ಬೆಳಗಾವಿ(ಸೆ. 29)ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ‌ ತೊಡಗಿದ್ದ ನಾಲ್ಕು ಜನರನ್ನು ಪೊಲೀಸರು ಬಂಧಿಸಿ, ಅವರಿಂದ 15700  ರೂ.ನಗದು ಹಾಗೂ ದಂಧೆಗೆ ಉಪಯೋಗಿಸುತ್ತಿದ್ದ ನಾಲ್ಕು ಮೊಬೈಲ್ ಗಳನ್ನು ಮಂಗಳವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ಖಡಕ್ ಗಲ್ಲಿಯ ಉತ್ಸವ ಪ್ರಮೋದ ಜಾಧವ, ಖಂಜರಗಲ್ಲಿಯ  ಶಕೀಲ್ ಶಹಪುರವಾಲೆ, ಅಮೀರ್ ಮುಲ್ಲಾ ಹಾಗೂ ಚಾಂದುಗಲ್ಲಿಯ ಮುಜಾವರ ಚಾಂದವಾಲೆ ಬಂಧಿತರು. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಐಪಿಎಲ್ ಶುರುವಾಗಿದ್ದು ಸಣ್ಣ ಪುಟ್ಟ ನಗರದಲ್ಲಿಯೂ ಬೆಟ್ಟಿಂಗ್ ದಂಧೆ ಜೋರಾಗಿದೆ. ಬೆಂಗಳೂರಿನ ಗಾಂಧಿನಗರದ ಬೆಟ್ಟಿಂಗ್ ಅಡ್ಡೆ ಮೇಲೂ ಪೊಲೀಸರು ದಾಳಿ ಮಾಡಿದ್ದರು.