Sandalwood

ವಾಸುಕಿ ಮನೆಯಲ್ಲಿ ಸಂಭ್ರಮ!

ಬಿಗ್ ಬಾಸ್ ಸ್ಪರ್ಧಿ, ಕನ್ನಡ ಚಿತ್ರರಂಗದ ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ಪತ್ನಿ ಬೃಂದಾ ಮೊದಲ ವರ್ಷ ವಿವಾಗ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. 

Image credits: Instagram

ಗಂಡ- ಹಂಡ್ತಿ ವೈರಲ್ ಫೋಟೋ!

ವಾರ್ಷಿಕೋತ್ಸವ ಪ್ರಯುಕ್ತ ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಸಮುದ್ರಾದ ಬಳಿ ಪತ್ನಿ ಬೃಂದಾ ಕೂಸುಮರಿ ಮಾಡಿರುವ ಫೋಟೋವನ್ನು ವಾಸುಕಿ ಹಂಚಿಕೊಂಡಿದ್ದಾರೆ. 

Image credits: Instagram

ಆನಿವರ್ಸರಿ ವಿಶ್!

16/11/23 to 16/11/24 ಮದುವೆಯಾಗಿ ಒಂದು ವರ್ಷ. ಈ ಜರ್ನಿಯಲ್ಲಿ ನನ್ನನ್ನು ಹೊತ್ತು ಸಾಗಿಸಿಕೊಂಡು ಬಂದಿರುವುದಕ್ಕೆ ವಂದನೆಗಳು ಎಂದು ವಾಸುಕಿ ವೈಭವ್ ಬರೆದುಕೊಂಡಿದ್ದಾರೆ. 

Image credits: Instagram

ಇಬ್ಬರು ಬೆನಕ ತಂಡದವರು!

ವಾಸುಕಿ ವೈಭವ್‌ ತಮ್ಮ ಸಂಗಾತಿಯನ್ನು ಮೊದಲು ಭೇಟಿ ಮಾಡಿದ್ದು ಬೆನಕ ರಂಗಭೂಮಿ ತಂಡದಲ್ಲಿ. ಗೋಕುಲ ನಿರ್ಗಮನ ನಾಟಕದ ಸಮಯದಲ್ಲಿ ನೋಡಿದ್ದು, ಒಟ್ಟಿಗೆ ಕೆಲಸ ಮಾಡಿದ್ದು 'ಸತ್ತವರು ನೆರಳು' ನಾಟಕದಲ್ಲಿ. 

Image credits: Instagram

ಹಲವು ವರ್ಷಗ ಲವ್ ಸ್ಟೋರಿ!

ಬಿವಿ ಕಾರಂತ್ ರಂಗ ಸಂಗೀತ ವರ್ಕ್‌ ಶಾಪ್‌ನಲ್ಲಿ ಭೇಟಿ ಆಗುತ್ತಿದ್ದರು.ವಾಸುಕಿ ನಾಟಕ ನೋಡಲು ಬಂದಾಗ ಎಲ್ಲರ ಎದುರು ಸ್ನೇಹಿತೆ ಆಗಿದ್ದ ಬೃಂದಾಗೆ ಮುತ್ತು ಕೊಟ್ಟುಬಿಡುತ್ತಾರೆ. 

Image credits: Instagram

ಪ್ರತಿ ದಿನವೂ ಮೀಟಿಂಗ್!

ಒಬ್ಬರು ನಾಟಕದ ನೆಪದಲ್ಲಿ ಪದೇ ಪದೇ ಭೇಟಿ ಮಾಡುತ್ತಿದ್ದರಂತೆ, ಈ ಸಮಯ ಇಬ್ಬರು ಕನೆಕ್ಟ್‌ ಆಗಲು ಸಹಾಯವಾಗಿದೆ. ಅಲ್ಲದೆ ಬಬ್ಬರೇ ಎಲ್ಲಾದರೂ ಹೋದರೆ ಮತ್ತೊಬ್ಬರು ಎಲ್ಲಿ ಅಂತ ಪ್ರಶ್ನೆ ಮಾಡುವಷ್ಟು ಇವರು ಕ್ಲೋಸ್ ಇದ್ದರು. 

Image credits: Instagram

ಪ್ರಪೋಸ್‌ ಮಾಡಿದ್ದು ಕಾಲುಂಗುರದಿಂದ!

ವಿಭಿನ್ನವಾಗಿ ಪ್ರಪೋಸ್ ಮಾಡಬೇಕು ಎಂದು ಕಾಲುಂಗುರ ಮತ್ತು ಗೆಜ್ಜೆ ತೆಗೆದುಕೊಂಡು ಸಿನಿಮಾ ಸ್ಟೈಲ್‌ನಲ್ಲಿ ಪ್ರಪೋಸ್ ಮಾಡಿದ್ದಾರೆ. ಖುಷಿಯಿಂದ ಆನಂದಬಾಷ್ಪ ಸುರಿಸಿ ತಬ್ಬಿಕೊಂಡಿದ್ದಾರೆ ಬೃಂದಾ.

Image credits: Instagram

'ಮಗಳು ಜಾನಕಿ' ಸೀರಿಯಲ್ ಮುಗಿದ್ದಿದೇ ತಡ ಎಲ್ಲಿ ಮಾಯವಾಗಿಬಿಟ್ಟರು ಗಾನವಿ ಲಕ್ಷ್ಮಣ್

ಬಿಗ್ ಬಾಸ್‌ ರೂಪೇಶ್‌ ಶೆಟ್ಟಿಗೆ ಜೋಡಿಯಾದ ತುಳು ಸುಂದರಿ ಅದ್ವಿತಿ ಶೆಟ್ಟಿ!

ಕುಳ್ಳಿಯರಿಗೆ ನಟಿ ಕೀರ್ತಿ ಸುರೇಶ್ ಅವರ ಬಳಿ ಇರುವ ಟ್ರೆಂಡೀ ಸೀರೆ ಸ್ಟೈಲ್!

ನಾನು ಅಪ್ಪು ಮದುವೆಯಾದ ದಿನವೇ ಅತ್ತೆ ಕೆಲಸ ನಿಲ್ಲಿಸಿಬಿಟ್ಟರು: ಅಶ್ವಿನಿ ಪುನೀತ್