Asianet Suvarna News Asianet Suvarna News

Tamil Nadu: ಮಹಿಳಾ ಕಾಲೇಜಿನ ಹೊರಗೆ ಯುವಕರ ಪುಂಡಾಟದ ವಿಡಿಯೋ ವೈರಲ್‌: 6 ಜನ ಬಂಧನ

ಕಾಲೇಜು ಪ್ರವೇಶ ದ್ವಾರದ ಬಳಿ ಶವಯಾತ್ರೆ ಸಾಗುತ್ತಿದ್ದು, ಮೆರವಣಿಗೆಯ ಭಾಗವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕರ ಗುಂಪು ಈ ಗಲಾಟೆ ಮಾಡಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ, ಈ ಯುವಕರು ಅಮಲಿನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ಇದರಿಂದ ಪ್ರೇರಿತವಾಗಿ ಕೃತ್ಯ ನಡೆಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

6 arrested for assaulting man outside govt college in madurai by tamil nadu police ash
Author
First Published Nov 6, 2022, 7:20 PM IST

ತಮಿಳುನಾಡಿನ (Tamil Nadu) ಮಧುರೈನ (Madurai) ಸರ್ಕಾರಿ ಮಹಿಳಾ ಕಾಲೇಜೊಂದರ (Government Women College) ಹೊರಗೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ (Viral Video) ಆಗಿದೆ. ಈ ಹಿನ್ನೆಲೆ ಈ ಸಂಬಂಧ ತನಿಖೆ ನಡೆಸಿದ ತಮಿಳುನಾಡು ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. ಯುವಕರ ಗುಂಪು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡುತ್ತಿದ್ದರು ಹಾಗೂ ಕಾಲೇಜು ವಿದ್ಯಾರ್ಥಿಗಳ ಮೇಲೆ ಕೆಟ್ಟದಾಗಿ ಟೀಕೆ ಮಾಡಿದ್ದು ವೈರಲ್‌ ಆಗಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ 6 ಜನರನ್ನು ಬಂಧಿಸಿದ್ದಾರೆ (Arrested). 

ಮಧುರೈ ಸರ್ಕಾರಿ ಕಾಲೇಜಿನ (ಮಧುರೈ ಮೀನಲ್‌ ಮಹಿಳಾ ಕಾಲೇಜು) ಹೊರಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಲ್ಲದೆ, ತನ್ನ ಮಗಳನ್ನು ಕಾಲೇಜಿನಿಂದ ಕರೆದುಕೊಂಡು ಹೋಗಲು ಬಂದಾಗ ಸೆಂತಮಿಲ್ ಪಾಂಡಿಯನ್ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: ಪೊಲೀಸರು ಅಲರ್ಟ್ ಆಗಿದ್ದಾರಾ ಅಂತ ಚೆಕ್‌ ಮಾಡೋಕೆ ಮಹಿಳಾ ಎಸ್‌ಪಿ ಮಾಡಿದ ಪ್ಲ್ಯಾನ್‌ ವೈರಲ್..!

ಕಾಲೇಜು ಪ್ರವೇಶ ದ್ವಾರದ ಬಳಿ ಶವಯಾತ್ರೆ ಸಾಗುತ್ತಿದ್ದು, ಮೆರವಣಿಗೆಯ ಭಾಗವಾಗಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕರ ಗುಂಪು ಈ ಗಲಾಟೆ ಮಾಡಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ, ಈ ಯುವಕರು ಅಮಲಿನ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ಇದರಿಂದ ಪ್ರೇರಿತವಾಗಿ ಕೃತ್ಯ ನಡೆಸಿರಬಹುದು ಎಂದೂ ಮಧುರೈ ಉತ್ತರ ಡೆಪ್ಯುಟಿ ಕಮೀಷನರ್‌ ಆಫ್‌ ಪೊಲೀಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಯುವಕರ ವರ್ತನೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರ ತಂದೆ ಸೆಂತಮಿಲ್ ಪಾಂಡಿಯನ್ ಪ್ರಶ್ನೆ ಮಾಡಿದ್ದಕ್ಕೆ, ಆ ಗುಂಪಿನಲ್ಲಿದ್ದ 6 ಜನರು ಆತನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು ಮತ್ತು ಆತನನ್ನು ಕೆಳಗೆ ತಳ್ಳಿದ್ದಾರೆ. ಜತೆಗೆ, ಹೆಲ್ಮೆಟ್‌ನಿಂದಲೂ ಹಲ್ಲೆ ಮಾಡಿದ್ದಾರೆ ಎಂದೂ ತಿಳಿದುಬಂದಿದೆ.  

ಇದನ್ನೂ ಓದಿ: Tripura: ತಾಯಿ, ತಂಗಿ ಸೇರಿ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಬಾಲಕ ಬಂಧನ

ಮಧುರೈ ಸರ್ಕಾರಿ ಕಾಲೇಜಿನ ಹೊರಗೆ ನಡೆದಿದೆ ಎಂದು ವರದಿಯಾದ ಘಟನೆಯಲ್ಲಿ ಬಂಧಿತ ಆರೋಪಿಗಳನ್ನು ರಾಮಮೂರ್ತಿ, ಸೋಮಸುಂದರಂ, ಶಿವನ್ಯಾನಂ, ನಾಗಪ್ರಿಯನ್, ಸತೀಶ್ ಕುಮಾರ್ ಮತ್ತು ಅಜಿತ್ ಕುಮಾರ್ ಎಂದು ಗುರುತಿಸಲಾಗಿದೆ. ಒಟ್ಟಾರೆ, ಮಧುರೈನ ಸೆಲ್ಲೂರು ಪೊಲೀಸರು 6 ಮಂದಿಯನ್ನು ಬಂಧಿಸಿದ್ದು, ಮತ್ತು ಭಾರತೀಯ ದಂಡ ಸಂಹಿತೆಯ 6 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಈ 6 ಜನರ ಪೈಕಿ ಕಾಲೇಜಿನ ವಿದ್ಯಾರ್ಥಿಯೂ ಒಬ್ಬ ಇದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಯ ಕಾಲೇಜು ಪ್ರಾಂಶುಪಾಲರಿಗೆ ಪತ್ರ ಬರೆದಿದ್ದೇವೆ. ಬಾಲಕಿಯರ ಕಾಲೇಜು ಇರುವ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಪೊಲೀಸರಿಗೆ ಸೂಚಿಸಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ಮೋಹನ್ ರಾಜ್ ತಿಳಿಸಿದರು. ಘಟನೆ ಹಿನ್ನೆಲೆಯಲ್ಲಿ ಮಧುರೈನ ಎಲ್ಲಾ ಮಹಿಳಾ ಕಾಲೇಜುಗಳ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಅಡುಗೆ ಮಾಡುವ ವಿಚಾರಕ್ಕೆ ಕೊಲೆ ಮಾಡಿ ಪರಾರಿಯಾಗಿದ್ದ ಅಪ್ರಾಪ್ತನ ಬಂಧನ

ಈ ಹಿಂದೆ, ಅಕ್ಟೋಬರ್ 30 ರಂದು ಮಧುರೈನ ಲೇಡಿ ಡಾಕ್ ಮಹಿಳಾ ಕಾಲೇಜಿಗೆ ಕೆಲವು ಯುವಕರು ನುಗ್ಗಿ ಅಲ್ಲಿನ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದಾಗ 11 ಜನರ ವಿರುದ್ಧ ಮಧುರೈ ತಲ್ಲಕುಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ನಾವು 10 ಜನರನ್ನು ಬಂಧಿಸಿದ್ದೇವೆ ಮತ್ತು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ 10 ರಲ್ಲಿ ಐವರು ಕಾಲೇಜು ವಿದ್ಯಾರ್ಥಿಗಳು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದರು. 

Follow Us:
Download App:
  • android
  • ios