗಮ್ಮ, ಮುನಿವೆಂಕಟಮ್ಮ ಮಕ್ಕಳಾದ, ಮೇಘನಾ (6), 
ವೈಶಾಲಿ (7) ಗಾಯಾಳುಗಳು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 7 ಮಂದಿಗೆ ಗಾಯಗಳಾಗಿದ್ದು,, ಬಾಲಕಿ ಮೇಘನಾ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿ ಶಾಕ್: ಮಗ ಪ್ರೀತಿಸಿ ಓಡಿ ಹೋಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಬೆತ್ತಲೆಗೊಳಿಸಿ ಹಲ್ಲೆ!

ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಶ್ರೀನಿವಾಸ ಮತ್ತು ಕುಟುಂಬ. ಹಳೆಯ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ ಎಂದಿನಂತೆ ಊಟ ಮಾಡಿ ಮಲಗಿದ್ದ ವೇಳೆ ತಡರಾತ್ರಿ ಮೇಲ್ಛಾವಣಿ ಕುಸಿದು ಮಲಗಿದವರ ಮೇಲೆ ಬಿದ್ದಿದೆ. ಏನಾಯ್ತು ಎಂಬ ಅರಿವಾಗುವಷ್ಟರಲ್ಲಿ ನಡೆದು ಹೋಗಿರುವ ದುರಂತ. ಆರು ವರ್ಷದ ಬಾಲಕಿ ಮೇಘನಾ ಮುಖದ ಭಾಗ ಛಿದ್ರವಾಗಿದ್ದು ಎದೆ ಮೇಲೆಯೂ ಕಲ್ಲುಬಿದ್ದು ಸ್ಥಿತಿ ಚಿಂತಾಜನಕವಾಗಿದೆ. ಸಾವುಬದುಕಿನ ಮಧ್ಯೆ ಹೋರಾಟ ನಡೆಸಿರುವ ಬಾಲಕಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ. ಇನ್ನುಳಿದ ಮುನಿವೆಂಕಟಮ್ಮರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸ್​ ಸೇರಿದ ಉಳಿದ ನಾಲ್ಕು ಜನರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಸ್ಥಳಕ್ಕೆ ನಂಗಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.