ಅಜ್ಮೀರ್ (ಅ. 16) ಜೂಜಾಟದಲ್ಲಿ ನಿರತ ಪುರುಷರ ತಂಡದ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವುದು ಸರ್ವೇ ಸಾಮಾನ್ಯ. ಆದರೆ ನಾವೇನು ಕಡಿಮೆ ಎಂದು ಈ ಮಹಿಳಾಮಣಿಯರು ಗ್ಯಾಂಬ್ಲಿಂಗ್ ಗೆ ತೊಡಗಿದ್ದರು.

ಅಜ್ಮೀರ್‌ ವೈಶಾಲಿ ನಗರದ ಜಿ ಬ್ಲಾಕ್‌ ಪೊದೆಗಳ ಹಿಂದೆ ಜೂಜಾಟ ನಿರತರಾಗಿದ್ದ  ಆರು ಮಹಿಳೆಯರು ಸೇರಿದಂತೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆನ್ ಲೈನ್ ಜೂಜುಕೋರರ ಚಮತ್ಕಾರ ಕಂಡು ಪೊಲೀಸರೆ ಕಕ್ಕಾಬಿಕ್ಕಿ!

ಬಂಧಿತ ಆರೋಪಿಗಳನ್ನು ನೀತು (57), ನಾಂಕಿ (50), ಸಂಗೀತಾ (52), ಸೋನಾ (49), ರುಕ್ಮಣಿ (48), ಮಾಯಾ (45) ಮತ್ತು ಸನ್ನಿ (33) ಎಂದು ಗುರುತಿಸಲಾಗಿದೆ.  ಆರೋಪಿಗಳಿಂದ 37,000 ರೂ ಮೌಲ್ಯದ ವಸ್ತುಗಳು ಮತ್ತು 13,650 ರೂ.ಗಳ ನಗದು ವಶಪಡಿಸಿಕೊಳ್ಳಲಾಗಿದೆ.

ಅಜ್ಮೀರ್ ಪೊಲೀಸರು ಜೂಜಾಟದ ವಿರುದ್ಧ ಸಮರ ಸಾರಿದ್ದು ಕ್ಯಾಂಪೇನ್ ಆರಂಭ ಮಾಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ.