ಬೆಂಗಳೂರು(ಏ.11): ತಾತನ ಕೈ ಜಾರಿ ಎರಡು ಅಂತಸ್ತಿನ ಕಟ್ಟಡದಿಂದ ಆರು ತಿಂಗಳ ಹಸುಗೂಸು ಬಿದ್ದು, ಮೃತಪಟ್ಟಿರುವ ದಾರುಣ ಘಟನೆ ಸುಬ್ರಮಣ್ಯ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾರುತಿ ನಗರ ನಿವಾಸಿ ವಿನಯ್ ಹಾಗೂ ಪ್ರಿಯಾಂಕ ದಂಪತಿಯ ಪುತ್ರಿ ಅನ್ವಿ ಮೃತಪಟ್ಟ ಕಂದಮ್ಮ.

ವಿನಯ್‌ ಮತ್ತು ಪ್ರಿಯಾಂಕ್‌ ಅವರು ನಗರದ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಕೆಲವು ವರ್ಷಗಳಿಂದ ಕುಟುಂಬ ಮಾರುತಿ ನಗರದಲ್ಲಿ ನೆಲೆಸಿದೆ. ದಂಪತಿ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆ ಶುಚಿಗೊಳಿಸುತ್ತಿದ್ದರು. ಈ ವೇಳೆ ವಿನಯ್‌ ಅವರು ಮಗುವನ್ನು ತಂದೆ ಕೈ ನೀಡಿದ್ದರು. ಮೊದಲ ಮಹಡಿಯಲ್ಲಿ ವಿನಯ್‌ ಅವರ ಮನೆ ಇದ್ದು, 70 ವರ್ಷದ ವಿನಯ್‌ ಅವರ ತಂದೆ ಮಗುವನ್ನು ಎರಡನೇ ಮಹಡಿಗೆ ಕರೆದೊಯ್ಯಲು ಮೆಟ್ಟಿಲು ಹತ್ತುವಾಗ ಕಾಲು ಜಾರಿದ್ದಾರೆ, ಆಗ ಆಕಸ್ಮಿಕವಾಗಿ ಕೈಯಲ್ಲಿದ್ದ ಮಗು ಜಾರಿ ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದೆ.

ಮಗು ಜನಿಸಿ 15 ದಿನವಾದ್ರೂ ಮುಖ ನೋಡಿಲ್ಲ: ಸೋಂಕಿತರ ಸೇವೆಯಲ್ಲಿ ವೈದ್ಯ!

ಕೂಡಲೇ ದಂಪತಿ ಮಗುವನ್ನು ಮಲ್ಲೇಶ್ವರಂನ ಮಣಿಪಾಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಐಸಿಯುವಿಲ್ಲದ ಕಾರಣ ಬೇರೊಂದು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಅಷ್ಟೊತ್ತಿಗೆ ಮಾರ್ಗ ಮಧ್ಯೆಯೇ ಮಗು ಮೃತಪಟ್ಟಿದೆ ಎಂದು ಸುಬ್ರಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.