ರಾಮನಗರ: ತಾಳಿಯ ಚಿನ್ನದ ಗುಂಡು ಕಳವು ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ

ನಮ್ಮ ತಂದೆಗೆ ಕಪಾಳಕ್ಕೆ ಹೊಡೆದು ಕೊಲೆ ಮಾಡಿರುವುದಾಗಿ ಗಂಗಚೆಲುವಯ್ಯ ಪುತ್ರ ರಾಜಮುಡಿ ಮಾಗಡಿ ಪೊಲೀಸ್‌ ಠಾಣೆಗೆ ದೂರು ನೀಡಿ​ದ್ದಾರೆ. 

63 Year Old Man Killed at Magadi in Ramanagara grg

ಮಾಗಡಿ(ಜು.11):  ತಾಳಿಯ ಚಿನ್ನದ ಗುಂಡು ಕಳ​ವಾ​ಗಿ​ರುವ ವಿಚಾ​ರಕ್ಕೆ ಸಂಬಂಧಿ​ಗಳ ನಡುವಿನ ಗಲಾಟೆ ಕೊಲೆ​ಯಲ್ಲಿ ಅಂತ್ಯ​ವಾ​ಗಿ​ರುವ ಘಟನೆ ತಾಲೂ​ಕಿನ ಬೈರ​ನ​ಹಳ್ಳಿ ಗ್ರಾಮ​ದಲ್ಲಿ ನಡೆ​ದಿದೆ. ಗ್ರಾಮದ ಗಂಗ ಚೆಲು​ವಯ್ಯ(63) ಕೊಲೆ​ಯಾ​ದ​ವರು. ಬೆಟ್ಟ​ಸ್ವಾ​ಮಿ ಪುತ್ರ ಸುದ​ರ್ಶನ ಕೃತ್ಯ ಎಸ​ಗಿ​ದ​ವನು.

ಘಟನೆ ವಿವ​ರ:

ಬೈರನಹಳ್ಳಿಯ ಗಂಗ ಚೆಲುವಯ್ಯನವರ ಸಂಬಂಧಿ ನಂದಿನಿ ಗ್ರಾಮದ ಬೆಟ್ಟಸ್ವಾಮಿ ಸಂಬಂಧಿ ಅಟ್ಟಮ್ಮನವರ ತಾಳಿಗುಂಡನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ನಡೆದ ರಾಜಿ ಪಂಚಾಯಿತಿಯಲ್ಲಿ ನಂದಿನಿ ಕಳ್ಳತನ ಮಾಡಿಲ್ಲ ಎಂದು ಒಪ್ಪಿಕೊಂಡಿದ್ದರು.

ಈ ವಿಚಾರವಾಗಿ ಬೆಟ್ಟಸ್ವಾಮಿ ಪತ್ನಿ ಶಿವಮ್ಮನವರು ಗಂಗ ಚೆಲುವಯ್ಯನವರ ವಿರುದ್ಧ ಗ್ರಾಮದಲ್ಲಿ ಪದೇಪದೆ ಅವಾಚ್ಯ ಶಬ್ದಗಳಿಂದ ನಿಂದಿ​ಸು​ತ್ತಿ​ದ್ದರು. ಭಾನುವಾರ ಸಂಜೆ ಬೆಟ್ಟಸ್ವಾಮಿ ಪತ್ನಿ ಶಿವಮ್ಮ, ಪುತ್ರ ಸುದರ್ಶನ, ರಾಜು ಗ್ರಾಮಕ್ಕೆ ಬಂದು ಗಂಗಚೆಲುವಯ್ಯ ಮನೆಯ ಮುಂದೆ ನಂದಿನಿಗೆ ಬೆಂಬಲಿಸಿದ್ದೀರಾ ಎಂದು ಆರೋಪಿಸಿ ತಗಾದೆ ತೆಗೆ​ದಿ​ದ್ದಾರೆ.

ಮಡಿಕೇರಿ: ಗೌರಿ ಕೊಲೆ ಆರೋಪಿಗಳ ಪರ ವಕೀಲಗೆ ನಕ್ಸಲರಿಂದ ಬೆದರಿಕೆ?: ದೂರು ದಾಖಲು

ಸುದರ್ಶನ ಕೋಪ​ದಲ್ಲಿ ಗಂಗಚೆಲುವಯ್ಯನವರ ಕಪಾಳಕ್ಕೆ ಹೊಡೆದಾಗ ಅಸ್ವಸ್ಥಗೊಂಡಿ​ದ್ದಾರೆ. ತಕ್ಷಣ ಅವ​ರನ್ನು ಮಾಗಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ​ಮಧ್ಯೆ ಕೊನೆ ಯುಸಿ​ರೆ​ಳೆ​ದಿ​ದ್ದಾರೆ. ನಮ್ಮ ತಂದೆಗೆ ಕಪಾಳಕ್ಕೆ ಹೊಡೆದು ಕೊಲೆ ಮಾಡಿರುವುದಾಗಿ ಗಂಗಚೆಲುವಯ್ಯ ಪುತ್ರ ರಾಜಮುಡಿ ಮಾಗಡಿ ಪೊಲೀಸ್‌ ಠಾಣೆಗೆ ದೂರು ನೀಡಿ​ದ್ದಾರೆ. ಮಾಗಡಿ ಪೊಲೀ​ಸರು ತನಿಖೆ ನಡೆ​ಸು​ತ್ತಿ​ದ್ದಾ​ರೆ.

Latest Videos
Follow Us:
Download App:
  • android
  • ios