Asianet Suvarna News Asianet Suvarna News

ವಾಮಾಚಾರದ ಸೋಗಲ್ಲಿ ಮನೆ ಮಾಲಕಿಗೆ 4 ಕೋಟಿ ಪಂಗನಾಮ..!

*  ಕೋಟಿ ಕೋಟಿ ನುಂಗಿದ ಕೆಲಸದಾಳು, ಇಬ್ಬರ ಬಂಧನ
*  ಆರೋಪಿಗಳಿಂದ ಒಂದು ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಜಪ್ತಿ 
*  ಮನೆಯೊಡತಿ ಮನೆಗೆ ಕನ್ನ ಹಾಕಲು ತನ್ನ ಗೆಳೆಯರ ಜತೆ ಸಂಚು ರೂಪಿಸಿದ್ದ ಜಯಶ್ರೀ
 

4 Crores Fraud to House Owner in the Name of  Witchcraft in Bengaluru grg
Author
Bengaluru, First Published Oct 6, 2021, 9:49 AM IST

ಬೆಂಗಳೂರು(ಅ.06): ವಾಮಾಚಾರದ(Witchcraft) ಪೂಜೆ ನೆಪದಲ್ಲಿ ಮನೆ ಮಾಲೀಕಳಿಂದ 4.41 ಕೋಟಿ ಪಡೆದು ವಂಚಿಸಿದ್ದ ಆಕೆಯ ಮನೆ ಕೆಲಸದಾಳು ಸೇರಿದಂತೆ ಇಬ್ಬರನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ.

ಕೆಲಸದಾಳು ಜಯಶ್ರೀ ಹಾಗೂ ರಾಕೇಶ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ ಒಂದು ಕೆ.ಜಿ ಚಿನ್ನ ಹಾಗೂ 10 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ತ್ಯಾಗರಾಜನಗರದ ಗೀತಾ ಗುರುದೇವ್‌ ಎಂಬುವರಿಗೆ ಆರೋಪಿಗಳು ಟೋಪಿ ಹಾಕಿದ್ದರು ಎಂದು ಪೊಲೀಸರು(Police) ಹೇಳಿದ್ದಾರೆ.

ಹಲವು ದಿನಗಳಿಂದ ಗೀತಾ ಅವರ ಮನೆಗೆ ಕೆಲಸಕ್ಕೆ ಜಯಶ್ರೀ ಬರುತ್ತಿದ್ದಳು. ಆ ವೇಳೆ ಆಕೆಯ ಮುಂದೆ ತಮ್ಮ ಕಷ್ಟಕಾರ್ಪಣ್ಯವನ್ನು ಗೀತಾ ಹೇಳಿಕೊಂಡಿದ್ದರು. ಆಗ ಆರೋಪಿ, ನಿಮ್ಮ ಸಮಸ್ಯೆಗಳು ಪರಿಹಾರವಾಗಬೇಕಾದರೆ ಪೂಜೆ ಮಾಡಿಸಬೇಕು. ನನಗೆ ಗೊತ್ತಿರುವ ಜ್ಯೋತಿಷ್ಯರು ಇದ್ದಾರೆ. ನಿಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ. ಅದರಿಂದ ಬಚಾವಾಗಬೇಕಾದರೆ ವಾಮಾಚಾರ ಮಾಡಿಸಬೇಕು’ ಎಂದು ಸಲಹೆ ನೀಡಿದ್ದಳು. ಅಲ್ಲದೆ, ‘ಕೂಡಲೇ ವಾಮಾಚಾರ ಮಾಡಿಸದಿದ್ದರೆ, ನೀವು ಹಾಗೂ ನಿಮ್ಮ ಮನೆಯವರು ರಕ್ತಕಾರಿ ಸಾಯುತ್ತಿರಾ’ ಎಂದಿದ್ದಳು. ಈ ಮಾತು ಕೇಳಿ ಗೀತಾ ಅವರಿಗೆ ಆತಂಕ ಮೂಡಿತ್ತು. ಕೊನೆಗೆ ಜಯಶ್ರೀ ಹೇಳಿದಂತೆ ವಾಮಾಚಾರ ಪೂಜೆ ಮಾಡಿಸಲು ಅವರು ಒಪ್ಪಿದ್ದರು.

ಕೊಪ್ಪಳ: ನಡು ರಸ್ತೆಯಲ್ಲೇ ವಾಮಾಚಾರ, ಭಯಬಿದ್ದ ಜನ..!

ಈ ಮೊದಲು ಮನೆಯೊಡತಿ ಮನೆಗೆ ಕನ್ನ ಹಾಕಲು ತನ್ನ ಗೆಳೆಯರ ಜತೆ ಜಯಶ್ರೀ ಸಂಚು ರೂಪಿಸಿದ್ದಳು. ಅಂತೆಯೇ ರಾಕೇಶ್‌ ಹಾಗೂ ಇತರರನ್ನು ಮನೆಗೆ ಕರೆಸಿದ್ದ ಜಯಶ್ರೀ, ವಾಮಾಚಾರ ಮಾಡಲು ಹೇಳಿದ್ದಳು. ಕೆಲ ವಸ್ತುಗಳನ್ನು ತಂದಿದ್ದ ವಂಚಕರು, ಮನೆಯ ಮೂಲೆಯಲ್ಲಿಟ್ಟು ಪೂಜೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಗೀತಾ ಅವರಿಂದ 1.42 ಕೋಟಿ ಪಡೆದು ಹೋಗಿದ್ದರು.

ಮೊದಲ ಪೂಜೆಯಿಂದ ಸಮಸ್ಯೆಗಳು ಪರಿಹಾರವಾಗದಿದ್ದಾಗ ಜಯಶ್ರೀ, ಗೀತಾ ಅವರ ಮನೆಗೆ ಎರಡ್ಮೂರು ಬಾರಿ ತನ್ನ ಸ್ನೇಹಿತರನ್ನು ಕರೆಸಿ ವಾಮಾಚಾರ ಮಾಡಿಸಿದ್ದಳು. ಹೀಗೆ ಪೂಜೆ ಸೋಗಿನಲ್ಲಿ ಹಂತ ಹಂತವಾಗಿ ಗೀತಾ ಅವರಿಂದ ಒಟ್ಟು 4.41 ಕೋಟಿ ಪಡೆದು ಆರೋಪಿಗಳು ತೆರಳಿದ್ದರು. ಕೊನೆಗೆ ತಾವು ಮೋಸ ಹೋಗಿರುವ ಸಂಗತಿ ಗೀತಾ ಅವರ ಅರಿವಿಗೆ ಬಂದಿದೆ. ಬಳಿಕ ಬಸವನಗುಡಿ ಠಾಣೆಗೆ ತೆರಳಿ ಅವರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios