Asianet Suvarna News Asianet Suvarna News

ರಾಯಚೂರು ಭೀಕರ ಅಪಘಾತ ಪ್ರಕರಣ ಬೆನ್ನಲ್ಲೇ ಕಲಬುರಗಿಯಲ್ಲಿ ಮತ್ತೊಂದು ದುರಂತ; ಶಾಲಾ ವಾಹನ ಹರಿದು ಮಗು ದುರ್ಮರಣ!

ಶಾಲಾ ವಾಹನ ಹರಿದು ಮೂರು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

3years old girl died after being hit by school bus at shivapur kalaburagi district rav
Author
First Published Sep 12, 2024, 7:10 AM IST | Last Updated Sep 12, 2024, 7:10 AM IST

ಕಲಬುರಗಿ (ಸೆ.12): ಶಾಲಾ ವಾಹನ ಹರಿದು ಮೂರು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ರಾಜಶೇಖರ್ ಎಂಬುವವರ ಪುತ್ರಿ ಖುಷಿ ಬನ್ನಟ್ಟಿ (3) ಮೃತ ಮಗು,  ಶ್ರೀಶೈಲ್ ಬಂಧಿತ ಶಾಲಾ ವಾಹನ ಚಾಲಕ. ಶಾಲೆಯಿಂದ ಶಾಲಾವಾಹನದಲ್ಲಿ ಬಂದಿದ್ದ ಮಗು. ಮಗುವನ್ನು ಕರೆತರಲು ಹೋಗಿದ್ದ ತಂದೆ. ಶಾಲಾ ವಾಹನದಿಂದ ಇಳಿದು ತಂದೆಯ ಹಿಂದೆ ಓಡೋಡಿ ಬಂದಿದ್ದ ಮಗು. ಆದರೆ ಮಗಳು ತನ್ನ ಹಿಂದೆ ಬಂದಿದ್ದು ಗಮನಿಸದ ತಂದೆ. ಈ ವೇಳೆ ಚಾಲಕ ವಾಹನ ಹಿಂದಕ್ಕೆ  ತಿರುಗಿಸಿಕೊಳ್ಳುವಾಗ ಹಿಂಬದಿಯಿದ್ದ ಬಾಲಕಿ ಮೇಲೆ ಹರಿಸಿದ್ದಾನೆ. ಬಾಲಕಿ ಹಿಂದಿನ ಚಕ್ರದಡಿ ಸಿಲುಕಿ ಪ್ರಾಣಬಿಟ್ಟಿದ್ದಾಳೆ.

ರಾಯಚೂರಲ್ಲಿ ಭೀಕರ ಅಪಘಾತ: ಶಿಕ್ಷಕರ ದಿನಾಚರಣೆಯಂದೇ ಕಾಲು ಕಳೆದುಕೊಂಡ ನಾಲ್ವರು ಮಕ್ಕಳು!

ಇತ್ತೀಚೆಗಷ್ಟೇ ರಾಯಚೂರು ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ನಾಲ್ವರ ವಿದ್ಯಾರ್ಥಿಗಳಿಗೆ ಕಾಲು ತುಂಡಾಗಿತ್ತು. ಹಲವಾರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.  ಘಟನೆ ಬಳಿಕ ಸರ್ಕಾರ ಶಾಲಾ ವಾಹನಗಳ ತಪಾಸಣೆಗೆ ಚಾಲಕರ ಲೈಸೆನ್ಸ್ ಪರಿಶೀಲನೆಗೆ ಸೂಚಿಸಿದ ಬೆನ್ನಲ್ಲೇ ಕಲಬುರಗಿಯಲ್ಲಿ ಮತ್ತೊಂದು ದುರಂತ ನಡೆದುಹೋಗಿದೆ. ಚಾಲಕನ ನಿರ್ಲಕ್ಷ್ಯ ಮಗುವಿನ ಸಾವಿನ ಕಾರಣ ಎಂದು ಮೃತ ಬಾಲಕಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನೆ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios